KSRTC ಬಸ್​ನಲ್ಲಿ ಯುವತಿಗೆ ಕಿರುಕುಳ: ‘ಪೋಲಿ ಕಂಡಕ್ಟರ್’​ ಅರೆಸ್ಟ್

|

Updated on: Feb 17, 2020 | 2:24 PM

ಬೆಂಗಳೂರು: ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕಿರುವ ಸರ್ಕಾರಿ ಬಸ್​ನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಅದೂ KSRTC ಬಸ್​ನಲ್ಲಿ ಡ್ಯೂಟಿಯಲ್ಲಿರುವಾಗಲೇ ಮಹಿಳೆ ಜೊತೆ ಕಂಡಕ್ಟರ್ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಪೋಲಿ ಕಂಡಕ್ಟರ್’ ಬೆಂಗಳೂರಿನಿಂದ ಕುಣಿಗಲ್, ಹಾಸನ, ಧರ್ಮಸ್ಥಳ ಮಾರ್ಗವಾಗಿ ಪುತ್ತೂರಿಗೆ ಸಂಚರಿಸುವ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಕೃತ್ಯ ನಡೆದಿದೆ. KSRTC ಕಂಡಕ್ಟರ್‌ ಶಿಶುಹರಿ ಶಾಲುರ್ ಎಂಬಾತ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಕಂಡಕ್ಟರ್ ವರ್ತನೆಯನ್ನು ಸ್ವತಹ ಮಹಿಳೆಯೇ ವಿಡಿಯೋ ಮಾಡಿದ್ದಾಳೆ. […]

KSRTC ಬಸ್​ನಲ್ಲಿ ಯುವತಿಗೆ ಕಿರುಕುಳ: ‘ಪೋಲಿ ಕಂಡಕ್ಟರ್’​ ಅರೆಸ್ಟ್
Follow us on

ಬೆಂಗಳೂರು: ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕಿರುವ ಸರ್ಕಾರಿ ಬಸ್​ನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಅದೂ KSRTC ಬಸ್​ನಲ್ಲಿ ಡ್ಯೂಟಿಯಲ್ಲಿರುವಾಗಲೇ ಮಹಿಳೆ ಜೊತೆ ಕಂಡಕ್ಟರ್ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಪೋಲಿ ಕಂಡಕ್ಟರ್’
ಬೆಂಗಳೂರಿನಿಂದ ಕುಣಿಗಲ್, ಹಾಸನ, ಧರ್ಮಸ್ಥಳ ಮಾರ್ಗವಾಗಿ ಪುತ್ತೂರಿಗೆ ಸಂಚರಿಸುವ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಕೃತ್ಯ ನಡೆದಿದೆ. KSRTC ಕಂಡಕ್ಟರ್‌ ಶಿಶುಹರಿ ಶಾಲುರ್ ಎಂಬಾತ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಕಂಡಕ್ಟರ್ ವರ್ತನೆಯನ್ನು ಸ್ವತಹ ಮಹಿಳೆಯೇ ವಿಡಿಯೋ ಮಾಡಿದ್ದಾಳೆ. ಬಳಿಕ ಬೆಳ್ಳೂರು ಕ್ರಾಸ್ ಬಳಿ ಸರ್ಕಾರಿ ಬಸ್ ತಲುಪಿದಾಗ ನಿರ್ವಾಹಕನಿಗೆ ಮಹಿಳೆ ಕಪಾಳ ಮೋಕ್ಷ ಮಾಡಿದ್ದಾಳೆ.

ಕಂಡಕ್ಟರ್​ ಕಪಾಳಕ್ಕೆ ಹೊಡೆದು ಮಾರ್ಗ ಮಧ್ಯೆಯೇ ಬಸ್​ನಿಂದ ಇಳಿದು ಮಹಿಳೆ ಹೊರನಡೆದಿದ್ದಾಳೆ. ನಂತರ ಘಟನೆಯ ಬಗ್ಗೆ ಫೇಸ್​ಬುಕ್​ನಲ್ಲಿ ವಿವರಣೆ ನೀಡಿದ್ದಾಳೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಂಡಕ್ಟರ್ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ.

ಯುವತಿ ಜತೆ ಅಸಭ್ಯ ವರ್ತನೆ ಪ್ರಕರಣ ಸಂಬಂಧ ಆರೋಪಿ ಕಂಡಕ್ಟರ್ ಶಿಶುಹರಿ ಶಾಲುರ್​ನನ್ನು ನಿನ್ನೆ ಬಂಧಿಸಲಾಗಿದೆ. ಯುವತಿ ನೀಡಿದ್ದ ದೂರಿನ ಮೇರೆಗೆ ಶಿಶುಹರಿನನ್ನು ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.  ನಿನ್ನೆ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿದ್ದ ಸಂತ್ರಸ್ತೆಯ ಪ್ರಿಯಕರ, ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.  ಈ ಬಗ್ಗೆ ದೂರು ನೀಡಿದ್ದ ಕಂಡಕ್ಟರ್ ಶಿಶುಹರಿ ಶಾಲುರ್ ದೂರು ನೀಡಿದ್ದರು.

Published On - 12:31 pm, Mon, 17 February 20