ಅಯೋಧ್ಯೆಯ ರಾಮನಿಗೂ ರಾಮನ ಬಂಟ ಹನುಮಂತನ ಜನ್ಮಸ್ಥಳವಿರೋ ಕೊಪ್ಪಳ ಜಿಲ್ಲೆಯ ಜನರಿಗೆ ಹತ್ತಿರದ ನಂಟಿದೆ. ಇದೀಗ
ದೇಶದ ಬಹುಸಂಖ್ಯಾತ ಜನರು ತಮ್ಮ ಕನಸಿನ ರಾಮ ಮಂದಿರ ಉದ್ಘಾಟನೆಯನ್ನು ಕಣ್ತುಂಬ ನೋಡಲು ಕಾತರಿಂದ ಕಾಯುತ್ತಿದ್ದಾರೆ. ಭವ್ಯ ರಾಮಮಂದಿರ ಕಟ್ಟಡ ಮೂರ್ತಿಗಳ ಕೆತ್ತುವ ಕೆಲಸದಲ್ಲಿ ಕರ್ನಾಟದ ಶಿಲ್ಪಿಗಳು ಕೆಲಸ ಮಾಡಿರೋದು ನಮಗೆಲ್ಲ ಹೆಮ್ಮೆಯ ವಿಷಯ. ಈ ಕೆಲಸದಲ್ಲಿ ಗಂಗಾವತಿ ಶಿಲ್ಪಿಯೊಬ್ಬರು ಕೂಡಾ ಭಾಗಿಯಾಗಿದ್ದಾರೆ.
ಶಿಲ್ಪ ಕೆತ್ತನೆಯಲ್ಲಿ ನಿರತನಾಗಿರೋ ಈ ಶಿಲ್ಪಿಯ ಹೆಸರು ಪ್ರಶಾಂತ್ ಸೋನಾರ್. ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ನಿವಾಸಿಯಾಗಿರೋ ಪ್ರಶಾಂತ್ ಅನೇಕ ಚಂದದ ಶಿಲ್ಪಗಳನ್ನು ಕೆತ್ತುವುದರಲ್ಲಿ ಪ್ರಸಿದ್ದರಾಗಿದ್ದಾರೆ. ಇದೀಗ ಅವರಿಗೆ ಮತ್ತೊಂದು ಹೆಮ್ಮೆಯ ಮತ್ತು ಜೀವನದಲ್ಲಿ ಮರೆಯಲಾರದ ಕ್ಷಣಕ್ಕಾಗಿ ಅವರು ಕೂಡಾ ಕಾಯುತ್ತಿದ್ದಾರೆ.
ಯಾಕಂದ್ರೆ ರಾಮ ಮಂದಿರದ ನಿರ್ಮಾಣ ಕೆಲಸದಲ್ಲಿ ಪ್ರಶಾಂತ್ ಕೂಡಾ ಭಾಗಿಯಾಗಿದ್ದಾರೆ. ಹೌದು ರಾಮ ಮಂದಿರದಲ್ಲಿ 45 ದಿನಗಳ ಕಾಲ ಅನೇಕ ಮೂರ್ತಿ ಕೆತ್ತನೆ ಕೆಲಸ ಮಾಡಿದ್ದಾರೆ. ಹನುಮ ಜನ್ಮ ಸ್ಥಳದಿಂದ ತೆರಳಿ ಪ್ರಭು ಶ್ರೀ ರಾಮ ಮಂದಿರದ ಮೂರ್ತಿ ಕೆತ್ತುವ ಕೆಲಸದಲ್ಲಿ ಗಂಗಾವತಿಯ ಶಿಲ್ಪಿ ಪ್ರಶಾಂತ ಸೋನಾರ್ ಎಂಬು ವವರು ಭಾಗವಹಿಸಿ ಕೆತ್ತನೆ ಕೆಲಸ ಮಾಡಿದ್ದಾರೆ.
ಅಕ್ಟೋಬರ್ ಮತ್ತು ನವಂಬರ್ ತಿಂಗಳಲ್ಲಿ ಒಟ್ಟು 45 ದಿನಗಳ ಕಾಲ ಮೂರ್ತಿ ಕೆತ್ತನೆ ಕೆಲಸದಲ್ಲಿ ಪ್ರಶಾಂತ ಭಾಗಿಯಾಗಿ ದೀಪಾವಳಿ ಹಬ್ಬಕ್ಕೆ ವಾಪಸ್ ಊರಿಗೆ ಬಂದಿದ್ದಾರೆ. ಭವ್ಯ ರಾಮ ಮಂದಿರ ನಿರ್ಮಾಣದಲ್ಲಿ ತಾವು ಮಾಡಿರುವ ಮೂರ್ತಿ ಕೆತ್ತುವ ಅಳಿಲು ಸೇವೆ ಮಾಡಿರೋದು ತುಂಬಾ ಹೆಮ್ಮೆ ಎನಿಸುತ್ತದೆ ಅಂತಾರೆ ಪ್ರಶಾಂತ ಸೋನಾರ.
Also Read: ಕೃಷ್ಣನೂರು ಉಡುಪಿಯಲ್ಲಿ ರಾಮದೇವರ ಜೀವನ ಚರಿತ್ರೆಯ ವಾಲ್ ಪೇಂಟಿಂಗ್ ಸ್ಪರ್ಧೆ ಆಯೋಜನೆ
ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಪ್ರಶಾಂತ ಗೆ ಕರೆ ಬಂದಿತ್ತು. ಖುಷಿಖುಷಿಯಾಗಿ ಈ ಕೆಲಸದಲ್ಲಿ ಭಾಗಿಯಾಗಿ ಪ್ರಶಾಂತ ಕೆಲಸ ಮಾಡಿದ್ದಾರೆ. ದೀಪಾವಳಿ ಹಬ್ಬಕ್ಕೆ ಊರಿಗೆ ಬಂದಿದ್ದಾರೆ. ಸದ್ಯ ಲೋಕಾರ್ಪಣೆ ಯ ಬಳಿಕ ಉಳಿದ ಕೆಲಸ ಮಾಡಲು ಕರೆ ಬರುತ್ತೆ, ಬಂದ ನಂತರ ಬಾಕಿ ಇರುವ ಕೆಲಸ ಮಾಡೋಕೆ ಹೋಗ್ತಿನಿ. ಮಂದಿರ ನಿರ್ಮಾಣ ಕಾರ್ಯ ಮಾಡುವಾಗ, ಹೆಚ್ಚಿನ ಭದ್ರತೆಯಲ್ಲಿಯೆ ಕೆಲಸ ಮಾಡ್ತಿದ್ವಿ, ಒಳಗಡೆ ಯಾರಿಗೂ ಮೊಬೈಲ್ ಗೆ ಅವಕಾಶ ಇರಲಿಲ್ಲ. ಇಂತಹ ಒಂದು ಅದ್ಭುತ ರಾಮ ಮಂದಿರದ ಕೆಲದಲ್ಲಿ ಭಾಗಿಯಾಗಿದ್ದು ಸಂತಸದ ಜೊತೆಗೆ ಹೆಮ್ಮೆ ಆಗ್ತಿದೆ ಎಂದಿದ್ದಾರೆ ಶಿಲ್ಪಿ ಪ್ರಶಾಂತ.
ಶತಕೋಟಿ ಹಿಂದೂಗಳ ಕನಸಿನ ರಾಮ ಮಂದಿರ ಕೆಲವೆ ದಿನಗಳಲ್ಲಿ ಉದ್ಘಾಟನೆ ಯಾಗದಲಿದೆ. ಇಡಿ ವಿಶ್ವವೇ ಈ ಮಂದಿರದತ್ತ ಮುಖ ಮಾಡಲಿದೆ. ಇಂತಹ ಅದ್ಬುತಗಳಲ್ಲಿ ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕ ಪ್ರಶಾಂತ ನಮ್ಮ ಗಂಗಾವತಿ ಯವರು ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ