BMTC, KSRTC Buses: ನಾಳೆಯಿಂದ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸಲು ಈ ನಿಯಮ ಪಾಲಿಸಲೇಬೇಕು

| Updated By: guruganesh bhat

Updated on: Jun 20, 2021 | 3:28 PM

ಸಂಜೆ 7 ಗಂಟೆ ನಂತರ ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ. ಜತೆಗೆ ಬೆಳಗ್ಗೆ 6 ಗಂಟೆಯ ಮುನ್ನವೂ ಬಿಎಂಟಿಸಿ ಬಸ್ ಸಂಚರಿಸುವುದಿಲ್ಲ. ಬಿಎಂಟಿಸಿ ಸಿಬ್ಬಂದಿ 8 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡುವಂತಿಲ್ಲ.

BMTC, KSRTC Buses: ನಾಳೆಯಿಂದ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸಲು ಈ ನಿಯಮ ಪಾಲಿಸಲೇಬೇಕು
ಬಿಎಂಟಿಸಿ ಬಸ್
Follow us on

ಬೆಂಗಳೂರು: ನಾಳೆಯಿಂದ ಬಸ್​ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಸಿದ್ದತೆ ನಡೆಸಿದ್ದು, ಮೊದಲ ಹಂತದಲ್ಲಿ 2 ಸಾವಿರ ಬಿಎಂಟಿಸಿ ಬಸ್​ಗಳು ಸೇವೆ ಒದಗಿಸಲಿವೆ. ಬೆಳಗ್ಗೆ 6ರಿಂದ ಸಂಜೆ 7 ಗಂಟೆಯವರೆಗೆ ಬಿಎಂಟಿಸಿ ಬಸ್ ಸಂಚರಿಸಲಿದ್ದು, ಸಂಜೆ 7 ಗಂಟೆ ನಂತರ ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ. ಜತೆಗೆ ಬೆಳಗ್ಗೆ 6 ಗಂಟೆಯ ಮುನ್ನವೂ ಬಿಎಂಟಿಸಿ ಬಸ್ ಸಂಚರಿಸುವುದಿಲ್ಲ. ಬಿಎಂಟಿಸಿ ಸಿಬ್ಬಂದಿ 8 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡುವಂತಿಲ್ಲ. ಪ್ರತಿ ಡಿಪೋದಲ್ಲೂ 5 ಹೆಚ್ಚುವರಿ ಬಸ್‌ಗಳು ಇರಬೇಕು. ಬಸ್‌ಗಳಲ್ಲಿ ಮಾರ್ಗಸೂಚಿ ಫಲಕ ಕಡ್ಡಾಯವಾಗಿರಬೇಕು ಮತ್ತು ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.

ಎರಡು ಹಂತದ ಕೊವಿಡ್ ಲಸಿಕೆ ಪಡೆದುಕೊಂಡ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.  ಸಿಬ್ಬಂದಿ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಬಸ್ ಗೆ ಆಗಿಂದಾಗೆ ಸ್ಯಾನಿಟೈಸರ್ ಸಿಂಪಡಣೆ ಮಾಡುವಂತೆ ಸೂಚನೆ ನೀಡಲಾಗಿದೆ. ಪ್ರಯಾಣಿಕರು ಮೂಗು, ಬಾಯಿ ಮುಚ್ಚಿಕೊಳ್ಳುವಂತೆ ಮಾಸ್ಕ್ ಧರಿಸಬೇಕು. ಮಾಸ್ಕ್ ಇಲ್ಲದಿದ್ದರೆ ಬಸ್ ಹತ್ತುವಂತಿಲ್ಲ
ಗುಂಪು ಗುಂಪು ಸೇರುವಂತಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಂಡು  ಬಸ್ ಹತ್ತಬೇಕು ಎಂದು ನಿರ್ದೇಶನ ನೀಡಲಾಗಿದೆ.

ಬಿಎಂಟಿಸಿ ಏಪ್ರಿಲ್‌ ತಿಂಗಳ ಮಾಸಿಕ ಪಾಸ್ ಅವಧಿ ವಿಸ್ತರಿಸಲಾಗಿದೆ.  ಹಾಲಿ ಇರುವ ಮಾಸಿಕ ಪಾಸ್‌ ಅವಧಿ ಜುಲೈ 8ರವರೆಗೂ ವಿಸ್ತರಣೆಗೊಂಡಿದೆ. ಒಟ್ಟು 2,000 ಬಸ್​ಗಳನ್ನು ಸೇವೆಗೆ ಒದಗಿಸಲು ಬಿಎಂಟಿಸಿ ನಿರ್ಧರಿಸಿದ್ದು, ಪೂರ್ವ ವಲಯದಲ್ಲಿ 350, ಪಶ್ಚಿಮ ವಲಯದಲ್ಲಿ 400, ಉತ್ತರ ವಲಯದಲ್ಲಿ 500, ದಕ್ಷಿಣ ವಲಯದಲ್ಲಿ 400, ಈಶಾನ್ಯ ವಲಯದಲ್ಲಿ 350 ಬಸ್​ಗಳ ಓಡಾಟಕ್ಕೆ ಸಿದ್ಧತೆ ನಡೆಸಲಾಗಿದೆ. ಬೆಳಗ್ಗೆ 8 ರಿಂದ 11 ಹಾಗೂ ಸಂಜೆ 4 ರಿಂದ 7 ಗಂಟೆವರೆಗೂ ಹೆಚ್ಚುವರಿ ಬಸ್ ಓಡಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಕೆಎಸ್​ಆರ್​ಟಿಸಿ ಮಾರ್ಗಸೂಚಿ ಇಲ್ಲಿದೆ
ನಾಳೆಯಿಂದ ಮೈಸೂರು ಜಿಲ್ಲೆ ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ಕೆಎಸ್​ಆರ್​ಟಿಸಿ ಬಸ್​ ಸೇವೆ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 3000 ಬಸ್​ಗಳು ಸಂಚರಿಸಲಿವೆ. ಪ್ರಯಾಣಿಕರು ಕೊವಿಡ್ 19 ತಡೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೆಎಸ್ಆರ್​ಟಿಸಿ ಸೂಚಿಸಿದೆ. ಆದರೆ ಅಂತಾರಾಜ್ಯಗಳಿಗೆ ಕೆಎಸ್​ಆರ್​ಟಿಸಿ ಬಸ್ ಸೇವೆ ಸದ್ಯ ಲಭ್ಯವಿಲ್ಲ. ಮುಂದಿನ ದಿನಗಳಲ್ಲಿ ಅಂತರಾಜ್ಯ ಬಸ್ ಸಂಚಾರದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: Karnataka Unlock: 2ನೇ ಹಂತದ ಅನ್​ಲಾಕ್: ಸೋಮವಾರದಿಂದಲೇ ಸರ್ಕಾರಿ ಬಸ್ ಓಡಾಟ ಆರಂಭ, ಎಲ್ಲಾ ಅಂಗಡಿ ಓಪನ್, ಶರತ್ತುಗಳು ಅನ್ವಯ

ಕೊವಿಡ್ 19ನಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂ.ಪರಿಹಾರ ಕೊಡಲು ಸಾಧ್ಯವೇ ಇಲ್ಲ: ಕೇಂದ್ರ ಸರ್ಕಾರದಿಂದ ಸುಪ್ರೀಂಕೋರ್ಟ್​ಗೆ ಅಫಿಡವಿಟ್​

(KSRTC BMTC Bus service starts from tomorrow here is the full Guidelines)

Published On - 3:20 pm, Sun, 20 June 21