ದುಷ್ಕರ್ಮಿಗಳಿಂದ ವಕೀಲ ಹತ್ಯೆ: ಹಳೆ ವೈಷಮ್ಯದಿಂದ ಕೊಲೆ ಶಂಕೆ

ಮದ್ದೂರು ತಾಲೂಕಿನ ನವಿಲೆ ಗ್ರಾಮದಲ್ಲಿ ವಕೀಲ ರವೀಂದ್ರ ಎಂಬವರ ಕೊಲೆ ನಡೆದಿದ್ದು ಹಳೆ ವೈಷಮ್ಯವೇ ಕೊಲೆಗೆ ಕಾರಣ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ದುಷ್ಕರ್ಮಿಗಳಿಂದ ವಕೀಲ ಹತ್ಯೆ: ಹಳೆ ವೈಷಮ್ಯದಿಂದ ಕೊಲೆ ಶಂಕೆ
ವಕೀಲ ರವೀಂದ್ರ
Updated By: ರಶ್ಮಿ ಕಲ್ಲಕಟ್ಟ

Updated on: Jan 03, 2021 | 11:50 AM

ಮಂಡ್ಯ: ದುಷ್ಕರ್ಮಿಗಳು ವಕೀಲರನ್ನು ಕೊಲೆ ಮಾಡಿ ಶವವನ್ನು ನದಿಗೆ ಎಸೆದು, ಮೃತ ದೇಹದ ಮೇಲೆ ಕಲ್ಲು ಹಾಕಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ನವಿಲೆ ಗ್ರಾಮದಲ್ಲಿ ನಡೆದಿದೆ.

ಬೆಳಿಗ್ಗೆ ಜಮೀನಿಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ ವಕೀಲ ರವೀಂದ್ರ (48) ಎಂಬುವವರು ಸಂಜೆಯಾದರೂ  ಮನೆಗೆ ಬರದ ಹಿನ್ನೆಲೆಯಲ್ಲಿ ಜಮೀನಿನ ಬಳಿ ಕುಟುಂಬಸ್ಥರು ಹುಟುಕಾಟ ನಡೆಸಿದರು. ಜಮೀನಿನ ಸಮೀಪ ಶಿಂಷಾ ನದಿಯಲ್ಲಿ ಮುಳುಗಿಸಿದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಹಳೆಯ ವೈಷಮ್ಯದಿಂದ   ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಸದ್ಯ ಈ ಪ್ರಕರಣ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರೇಮ ಸಂಬಂಧಕ್ಕೆ ವಿರೋಧ: ಯುವತಿಯ ಕುಟುಂಬದವರಿಂದ ಪ್ರಿಯಕರನ ಕೊಲೆ ಶಂಕೆ