ಸದ್ಯಕ್ಕೆ ಬರಾಕಿಲ್ಲ ಅಂದ ರಾಗಿಣಿಗೆ ಟಕ್ಕರ್ ಕೊಟ್ಟ CCB
ಬೆಂಗಳೂರು: CCB ವಿಚಾರಣೆಗೆ ಸೋಮವಾರ ಹಾಜರಾಗುತ್ತೇನೆ ಎಂದು ಟ್ವೀಟ್ ಮಾಡಿದ್ದ ನಟಿ ರಾಗಿಣಿಗೆ CCB ದಳವು ಟಕ್ಕರ್ ಕೊಟ್ಟಿದೆ. ನೀವು ನಾಳೆ ವಿಚಾರಣೆಗೆ ಬರಲೇಬೇಕು ಎಂದು CCB ಮತ್ತೊಂದು ನೋಟಿಸ್ ಕೊಡಲು ಸಿದ್ಧತೆ ನಡೆಸಿದೆ. ತನಿಖೆ ತೀವ್ರಗತಿಯಲ್ಲಿ ಮುಂದುವರಿದ ಹಿನ್ನೆಲೆಯಲ್ಲಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ CCB, ರಾಗಿಣಿ ಹಾಜರಾಗಲೇಬೇಕು ಎಂದು ಮತ್ತೊಂದು ನೋಟಿಸ್ ನೀಡಲು ಸಿದ್ಧತೆ ನಡೆಸಿದೆ. ಈಗಾಗಲೆ CCB ವಶದಲ್ಲಿರುವ ರಾಗಿಣಿ ಆಪ್ತ ರವಿಶಂಕರ್ನಿಂದ ಮತ್ತಷ್ಟು ಮಾಹಿತಿ ಪಡೆಯಬೇಕು. ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಬೇಕು. ಅದೂ […]
ಬೆಂಗಳೂರು: CCB ವಿಚಾರಣೆಗೆ ಸೋಮವಾರ ಹಾಜರಾಗುತ್ತೇನೆ ಎಂದು ಟ್ವೀಟ್ ಮಾಡಿದ್ದ ನಟಿ ರಾಗಿಣಿಗೆ CCB ದಳವು ಟಕ್ಕರ್ ಕೊಟ್ಟಿದೆ. ನೀವು ನಾಳೆ ವಿಚಾರಣೆಗೆ ಬರಲೇಬೇಕು ಎಂದು CCB ಮತ್ತೊಂದು ನೋಟಿಸ್ ಕೊಡಲು ಸಿದ್ಧತೆ ನಡೆಸಿದೆ.
ತನಿಖೆ ತೀವ್ರಗತಿಯಲ್ಲಿ ಮುಂದುವರಿದ ಹಿನ್ನೆಲೆಯಲ್ಲಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ CCB, ರಾಗಿಣಿ ಹಾಜರಾಗಲೇಬೇಕು ಎಂದು ಮತ್ತೊಂದು ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.
ಈಗಾಗಲೆ CCB ವಶದಲ್ಲಿರುವ ರಾಗಿಣಿ ಆಪ್ತ ರವಿಶಂಕರ್ನಿಂದ ಮತ್ತಷ್ಟು ಮಾಹಿತಿ ಪಡೆಯಬೇಕು. ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಬೇಕು. ಅದೂ ಅಲ್ಲದೆ, ರವಿಶಂಕರ್ ಪ್ರಮುಖವಾಗಿ ರಾಗಿಣಿಯ ಹೆಸರನ್ನೇ ಹೇಳಿರುವ ಮಾಹಿತಿ ದೊರೆತಿದೆ. ಹೀಗಾಗಿ ನಾಳೆ ರಾಗಿಣಿ ವಿಚಾರಣೆಗೆ ಬರಲೇಬೇಕು. ಬಾರದಿದ್ದಲ್ಲಿ CCB ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿದೆ.