Telemedicine: ಟೆಲಿಮೆಡಿಸಿನ್ ಸೇವೆಯನ್ನು ದೇಶಾದ್ಯಂತ ವಿಸ್ತರಿಸುವಂತೆ ಲೈಂಗಿಕ ಕಾರ್ಯಕರ್ತರಿಂದ ಸರ್ಕಾರಕ್ಕೆ ಒತ್ತಾಯ

ಫೋನ್ ಮಾಡು ಎಂಬುದು ಟೆಲಿಮೆಡಿಸಿನ್ ಆಧಾರಿತ ವಿಧಾನವಾಗಿದ್ದು, ಲೈಂಗಿಕ ಕಾರ್ಯಕರ್ತರು ವಾಟ್ಸಾಪ್, ಫೋನ್ ಕರೆಗಳು ಅಥವಾ ಎಸ್‌ಎಂಎಸ್ ಬಳಸಿ ವೈದ್ಯರೊಂದಿಗೆ ಸಂಪರ್ಕದಲ್ಲಿರುವುದಾಗಿದೆ. ಇದರಿಂದಾಗಿ ಯಾವುದೇ ಸಮಸ್ಯೆಯನ್ನು ಮುಕ್ತವಾಗಿ ವೈದ್ಯರೊಂದಿಗೆ ಮಾತನಾಡಬಹುದು ಮತ್ತು ಎಲ್ಲವೂ ಗೌಪ್ಯವಾಗಿರುತ್ತದೆ.

Telemedicine: ಟೆಲಿಮೆಡಿಸಿನ್ ಸೇವೆಯನ್ನು ದೇಶಾದ್ಯಂತ ವಿಸ್ತರಿಸುವಂತೆ ಲೈಂಗಿಕ ಕಾರ್ಯಕರ್ತರಿಂದ ಸರ್ಕಾರಕ್ಕೆ ಒತ್ತಾಯ
Follow us
ಅಕ್ಷತಾ ವರ್ಕಾಡಿ
|

Updated on:Feb 21, 2023 | 11:45 AM

ಟೆಲಿಮೆಡಿಸಿನ್​ ಸೇವೆಯನ್ನು ದೇಶಾದ್ಯಂತ ವಿಸ್ತರಿಸುವಂತೆ ಲೈಂಗಿಕ ಕಾರ್ಯಕರ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಫೋನ್ ಮಾಡು ಎಂಬುದು ಟೆಲಿಮೆಡಿಸಿನ್ ಆಧಾರಿತ ವಿಧಾನವಾಗಿದ್ದು, ಲೈಂಗಿಕ ಕಾರ್ಯಕರ್ತರ  ವಾಟ್ಸಾಪ್, ಫೋನ್ ಕರೆಗಳು ಅಥವಾ ಎಸ್‌ಎಂಎಸ್ ಬಳಸಿ ವೈದ್ಯರೊಂದಿಗೆ ಸಂಪರ್ಕದಲ್ಲಿರುವುದಾಗಿದೆ. ಇದು ಗೌಪ್ಯವಾಗಿರುತ್ತದೆ. ಕೋವಿಡ್ ಸಮಯದಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದ್ದ ಈ ಟೆಲಿಮೆಡಿಸಿನ್ ಸೇವೆಯನ್ನು ದೇಶಾದ್ಯಂತ ವಿಸ್ತರಿಸುವಂತೆ ಕರ್ನಾಟಕದ ಲೈಂಗಿಕ ಕಾರ್ಯಕರ್ತೆಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಸೋಮವಾರ  ಗೃಹ ಸಚಿವ ಆರಗ ಜ್ಞಾನೇಂದ್ರ ಫೋನ್ ಮಾಡು ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಆಶೋದಯ ಆವಿಷ್ಕಾರವು ಲೈಂಗಿಕ ಕಾರ್ಯಕರ್ತರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ರೀತಿಯಲ್ಲಿ ಬದಲಾವಣೆಗಳನ್ನು ಹೇಗೆ ಉತ್ತೇಜಿಸಿತು ಮತ್ತು ಒದಗಿಸಿದೆ ಎಂಬುದನ್ನು ದಾಖಲಿಸುತ್ತದೆ.

ಈ ಬಗ್ಗೆ ಮಾತನಾಡಿದ ಮಹಿಳಾ ಲೈಂಗಿಕ ಕಾರ್ಯಕರ್ತೆ ದೇವಿಕಾ ಈ ಟೆಲಿಮೆಡಿಸಿನ್ ಆಧಾರಿತ ವಿಧಾನವು ನಮ್ಮ ಸಮುದಾಯಕ್ಕೆ ಕಲ್ಪಿಸಿರುವ ವಿಶೇಷ ಆರೋಗ್ಯ ಸೇವೆ. ಇದರಿಂದಾಗಿ ನಮ್ಮ ಯಾವುದೇ ಸಮಸ್ಯೆಯನ್ನು ಮುಕ್ತವಾಗಿ ವೈದ್ಯರೊಂದಿಗೆ ಮಾತನಾಡಬಹುದು ಮತ್ತು ಎಲ್ಲವೂ ಗೌಪ್ಯವಾಗಿರುತ್ತದೆ. ಅನೇಕ ಲೈಂಗಿಕ ಕಾರ್ಯಕರ್ತರು ಮುಖಾಮುಖಿ ವೈದ್ಯರ ಭೇಟಿಗಿಂತ ‘ಫೋನ್ ಮಾಡು’ಗೆ ಆದ್ಯತೆ ನೀಡುತ್ತಿದ್ದಾರೆ. ಏಕೆಂದರೆ ಈ ಸೇವೆಯೂ ಗುರುತು ಪತ್ತೆ ಇಲ್ಲದೇ ಅವರು ಸಂಕೋಚವಿಲ್ಲದೆ ಮುಕ್ತವಾಗಿ ಮಾತನಾಡಬಹುದು, ಆದರೆ ಮುಖಾಮುಖಿ ವೈದ್ಯರನ್ನು ಸಂಪರ್ಕಿಸಿದಾಗ ಸಂಪೂರ್ಣವಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ನಾಚಿಕೆ ಪಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಚಿಕ್ಕ ಗಾಯಗಳಾದಾಗ ನಿರ್ಲಕ್ಷ್ಯಿಸುವ ಅಭ್ಯಾಸ ನಿಮಗಿದೆಯೇ? ಇದು ಮಾರಣಾಂತಿಕ ಕಾಯಿಲೆಗೆ ಕಾರಣವಾಗಬಹುದು

ಈ ಟೆಲಿಮೆಡಿಸಿನ್ ಸೇವೆಯನ್ನು ದೇಶಾದ್ಯಂತ ವಿಸ್ತರಿಸುವಂತೆ ಅಂದರೆ ಗುಜರಾತ್, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಂತಹ ಎರಡು ಅಥವಾ ಮೂರು ಸ್ಥಳಗಳಲ್ಲಿ ಇದನ್ನು ಜಾರಿಗೆ ತರಬಹುದು ಎಂದು ಆಶೋದಯ ತಂಡವು ಹೇಳುತ್ತದೆ. ಈ ಕುರಿತು 8,000 ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತರ ಸಮುದಾಯವಾದ ಆಶೋದಯ, ಕಾರ್ಯಕ್ರಮವನ್ನು ಮುಂದುವರಿಸಲು ಬದ್ಧವಾಗಿದೆ ಎಂದು ಹೇಳುತ್ತದೆ. ವೈದ್ಯರ ನೇಮಕಾತಿಗಳನ್ನು ನಿಗದಿಪಡಿಸಲು ಮಧ್ಯವರ್ತಿಗಳ ಮೇಲಿನ ಅವಲಂಬನೆಯನ್ನು ತೊಡೆದುಹಾಕಲು ಆಶೋದಯ ಹೊಸ ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ. ಇದರಿಂದಾಗಿ ವೈದ್ಯರ ಸಮಾಲೋಚನೆ ಸೇವೆಯನ್ನು 24X7 ಒದಗಿಸುವ ಮೂಲಕ ವೈದ್ಯರೊಂದಿಗೆ ಮುಕ್ತವಾಗಿ ಸಂವಹನ ನಡೆಸಬಹುದಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:47 am, Tue, 21 February 23