ಸಿಸಿಬಿ ದಾಳಿ ಬಳಿಕ ಬಯಲಾಗುತ್ತಿದೆ ರೋಚಕ ಕಹಾನಿ, ರಾಗಿಣಿ ವಶಕ್ಕೆ ಪಡೆಯುವ ಸಾಧ್ಯತೆ

  • Publish Date - 8:36 am, Fri, 4 September 20
ಸಿಸಿಬಿ ದಾಳಿ ಬಳಿಕ ಬಯಲಾಗುತ್ತಿದೆ ರೋಚಕ ಕಹಾನಿ, ರಾಗಿಣಿ ವಶಕ್ಕೆ ಪಡೆಯುವ ಸಾಧ್ಯತೆ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಇದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿ ರಾಗಿಣಿ ದ್ವಿವೇದಿಯವರ ಯಲಹಂಕದ ಅನನ್ಯ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ಬಳಿಕ ಮನೆ ಜಾಲಾಡುತ್ತಿದ್ದಾರೆ.

ನಿನ್ನೆ ಮನೆಯಲ್ಲೇ ಇರಲಿಲ್ಲ ರಾಗಿಣಿ:
ನಿನ್ನೆ ದಿನ ಪೂರ್ತಿ ರಾಗಿಣಿ ತನ್ನ ಮನೆಯಲ್ಲಿ ಇರಲಿಲ್ಲ. ಪ್ಲಾಸ್ಮಾ ದಾನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ನಟಿ ರಾಗಿಣಿ ಪೊಲೀಸರಿಗೆ ತಿಳಿಸಿದ್ರು. ಆದ್ರೆ ಅವರು ಯಾವ ಕಾರ್ಯಕ್ರಮದಲ್ಲೂ ಭಾಗಿಯಾಗಿಲ್ಲ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ. ಅಲ್ಲದೆ ವಾಟ್ಸಪ್ ಅನ್ ಇನ್ಸ್ಟಾಲ್ ಮಾಡಿ ಹೊಸ ಮೊಬೈಲ್​ಗೆ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಹೀಗಾಗಿ ಸಿಸಿಬಿ ಪೊಲೀಸರಿಗೆ ಅನುಮಾನ ಹೆಚ್ಚಾಗಿತ್ತು. ನಿನ್ನೆ ಸಂಜೆ ನ್ಯಾಯಾಲಯದ ಮೂಲಕ ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಿದ್ದಾರೆ.

ತಡರಾತ್ರಿ ಹನ್ನೆರಡು ಗಂಟೆಗೆ ರಾಗಿಣಿ ಮನೆಗೆ ವಾಪಸ್ ಆಗಿದ್ರು. ಈ ಬಗ್ಗೆ ಸಿಸಿಬಿ ಅಧಿಕಾರಿಗಳು ನಿಗಾ ಇಟ್ಟಿದ್ದರು. ಈ ಎಲ್ಲಾ ಮಾಹಿತಿ ಹಾಗೂ ಅನುಮಾನಗಳಿಂದಾಗಿ ಬೆಳಗ್ಗೆ ಸಿಸಿಬಿ ಮಹಿಳಾ ಇನ್ಸ್ಪೆಕ್ಟರ್ ಅಂಜುಮಾಲಾ ನಾಯಕ್ ನೇತ್ರತ್ವದಲ್ಲಿ ದಾಳಿ ನಡೆಸಲಾಗಿದೆ. ಒಟ್ಟು ಆರು ಸಿಸಿಬಿ ಪೊಲೀಸರ ಪೈಕಿ ನಾಲ್ವರು ಮಹಿಳಾ ಪೊಲೀಸರು ಇಬ್ಬರು ಪುರುಷರು ಭಾಗಿಯಾಗಿದ್ದಾರೆ. ಮನೆಯನ್ನ ಮಹಿಳಾ ಅಧಿಕಾರಿಗಳು ಸರ್ಚ್ ಮಾಡುತ್ತಿದ್ದಾರೆ. ಇಬ್ಬರು ಪುರುಷ ಪೊಲೀಸರು ಮನೆ ಬಾಗಿಲಲ್ಲೆ ಇದ್ದಾರೆ. ಮನೆಯಲ್ಲಿ ರಾಗಿಣಿ ಒಬ್ಬರೆ ಇದ್ದಾಗಲೇ ದಾಳಿ ಮಾಡಲಾಗಿದೆ. ನಟಿ ರಾಗಿಣಿ ಸಿಸಿಬಿ ಪೊಲೀಸರಿಗೆ ಅವರ ಕಾರ್ಯಾಚರಣೆಗೆ ಸಹಕಾರ ನೀಡುತ್ತಿದ್ದಾರೆ. ಕಾರ್ಯಾಚರಣೆ ಬಳಿಕ ರಾಗಿಣಿಯನ್ನ ಸಿಸಿಬಿಗೆ ಕರೆತರುವ ಸಾಧ್ಯತೆ ಇದೆ.

Read Full Article

Click on your DTH Provider to Add TV9 Kannada