ಬೆಂಗಳೂರು: ಕರ್ನಾಟಕ ಸರ್ಕಾರ ಶಕ್ತಿ ಯೋಜನೆ (Shakti Yojana) ಅಡಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದೆ. ಇದರಿಂದ ಸಾರಿಗೆ ನಿಗಮಕ್ಕೆ ಸಾಕಷ್ಟು ಹೊರೆ ಆಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದರ ನಡುವೆಯೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಶನಿವಾರ (ಜು.01) ನಿಗದಿತ ದಿನಾಂಕದಂದೇ 35,000 ಸಿಬ್ಬಂದಿಗೆ ವೇತನ ಜಮಾ ಮಾಡಿದೆ.
ಒಂಬತ್ತು ತಿಂಗಳ ಹಿಂದೆ, ನಾವು ಎಲ್ಲಾ ಉದ್ಯೋಗಿಗಳಿಗೆ ಪ್ರತಿ ತಿಂಗಳ ಮೊದಲನೇ ತಾರೀಖಿನಂದು ವೇತನವನ್ನು ನೀಡುವುದಾಗಿ ಭರವಸೆ ನೀಡಿದ್ದೇವು. ಅದರಂತೆ ಪ್ರತಿ ತಿಂಗಳು ಒಂದನೇ ತಾರಿಕಿನಿಂದು ಸಿಬ್ಬಂದಿಗೆ ವೇತ ನೀಡಿದೇವು. ಇದು ಕೆಲವರಿಗೆ ದಿಗ್ಭ್ರಮೆಗೊಳಿಸಿತು. ಇದೀಗ ಶಕ್ತಿ ಯೋಜನೆ ಜಾರಿಯಾದ ನಂತರವೂ ನಾವು ಒಂದನೇ ತಾರಿಕಿನಂದೇ ವೇತನ ನೀಡುವ ಮೂಲಕ ನಾವು ಮಾತಿಗರ ಬದ್ಧರಾಗಿದ್ದೇವೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿ ಹೇಳಿದರು.
ನಿಗಮಕ್ಕೆ ವೇತನ ನೀಡಲು ತಿಂಗಳಿಗೆ ಸರಾಸರಿ 140 ಕೋಟಿ ರೂ. ಅಗತ್ಯವಿದೆ. ಸದ್ಯಕ್ಕೆ ಶಕ್ತಿ ಯೋಜನೆಗೆ ಸರ್ಕಾರವು ಹೇಗೆ ಮರುಪಾವತಿ ಮಾಡಲಿದೆ ಎಂಬುದರ ಕುರಿತು ಸಾರಿಗೆ ನಿಗಮಗಳು ಅಸ್ಪಷ್ಟವಾಗಿವೆ. ಜುಲೈ 7 ರಂದು ಬಜೆಟ್ ಮಂಡನೆ ನಂತರ ಸ್ಪಷ್ಟತೆ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Shakti Scheme: ಶಕ್ತಿ ಯೋಜನೆ ಜಾರಿ ನಂತರ ಕರ್ನಾಟಕದ ಸಾರಿಗೆ ನಿಗಮಗಳ ಸರಾಸರಿ ಆದಾಯದಲ್ಲಿ ಹೆಚ್ಚಳ
ವೆಚ್ಚದ ಪ್ರಮುಖ ಅಂಶವೆಂದರೆ ಸಂಬಳ, ಡೀಸೆಲ್ ಖರೀದಿ, ಗ್ರಾಚ್ಯುಟಿ, ಭವಿಷ್ಯ ನಿಧಿ (Provident Fund) ಮತ್ತು ಬಿಡಿ ಭಾಗಗಳು. ಸರ್ಕಾರವು ಮರುಪಾವತಿಯನ್ನು ನೀಡಿದಾಗ ಹಣವನ್ನು ಉಳಿದ ವೆಚ್ಚಕ್ಕೆ ಬಳಸಲಾಗುತ್ತದೆ ಎಂಬ ಅಂಶ ಸಾರಿಗೆ ನಿಗಮದ ಮೂಲಗಳು ತಿಳಿಸಿವೆ.
ನಾಲ್ಕು ನಿಗಮದಲ್ಲಿ 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಮಾಸಿಕ ವೇತನ ನೀಡಲು 400 ಕೋಟಿ ರೂ.ಗಿಂತ ಹೆಚ್ಚು ಅಗತ್ಯವಿದೆ. ಕೆಎಸ್‌ಆರ್‌ಟಿಸಿ ಈಗಾಗಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC)ಯ ಪ್ರತಿ ತಿಂಗಳ ಪಾವತಿಸಿದೆ.
ಶಕ್ತಿ ಯೋಜನೆ ಅಡಿ ಇಲ್ಲಿಯವರೆಗೆ 10.5 ಕೋಟಿ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಜೂನ್ 30ರ ವರೆಗೆ ಟಿಕೆಟ್‌ಗಳ ಮೌಲ್ಯ 248 ಕೋಟಿ ರೂ.
ನಿಗಮಗಳ ಸರಾಸರಿ ದೈನಂದಿನ ಆದಾಯ 24.5 ಕೋಟಿಯಿಂದ 28.9 ಕೋಟಿಗೆ ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆ 84.9 ಲಕ್ಷದಿಂದ 1 ಕೋಟಿಗೂ ಅಧಿಕವಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKSRTC) ಬಸ್‌ಗಳಲ್ಲಿ ಶೇ 52 ರಷ್ಟು ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಶೇ 47 ರಷ್ಟು ಪ್ರಯಾಣಿಕರು ಮಹಿಳೆಯರು ಪ್ರಯಾಣಿಸಿದ್ದಾರೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (KKRTC) ಬಸ್‌ಗಳಿಗೆ ಶೇ 44 ರಷ್ಟು ಮತ್ತು BMTC ಬಸ್‌ಗಳಿಗೆ ಶೇ 42 ರಷ್ಟು ಮಹಿಳೆಯರು ಪ್ರಯಾಣಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:39 am, Mon, 3 July 23