ಎಸ್ ಪಿ ಬಿ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ: ಚರಣ್

  • Publish Date - 8:40 pm, Thu, 3 September 20
ಎಸ್ ಪಿ ಬಿ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ: ಚರಣ್

ಭಾರತ ಕಂಡಿರುವ ಮಹಾನ್ ಗಾಯಕರಲ್ಲಿ ಒಬ್ಬರಾಗಿರುವ ಎಸ್ ಪಿ ಬಾಲಸುಬ್ರಮಣ್ಯಂ ಅವರ ಬಗ್ಗೆ ಮತ್ತಷ್ಟು ಸಂತೋಷದ ಸುದ್ದಿ ಹೊರಬಂದಿದೆ. ಚೆನೈನ ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್-19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯದಲ್ಲಿ ಗಣನೀಯ ಸುಧಾರಣೆಯಾಗಿದೆ ಎಂದು ಅವರ ಮಗ ಎಸ್ ಪಿ ಚರಣ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ

ಕಳೆದ ನಾಲ್ಕು ದಿನಗಳಿಂದ ನಮ್ಮ ತಂದೆ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಾಯಶಃ ಈ ವಾರಾಂತ್ಯದಲ್ಲಿ ಒಂದು ಒಳ್ಳೆಯ ನಮಗೆಲ್ಲ ಸಿಕ್ಕಬಹುದು ಅಥವಾ ಸೋಮವಾರದಂದು ಅ ಸುದ್ದಿ ಸಿಗಬಹುದೆಂಬ ನಿರೀಕ್ಷೆ ನನಗಿದೆ, ಆ ಸುದ್ದಿಗಾಗಿ ಬಕಪಕ್ಷಿಯಂತೆ ಕಾಯ್ತಾ ಇದ್ದೇನೆ ಎಂದು ಚರಣ್ ಹೇಳಿದ್ದಾರೆ.

ಏತನ್ಮಧ್ಯೆ, ಆಸ್ಪತ್ರೆಯ ವೈದ್ಯರು ಇಂದು ಸಾಯಂಕಾಲ ಎಸ್ ಪಿ ಬಿ ಅವರ ಆರೋಗ್ಯ ಕುರಿತು ಬುಲೆಟಿನ್ ಬಿಡುಗಡೆ ಮಾಡಿದ್ದು, ‘‘ಅವರಿಗೆ ವೆಂಟಿಲೇಟರ್ ಹಾಗೂ ಎಕ್ಮೋ ಸಪೋರ್ಟ್ ಮೂಲಕ ಚಿಕಿತ್ಸೆ ಮುಂದುವರಿಸಲಾಗಿದೆ. ಎಸ್ ಪಿ ಬಿ ಆರೋಗ್ಯ ಸ್ಥಿರವಾಗಿದೆ ಮತ್ತು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ, ಚೇತರಿಕೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಆಸ್ಪತ್ರೆಯ ಮಲ್ಟಿ ಡಿಸಿಪ್ಲಿನರಿ ಕ್ಲಿನಿಕಲ್ ಟೀಮಿನ ನೇತೃತ್ವದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ,’’ ಅಂತ ಹೇಳಿದೆ.

Click on your DTH Provider to Add TV9 Kannada