‘ಹಳ್ಳಿ ಹಳ್ಳಿಯಲ್ಲಿದೆ Drugs.. ಪೊಲೀಸರ ಸಹಕಾರ ಇಲ್ಲದೆ ಈ ದಂಧೆ ನಡೆಯೋದೇ ಇಲ್ಲ’
ಮಂಡ್ಯ: ಸದ್ಯ ಚಿತ್ರರಂಗವನ್ನ ನಲುಗಿಸಿರುವ ಡ್ರಗ್ಸ್ ನಂಟು ಎಲ್ಲರ ಗಮನ ತನ್ನತ್ತ ಸೆಳೆದಿದೆ. ಆದರೆ, ಇತ್ತ ಸಕ್ಕರೆ ನಾಡು ಮಂಡ್ಯದಲ್ಲೂ ಡ್ರಗ್ಸ್ ಕರಾಳ ದಂಧೆ ನಡೆಯುತ್ತಿದೆ ಎಂದು ಶಾಸಕ ತಮ್ಮಣ್ಣ ಹೇಳಿಕೆ ನೀಡಿದ್ದಾರೆ. ಮದ್ದೂರಿನಲ್ಲಿ ಇಲ್ವಾ ಡ್ರಗ್ಸ್? ಮಂಡ್ಯದಲ್ಲಿ ಇಲ್ವಾ ಡ್ರಗ್ಸ್? ಹಳ್ಳಿ ಹಳ್ಳಿಯಲ್ಲಿದೆ ಡ್ರಗ್ಸ್ ಎಂದು ಜಿಲ್ಲೆಯ ಮದ್ದೂರಿನಲ್ಲಿ ಶಾಸಕ DC ತಮ್ಮಣ್ಣ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಒಂದು ವಾರದಿಂದ ಮಾಧ್ಯಮದಲ್ಲಿ ಡ್ರಗ್ಸ್ ದಂಧೆ ಬಗ್ಗೆ ನೊಡ್ತಿದ್ದೇನೆ. ಬರೀ ಸಿನಿಮಾ ತಾರೆಯರು, ರಾಜಕಾರಣಿಗಳು ಹಾಗೂ ಅವರ […]

ಮಂಡ್ಯ: ಸದ್ಯ ಚಿತ್ರರಂಗವನ್ನ ನಲುಗಿಸಿರುವ ಡ್ರಗ್ಸ್ ನಂಟು ಎಲ್ಲರ ಗಮನ ತನ್ನತ್ತ ಸೆಳೆದಿದೆ. ಆದರೆ, ಇತ್ತ ಸಕ್ಕರೆ ನಾಡು ಮಂಡ್ಯದಲ್ಲೂ ಡ್ರಗ್ಸ್ ಕರಾಳ ದಂಧೆ ನಡೆಯುತ್ತಿದೆ ಎಂದು ಶಾಸಕ ತಮ್ಮಣ್ಣ ಹೇಳಿಕೆ ನೀಡಿದ್ದಾರೆ.
ಮದ್ದೂರಿನಲ್ಲಿ ಇಲ್ವಾ ಡ್ರಗ್ಸ್? ಮಂಡ್ಯದಲ್ಲಿ ಇಲ್ವಾ ಡ್ರಗ್ಸ್? ಹಳ್ಳಿ ಹಳ್ಳಿಯಲ್ಲಿದೆ ಡ್ರಗ್ಸ್ ಎಂದು ಜಿಲ್ಲೆಯ ಮದ್ದೂರಿನಲ್ಲಿ ಶಾಸಕ DC ತಮ್ಮಣ್ಣ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ಒಂದು ವಾರದಿಂದ ಮಾಧ್ಯಮದಲ್ಲಿ ಡ್ರಗ್ಸ್ ದಂಧೆ ಬಗ್ಗೆ ನೊಡ್ತಿದ್ದೇನೆ. ಬರೀ ಸಿನಿಮಾ ತಾರೆಯರು, ರಾಜಕಾರಣಿಗಳು ಹಾಗೂ ಅವರ ಮಕ್ಕಳ ಬಗ್ಗೆ ಮಾತ್ರ ಬರ್ತಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಇಂಥ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಮಾದಕ ವಸ್ತುಗಳ ಹಾವಳಿಯಿದೆ ಅಂತಾನಾ? ಇವಾಗ ಮದ್ದೂರಿನಲ್ಲಿ ಇಲ್ವಾ ಡ್ರಗ್ಸ್? ಮಂಡ್ಯದಲ್ಲಿ ಇಲ್ವಾ? ಯಾವ ತಾಲೂಕಿನಲ್ಲಿ ಇಲ್ಲಾ?.. ಹಳ್ಳಿ ಹಳ್ಳಿಯಲ್ಲಿದೆ ಅಂತಾ ತಮ್ಮಣ್ಣ ಹೇಳಿದ್ದಾರೆ.
ಅದಕ್ಕೆ ಹೇಳಿದ್ದಿನಿ. ಒಂದು ಕಡೆ ಪೋಲಿಸರನ್ನ ಕೊರೊನಾ ಸಮಯದಲ್ಲಿ ವಾರಿಯರ್ಸ್ ಅಂತಾ ಸನ್ಮಾನ ಮಾಡಿದ್ದಿವಿ. ಜನತೆ ಅವರಿಗೆ ಹೂಮಳೆ ಸುರಿದಿದ್ದು ಗೌರವಿಸಿದ್ದಾರೆ. ಅದೇ ಪೋಲಿಸರ ಇನ್ನೊಂದು ಮುಖ ಗೊತ್ತಿಲ್ವಾ? ಇಡೀ ರಾಜ್ಯದಲ್ಲಿ ಪೋಲಿಸ್ ಇಲಾಖೆಯ ಬಂದೋಬಸ್ತ್ ಮಾಡಿ ಅಂತಾ ಹೇಳಿದ್ದಾರೆ.
‘ಪೊಲೀಸರ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯುವುದಿಲ್ಲ’ ಒಳ್ಳೆಯ ಕೆಲಸ ಮಾಡಿದವರನ್ನ ಹೊಗಳುತ್ತೇವೆ. ಮಾಡಿಲ್ಲಾ ಅಂದ್ರೆ ತೆಗಳಬೇಕು. ಅವರಿಗೆ ಶಿಕ್ಷೆ ಕೊಡಬೇಕು. ಪೊಲೀಸರ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ. ಪ್ರತಿ ತಾಲ್ಲೂಕು, ಜಿಲ್ಲಾಮಟ್ಟದಲ್ಲಿ, ಹಳ್ಳಿ ಹಳ್ಳಿಗೂ ಕೂಡ ಡ್ರಗ್ಸ್ ಸಪ್ಲೈ ಆಗ್ತಿದೆ.
ಇಂತಹ ಕೊಂಡಿಯನ್ನು ಭೇದಿಸಿ. ಜನರ ದಾರಿ ತಪ್ಪಿಸುವ ಸಲುವಾಗಿ ಸಿನಿಮಾ ತಾರೆಯರು, ರಾಜಕಾರಣಿಗಳು ಮತ್ತು ಅವರ ಮಕ್ಕಳು ಅಂತಾ ಜನರ ದಾರಿ ತಪ್ಪಿಸಬೇಡಿ ಎಂದು ತಿಳಿಸಿದ್ದಾರೆ. ಜೊತೆಗೆ, ಈ ಕುರಿತು ಸಿಎಂ ಮತ್ತು ಗೃಹ ಸಚಿವರಿಗೆ ಪತ್ರ ಬರೆಯಲಾಗುತ್ತೆ ಎಂದೂ ಹೇಳಿದರು.



