ದೀಪಾವಳಿಗೂ ಕ್ಯಾರೇ ಅನ್ನದ ಮಳೆರಾಯ, ಅಪ್ಪಳಿಸಲಿದೆ ‘ಕ್ಯಾರ್’ ಚಂಡಮಾರುತ!

|

Updated on: Oct 24, 2019 | 5:17 PM

ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಮತ್ತೆ ತೀವ್ರ ವಾಯುಭಾರ ಕುಸಿತ ಆಗಿದೆ. ಅದಕ್ಕೆ ಕ್ಯಾರೆ ಎಂದೂ ಹೆಸರಿಸಲಾಗಿದೆ. ಯಾವುದೇ ಕ್ಷಣದಲ್ಲಿ “ಕ್ಯಾರ್” ಎನ್ನುವ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆಯಿದೆ. ಹಾಗಾಗಿ, ರಾಜ್ಯ ಹವಾಮಾನ ಇಲಾಖೆಯಿಂದ ಕಟ್ಟೆಚ್ಚರ ಜಾರಿಯಾಗಿದೆ. ಠುಸ್​ ಪಟಾಕಿ: ಮೂರು ದಿನಗಳ ಹಿಂದೆ ಒಂದೇ ಸಮನೆ ಭಾರೀ ಮಳೆಯಾಗಿದ್ದು, ಜನ ಈಗಾಗಲೇ ಹೈರಾಣಗೊಂಡಿದ್ದಾರೆ. ನಿನ್ನೆ ಇಂದು ಉತ್ತಮ ಬಿಸಿಲು ಕಂಡುಬಂದಿದೆ. ಆದ್ರೆ ಇದೀಗ “ಕ್ಯಾರ್” ಚಂಡಮಾರುತದಿಂದಾಗಿ ಭಾರೀ ಮಳೆಯಾಗಲಿದೆ. ಇನ್ನು ವಾರಾಂತ್ಯ ದೀಪಾವಳಿ ಬರಲಿದ್ದು, ಆ ವೇಳೆಗೆ ಮಳೆ […]

ದೀಪಾವಳಿಗೂ ಕ್ಯಾರೇ ಅನ್ನದ ಮಳೆರಾಯ, ಅಪ್ಪಳಿಸಲಿದೆ ಕ್ಯಾರ್ ಚಂಡಮಾರುತ!
Follow us on

ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಮತ್ತೆ ತೀವ್ರ ವಾಯುಭಾರ ಕುಸಿತ ಆಗಿದೆ. ಅದಕ್ಕೆ ಕ್ಯಾರೆ ಎಂದೂ ಹೆಸರಿಸಲಾಗಿದೆ. ಯಾವುದೇ ಕ್ಷಣದಲ್ಲಿ “ಕ್ಯಾರ್” ಎನ್ನುವ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆಯಿದೆ. ಹಾಗಾಗಿ, ರಾಜ್ಯ ಹವಾಮಾನ ಇಲಾಖೆಯಿಂದ ಕಟ್ಟೆಚ್ಚರ ಜಾರಿಯಾಗಿದೆ.

ಠುಸ್​ ಪಟಾಕಿ:
ಮೂರು ದಿನಗಳ ಹಿಂದೆ ಒಂದೇ ಸಮನೆ ಭಾರೀ ಮಳೆಯಾಗಿದ್ದು, ಜನ ಈಗಾಗಲೇ ಹೈರಾಣಗೊಂಡಿದ್ದಾರೆ. ನಿನ್ನೆ ಇಂದು ಉತ್ತಮ ಬಿಸಿಲು ಕಂಡುಬಂದಿದೆ. ಆದ್ರೆ ಇದೀಗ “ಕ್ಯಾರ್” ಚಂಡಮಾರುತದಿಂದಾಗಿ ಭಾರೀ ಮಳೆಯಾಗಲಿದೆ. ಇನ್ನು ವಾರಾಂತ್ಯ ದೀಪಾವಳಿ ಬರಲಿದ್ದು, ಆ ವೇಳೆಗೆ ಮಳೆ ಕಾಟ ಇನ್ನೂ ಹೆಚ್ಚಾಗಲಿದೆ.

ನಾಳೆಯೊಳಗೆ ಉತ್ತರ ಭಾಗಕ್ಕೆ ಚಲಿಸಲಿರುವ ಚಂಡಮಾರುತ ಕರ್ನಾಟಕದ ಕರಾವಳಿ, ಮಲೆನಾಡು ಭಾಗದತ್ತ ಚಲಿಸಲಿದ್ದ, ಅಲ್ಲೆಲ್ಲಾ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಶಿಕ್ಷಕರು ಪಾಠ ಮಾಡುತ್ತಿದ್ದ ವೇಳೆ ಹಾರಿಹೋದ ಹಂಚುಗಳು:
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಶುರುವಾಗಿದೆ. ಮೂಡಿಗೆರೆ ತಾಲೂಕಿನ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆ ಶುರುವಾಗಿದೆ. ಕೊಟ್ಟಿಗೆಹಾರ, ದೇವರಮನೆ, ಗುತ್ತಿ, ಚಾರ್ಮಾಡಿ ಘಾಟ್ ಸೇರಿದಂತೆ ಹಲವೆಡೆ ಗಾಳಿ ಮಳೆ ಜೋರಾಗಿದೆ. ಬಿರುಗಾಳಿ ಮಳೆಯ ಹೊಡೆತಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕೊಟ್ಟಿಗೆಹಾರದಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಪ್ರೌಢಶಾಲೆಯೊಂದರ ಹೆಂಚುಗಳು ಹಾರಿಹೋದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದ ವೇಳೆ  ಈ ಘಟನೆ ನಡೆದಿದ್ದು, ಅದೃಷ್ಟವಶಾತ್​​ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕೊಡಗಿನಲ್ಲಿ‌ಯೂ ಮಳೆ ಮುಂದುವೆರಿದಿದೆ. ಮಡಿಕೇರಿ ನಗರ ಸೇರಿದಂತೆ ಹಲವು ಕಡೆ‌ ಮಳೆಯಾಗುತ್ತಿದೆ. ಬೆಳಿಗ್ಗೆಯಿಂದ ಬಿಡುವು ನೀಡಿದ್ದ ಮಳೆ ಮಧ್ಯಾಹ್ನದ ನಂತ್ರ ಆರ್ಭಟಿಸತೊಡಗಿದೆ.

Published On - 3:55 pm, Thu, 24 October 19