
ಬೆಂಗಳೂರು: ರಾಜ್ಯದ 276 ಸರಕಾರಿ ಪಬ್ಲಿಕ್ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ LKG ಹಾಗೂ UKG ತರಗತಿಗಳನ್ನು ನಡೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಜೊತೆಗೆ ಸರ್ಕಾರಿ ಶಾಲೆಗಳಲ್ಲಿಯೂ LKG ಹಾಗೂ UKG ತರಗತಿಗಳನ್ನು ಆರಂಭ ಮಾಡಲು ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.
ಹೊಸ ತಾಲೂಕು ಘೋಷಣೆ..
ರಾಯಚೂರು ಜಿಲ್ಲೆಯ ಅರಕೇರಾ ಪಟ್ಟಣವನ್ನು ಹೊಸ ತಾಲೂಕು ಎಂದು ಘೋಷಿಸಲಾಗಿದೆ
ನೂತನ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ 2020-25 ಜಾರಿ..
ನೂತನ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ 2020-25 ಜಾರಿಯಾಗಿದ್ದು, 60 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಜೊತೆಗೆ ಬೆಂಗಳೂರು, ಬೆಂಗಳೂರು ಹೊರವಲಯ ಹೊರತುಪಡಿಸಿ ಬೇರೆ ಕಡೆಗಳ ಸ್ಟ್ಯಾಂಪ್ ಡ್ಯೂಟಿಗೆ ಶೇ.100ರಷ್ಟು ರಿಯಾಯಿತಿ ನೀಡಲಾಗುವುದು ಎಂದರು
ಬೆಂಗಳೂರು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಬಂಡವಾಳ ಹೂಡಿಕೆಗೆ 10 ಕೋಟಿ ರೂಪಾಯಿ ಸರ್ಕಾರಿ ಭದ್ರತೆಯಿಂದ ವಿನಾಯಿತಿ ನೀಡಲಾಗಿದೆ. ಹಾಗೂ ವರ್ಕ್ ಫ್ರಮ್ ಹೋಂ ಇಂಟರ್ನೆಟ್ ಸುಧಾರಣೆಗೆ 5G ಇಂಟರ್ನೆಟ್ ಸೌಲಭ್ಯ ನೀಡಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದ್ದಾರೆ.
ಜೋಗ ಜಲಪಾತ ಸಮಗ್ರ ಅಭಿವೃದ್ಧಿ..
ಜೋಗವನ್ನು ಸರ್ವ ಋತು ಜಲಪಾತ ಮಾಡಲು ತೀರ್ಮಾನ ಮಾಡಲಾಗಿದ್ದು, ಜೋಗ ಜಲಪಾತ ಸಮಗ್ರ ಅಭಿವೃದ್ಧಿಗೆ 120 ಕೋಟಿ ರೂ ಅನುಮೋದನೆ ಮಾಡಲಾಗಿದೆ.
ಬಿಬಿಎಂಪಿ ವಾರ್ಡ್ಗಳ ಹೆಚ್ಚಳ..
ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಬಗ್ಗೆ ನಾಳೆ ಜಂಟಿ ಸದನ ಸಮಿತಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ.
ಸದ್ಯ 198ವಾರ್ಡ್ ಗಳಿವೆ. ಇದನ್ನ 225 ವಾರ್ಡ್ ಗೆ ಹೆಚ್ಚಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ. 40 ರಿಂದ 47 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್ ವಿಂಗಡಣೆ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದರು
ಬಿಬಿಎಂಪಿ 8 ವಲಯಗಳನ್ನು 15ಕ್ಕೆ ಹೆಚ್ಚಿಸುವ ಬಗ್ಗೆಯೂ ಚರ್ಚೆ ಆಗಿದೆ. ಈಗಾಗಲೇ ವಾರ್ಡ್ ವಿಂಗಡಣೆ ವಿಚಾರ ಕೋರ್ಟ್ನಲ್ಲಿ ಇದೆ. ನಾಳಿನ ಸದನ ಸಮಿತಿ ಸಭೆ ಬಳಿಕ ಹಾಲಿ ವಾರ್ಡ್ ಪ್ರಕಾರವೇ ಚುನಾವಣೆಗೆ ಹೋಗಬೇಕಾ ಅಥವಾ ವಾರ್ಡ್ ಮರುವಿಂಗಡಣೆ ಬಳಿಕ ಚುನಾವಣೆಗೆ ಹೋಗಬೇಕು ಎಂಬುದನ್ನ ನಿರ್ಧರಿಸುತ್ತೇವೆ ಎಂದಿದ್ದಾರೆ. ಜೊತೆಗೆ ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕದ ಬಗ್ಗೆ ಚರ್ಚೆ ನಡೆದಿಲ್ಲ ಎಂದರು
Published On - 2:31 pm, Thu, 3 September 20