KSRTC ಬಸ್ ಡಿಕ್ಕಿ, ಬೈಕ್ ಸವಾರರಿಬ್ಬರ ದುರ್ಮರಣ
ಹಾಸನ: KSRTC ಬಸ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೇಲೂರು ತಾಲೂಕಿನ ಬೊಮ್ಮಡಿಹಳ್ಳಿ ಬಳಿ ಸಂಭವಿಸಿದೆ. ಲಾರಿ ಓವರ್ ಟೇಕ್ ಮಾಡಲು ಹೋದಾಗ ದುರಂತ ನಡೆದಿದೆ. ಬೇಲೂರು-ಬಿಕ್ಕೋಡು ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಲಾರಿ ಓವರ್ ಟೇಕ್ ಮಾಡಲು ಬೈಕ್ ಸವಾರರು ಯತ್ನಿಸಿದ್ದಾರೆ. ಈ ವೇಳೆ ಬಸ್ ಕೆಳಗೆ ಬೈಕ್ ಸಿಲುಕಿ ಮದಘಟ್ಟ ಗ್ರಾಮದ ಅಭಿ(21), ಚಂದನ್(22) ಸಾವಿಗೀಡಾಗಿದ್ದಾರೆ. ಘಟನಾ ಸ್ಥಳಕ್ಕೆ ಬೇಲೂರು ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾಸನ: KSRTC ಬಸ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೇಲೂರು ತಾಲೂಕಿನ ಬೊಮ್ಮಡಿಹಳ್ಳಿ ಬಳಿ ಸಂಭವಿಸಿದೆ. ಲಾರಿ ಓವರ್ ಟೇಕ್ ಮಾಡಲು ಹೋದಾಗ ದುರಂತ ನಡೆದಿದೆ.
ಬೇಲೂರು-ಬಿಕ್ಕೋಡು ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಲಾರಿ ಓವರ್ ಟೇಕ್ ಮಾಡಲು ಬೈಕ್ ಸವಾರರು ಯತ್ನಿಸಿದ್ದಾರೆ. ಈ ವೇಳೆ ಬಸ್ ಕೆಳಗೆ ಬೈಕ್ ಸಿಲುಕಿ ಮದಘಟ್ಟ ಗ್ರಾಮದ ಅಭಿ(21), ಚಂದನ್(22) ಸಾವಿಗೀಡಾಗಿದ್ದಾರೆ. ಘಟನಾ ಸ್ಥಳಕ್ಕೆ ಬೇಲೂರು ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.