ಮೊದಲ ಅರೆಸ್ಟ್! ನಟಿ ರಾಗಿಣಿ ಆಪ್ತ ರವಿಶಂಕರ್ 5 ದಿನ CCB ಕಸ್ಟಡಿಗೆ
[lazy-load-videos-and-sticky-control id=”cmTqyyJs2Z4″] ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ CCB ಅಧಿಕಾರಿಗಳಿಂದ ರಾಗಿಣಿ ಆಪ್ತ ರವಿಶಂಕರ್ ಬಂಧನವಾಗಿದೆ. ನಿನ್ನೆಯಿಂದ CCBಯ ವಶದಲ್ಲೇ ಇರುವ ರವಿಶಂಕರ್ನ ಅಧಿಕೃತವಾಗಿ ಅರೆಸ್ಟ್ ಮಾಡಲಾಗಿದೆ. ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ರವಿಶಂಕರ್‌ನನ್ನು ಸಿಸಿಬಿ ಅಧಿಕಾರಿಗಳು 5 ದಿನ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರುಪಡಿಸಿ, ವಶಕ್ಕೆ ಪಡೆದಿದಿದ್ದಾರೆ. ಈ ನಡುವೆ, ಚಾಮರಾಜಪೇಟೆಯಲ್ಲಿರುವ CCB ಕಚೇರಿಗೆ ಭೇಟಿಕೊಟ್ಟ ನಗರ ಪೊಲೀಸ್ ಆಯುಕ್ತ ಕಮಲ್ […]
[lazy-load-videos-and-sticky-control id=”cmTqyyJs2Z4″]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ CCB ಅಧಿಕಾರಿಗಳಿಂದ ರಾಗಿಣಿ ಆಪ್ತ ರವಿಶಂಕರ್ ಬಂಧನವಾಗಿದೆ. ನಿನ್ನೆಯಿಂದ CCBಯ ವಶದಲ್ಲೇ ಇರುವ ರವಿಶಂಕರ್ನ ಅಧಿಕೃತವಾಗಿ ಅರೆಸ್ಟ್ ಮಾಡಲಾಗಿದೆ. ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ರವಿಶಂಕರ್‌ನನ್ನು ಸಿಸಿಬಿ ಅಧಿಕಾರಿಗಳು 5 ದಿನ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರುಪಡಿಸಿ, ವಶಕ್ಕೆ ಪಡೆದಿದಿದ್ದಾರೆ.
ಈ ನಡುವೆ, ಚಾಮರಾಜಪೇಟೆಯಲ್ಲಿರುವ CCB ಕಚೇರಿಗೆ ಭೇಟಿಕೊಟ್ಟ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುಮಾರು 1 ಗಂಟೆಯ ಕಾಲ ವಿಚಾರಣೆಯ ಮಾಹಿತಿ ಪಡೆದರು. ಬೆಳಗ್ಗೆಯಿಂದ ನಡೆದಿರುವ ತನಿಖೆಯ ಮಾಹಿತಿ ಪಡೆದ ಕಮಲ್ ಪಂತ್ರ ನಿರ್ಗಮನ ಬಳಿಕ ರವಿಶಂಕರ್ನ ಅಧಿಕೃತವಾಗಿ ಅರೆಸ್ಟ್ ಮಾಡಲಾಯಿತು. ವಿಚಾರಣೆಗೊಳಗಾದವರ ಪರ ಲಾಯರ್‌ಗಳ ಹೇಳಿಕೆ ಸೇರಿದಂತೆ ಒಟ್ಟಾರೆ ಇಂದಿನ ತನಿಖಾ ಮಾಹಿತಿ ಸಂಗ್ರಹಿಸಿದ ಕಮಲ್ ಪಂತ್ ಇಂದಿನ ತನಿಖೆಯಲ್ಲಿ ಯಾಱರ ಹೆಸರು ಕೇಳಿಬಂದಿದೆ ಎಂಬ ಮಾಹಿತಿ ಸಹ ಪಡೆದರು ಎಂದು ತಿಳಿದುಬಂದಿದೆ.
ಸದ್ಯ CCBಯಿಂದ ರವಿಶಂಕರ್ನ ಮಾತ್ರ ವಶಕ್ಕೆ ಪಡೆಯಲಾಗಿದೆ. ಡ್ರಗ್ ಪೆಡ್ಲರ್ ಕಾರ್ತಿಕ್ ಹಾಗೂ ಸಂಜನಾ ಆಪ್ತ ಎಂದು ಹೇಳಲಾಗಿರುವ ರಾಹುಲ್ ವಿಚಾರಣೆ ಮುಂದುವರೆದಿದೆ. ಜೊತೆಗೆ, ನಾಳೆ ವಿಚಾರಣೆಗೆ ಹಾಜರಾಗುವಂತೆ ನಟಿ ರಾಗಿಣಿ ದ್ವಿವೇದಿಗೆ CCBಯಿಂದ ಸೂಚನೆ ನೀಡಲಾಗಿದೆ.
Published On - 5:30 pm, Thu, 3 September 20