Ambaari Utsav Bus: ಅಂತಾರಾಜ್ಯ ಆರಾಮದಾಯಕ ಪ್ರಯಾಣಕ್ಕಾಗಿ ಬರಲಿದೆ KSRTCಯ ಅಂಬಾರಿ ಉತ್ಸವ

|

Updated on: Feb 21, 2023 | 1:01 PM

ಅಂತಾರಾಜ್ಯ ಪ್ರಯಾಣಿಕರಿಗಾಗಿ ಫೆಬ್ರವರಿ 24 ರಿಂದ ಕೆಎಸ್​ಆರ್​ಟಿಸಿಯ '9600 ವೋಲ್ವೋ ಮಲ್ಟಿ-ಆಕ್ಸಲ್ ಸ್ಲೀಪರ್​' "ಅಂಬಾರಿ ಉತ್ಸವ" ಬಸ್​​ಗಳು​ ರಸ್ತೆಗೆ ಇಳಿಯಲಿವೆ.

Ambaari Utsav Bus: ಅಂತಾರಾಜ್ಯ ಆರಾಮದಾಯಕ ಪ್ರಯಾಣಕ್ಕಾಗಿ ಬರಲಿದೆ KSRTCಯ ಅಂಬಾರಿ ಉತ್ಸವ
ಅಂಬಾರಿ ಉತ್ಸವ
Follow us on

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಆಗಾಗ ಹೊಸ ಹೊಸ ಬಸ್​ಗಳನ್ನು ಪರಿಚಯಿಸುತ್ತಿರುತ್ತದೆ. ಬಸ್​ಗಳ ಬಣ್ಣಗಳು ಬಹಳ ಆಕರ್ಷಣೆಯಾಗಿರುತ್ತವೆ. ಮತ್ತು ಕೆಎಸ್​ಆರ್​ಟಿಸಿ ಬಸ್​ಗಳು ದೇಶದಲ್ಲೇ ಹೆಸರುವಾಸಿಯಾಗಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈಗ ಮತ್ತೆ ಹೊಸದಾಗಿ ಕೆಲವು ಬಸ್​ಗಳನ್ನು ರಾಜ್ಯದ ಜನರಿಗೆ ಪರಿಚಯಿಸಲು ಮುಂದಾಗಿದೆ. ಹೌದು ಅಂತಾರಾಜ್ಯ ಪ್ರಯಾಣಿಕರಿಗಾಗಿ ವಿಶೇಷ ಬಸ್​ವೊಂದನ್ನು ರಸ್ತೆಗೆ ಇಳಿಸಲಿದೆ. ‘9600 ವೋಲ್ವೋ ಮಲ್ಟಿ-ಆಕ್ಸಲ್ ಸ್ಲೀಪರ್​’ ಬಸ್​ಗೆ “ಅಂಬಾರಿ ಉತ್ಸವ” (Ambaari Utsav Bus) ಎಂದು ನಾಮಕರಣ ಮಾಡಿದ್ದು ಈ ಬಸ್​​ಗಳು ಫೆಬ್ರವರಿ 24 ರಿಂದ ಪ್ರಯಾಣ ಆರಂಭಿಸಲಿವೆ.

ಇದು ಯುರೋಪಿಯನ್​ ಮಾದರಿ ಎಸಿ-ಸ್ಲೀಪರ್​​ ಬಸ್​ ಆಗಿದೆ. ಈ ಬಸ್​​​ಗಳು ಬೆಂಗಳೂರು ನಗರದಿಂದ ಅಂತರಾಜ್ಯಕ್ಕೆ ಸಂಪರ್ಕ ಕಲ್ಪಿಸುತ್ತವೆ. ಬೆಂಗಳೂರಿನಿಂದ ಮಂಗಳೂರು, ಕುಂದಾಪುರ, ಪಣಜಿ, ಪುಣೆ, ಹೈದರಾಬಾದ್​, ಸಿಕಂದ್ರಾಬಾದ್​, ಎರನಾಕುಲಂ, ತ್ರಿಶೂರ್ ಮತ್ತು ತಿರುವನಂಥಪುರಂಗೆ ಸಂಚರಿಸಲಿವೆ. ಪ್ರತಿ ಬಸ್​ 40+2 ಆಸನಗಳನ್ನು ಹೊಂದಿದೆ.

ಕೆಎಸ್​ಆರ್​ಟಿಸಿ ಸದ್ಯ 13 ಬಸ್​ಗಳನ್ನು ಬಿಡಲಿದ್ದು, ಕೆಲವು ದಿನಗಳ ನಂತರ 35ಕ್ಕೂ ಹೆಚ್ಚೂ ಬಸ್​​​​​ಗಳನ್ನು ಬಿಡುತ್ತದೆ. ಈ ಬಸ್​ಗಳು ನಿಮಗೆ ಐಷಾರಾಮಿ ಪ್ರಯಾಣದ ಅನುಭವ ನೀಡಲಿವೆ. ಈ ಬಸ್​ಗಳು ಅಂತಾರಾಜ್ಯದ ಪ್ರಮುಖ ನಗರಗಳಿಗೆ ತಲುಪಲು 10 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಕೆಎಸ್​ಆರ್​ಟಿಸಿ ಹೇಳಿದೆ.

ಇನ್ನು ಈ ಅಂಬಾರಿ ಉತ್ಸವ ಹೆಸರನ್ನು ಸಾರ್ವಜನಿಕರು ನೀಡಿದ್ದಾರೆ. ಈ ಆರಾಮದಾಯಕ ಬಸ್​ ರಸ್ತೆಗಳಿಗೆ ಇಳಿದರೆ ಖಾಸಗಿ ಬಸ್​​ಗಳೊಂದಿಗೆ ಪೈಪೋಟಿ ನೀಡಬಹುದಾಗಿದೆ. ಮತ್ತು ಖಾಸಗಿ ಬಸ್​ಗಳಿಂದ ಕೆಎಸ್​ಆರ್​ಟಿಸಿಗೆ ಆಗುವ ನಷ್ಟವನ್ನು ತಪ್ಪಿಸಬಹುದಾಗಿದೆ.

ಅಂಬಾರಿ ಉತ್ಸವ ಬಸ್​​ನ ವಿಶೇಷತೆಗಳು

1. 40 ಆಸನಗಳುಳ್ಳ ಬಸ್ ಪ್ರಯಾಣಿಕರು ಮಲಗುವ ಮತ್ತು ಕುಳಿತುಕೊಳ್ಳುವ ಬೆಸ್ಟ್ ಇನ್ ಕ್ಲಾಸ್ ಹೆಡ್ ರೂಮ್ ಸೌಲಭ್ಯ ಇದೆ.

2. ಪಿಯು ಫೋಮ್ ಸ್ಲೀಪರ್ ಆಸನ ಜೊತೆಗೆ ಬ್ಯಾಕ್ ರೆಸ್ಟ್ ಪ್ರೀಮಿಯಂ ದರ್ಜೆ ಹೊಂದಿದೆ.

3. ಬರ್ತ್ ಕ್ಯೂಬಿಕಲ್ ಇಂಟಿಗ್ರೇಟೆಡ್ ಪರಿಕರ, ರೀಡಿಂಗ್ ಲೈಟ್ಸ್, ಏರ್ ವೆಂಟ್ಸ್, USB ಪೋರ್ಟ್, ಮೊಬೈಲ್ ಹೋಲ್ಡರ್ ಸೇರಿ ಪ್ರಯಾಣಿಕರಿಗೆ ಹಲವು ಸೌಲಭ್ಯ ಸಿಗಲಿದೆ.

4. 12 ಸ್ಪೀಡ್​ ಐ ಶಿಫ್ಟ್ ಮೆಕ್ಯಾನಿಕಲ್ ಗೇರ್ ಬಾಕ್ಸ್, ಅಡ್ವಾನ್ಸ್ ಇಂಟೆಲಿಜೆಂಟ್ ಶಿಫ್ಟಿಂಗ್ ತಂತ್ರಜ್ಞಾನ, 9600 ಮಾದರಿಯಲ್ಲಿ ಕವಚ ಜೊತೆಗೆ ಸುಧಾರಿತ ಅಬ್ಸರ್ವರ್

5. ಗರಿಷ್ಠ ಪ್ಯಾಸೆಂಜರ್ ಕಾರ್ಗೋ ಶೇಖರಣೆ ವ್ಯವಸ್ಥೆ

6. ಉನ್ನತ ದರ್ಜೆಯ ಪರೀಕ್ಷಿತ ಮತ್ತು ಮೌಲ್ಲೀಕರಿಸಿದ ವಸ್ತುಗಳನ್ನು ಬಸ್​ಗೆ ಬಳಸಲಾಗಿದೆ.

7. ಸಂಪೂರ್ಣ ಪೆನೆಲಿಂಗ್, ಬಂಡಿಂಗ್ ಪ್ರಕ್ರಿಯೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ

ವೋಲ್ವೋ ಅಂಬಾರಿ ಉತ್ಸವ ಬಸ್​ಗೆ ಇಂದು (ಫೆ. 21) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದ ಎದರು ಚಾಕನೆ ನೀಡಲಿದ್ದಾರೆ. ಬಳಿಕ ಮಾತನಾಡಿದ ಅವರು ರೈಲು ಮಾದರಿಯಲ್ಲೇ ಬಸ್​ ಒಳಭಾಗದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ದೂರದ ಪ್ರಯಾಣಕ್ಕೆ ಈ ಬಸ್​​ಗಳು ಬಹಳ ಅನುಕೂಲವಾಗುತ್ತವೆ. ಲಾಭದಲ್ಲಿದ್ದ ಸಾರಿಗೆ ನಿಗಮಕ್ಕೆ ಕೊರೊನಾ ದೊಡ್ಡ ಹೊಡೆತ ನೀಡಿತ್ತು. ಆಗ ನಮ್ಮ ಸರ್ಕಾರ 4 ನಿಗಮಗಳಿಗೆ 4,600 ಕೋಟಿ ಹಣ ನೀಡಿದೆ ಎಂದು ಹೇಳಿದರು.

ವಿದ್ಯಾರ್ಥಿನಿಯರು, ಮಹಿಳೆಯರಿಗೆ ಉಚಿತ ಬಸ್​​ ಪಾಸ್​ ವಿತರಣೆ ಮಾಡಲು ಬಜೆಟ್​ನಲ್ಲಿ ಘೋಷಣೆ ಮಾಡಿದ್ದೇವೆ.  ಏ.1ರಿಂದ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಪಾಸ್ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:14 am, Tue, 21 February 23