WhatsApp ಡಿಲೀಟ್ ಹಿನ್ನಡೆಯಾ? ಅಥ್ವಾ ಆಪ್ತರ ಸಂದೇಶದಿಂದ ಸಿಕ್ಕಿಬೀಳ್ತಾರಾ ತುಪ್ಪದ ಬೆಡಗಿ?
[lazy-load-videos-and-sticky-control id=”gPz-eb7ycEs”] ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ತುಪ್ಪದ ಬೆಡಗಿ ನಟಿ ರಾಗಿಣಿಯ ಹಿಂದೆ ಬಿದ್ದಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿ ರಾಗಿಣಿಯವರ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಡ್ರಗ್ಸ್ ಜಾಲದಿಂದ ಎಸ್ಕೇಪ್ ಆಗುವುದಕ್ಕೆ, ಸಾಕ್ಷ್ಯಗಳು ಸಿಗದಂತೆ ನಟಿ ರಾಗಿಣಿ ದ್ವಿವೇದಿ ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದರಾ? ಎಂಬ ಶಂಕೆ ವ್ಯಕ್ತವಾಗಿದೆ. ನಟಿ ರಾಗಿಣಿ ತನ್ನ ಮೊಬೈಲ್‌ನಲ್ಲಿದ್ದ ವಾಟ್ಸಾಪ್ ಡಿಲೀಟ್ ಮಾಡಿ ಹೊಸ ಫೋನ್ ಖರೀದಿಸಿ ವಾಟ್ಸಾಪ್ […]
[lazy-load-videos-and-sticky-control id=”gPz-eb7ycEs”]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ತುಪ್ಪದ ಬೆಡಗಿ ನಟಿ ರಾಗಿಣಿಯ ಹಿಂದೆ ಬಿದ್ದಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿ ರಾಗಿಣಿಯವರ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
ಡ್ರಗ್ಸ್ ಜಾಲದಿಂದ ಎಸ್ಕೇಪ್ ಆಗುವುದಕ್ಕೆ, ಸಾಕ್ಷ್ಯಗಳು ಸಿಗದಂತೆ ನಟಿ ರಾಗಿಣಿ ದ್ವಿವೇದಿ ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದರಾ? ಎಂಬ ಶಂಕೆ ವ್ಯಕ್ತವಾಗಿದೆ. ನಟಿ ರಾಗಿಣಿ ತನ್ನ ಮೊಬೈಲ್‌ನಲ್ಲಿದ್ದ ವಾಟ್ಸಾಪ್ ಡಿಲೀಟ್ ಮಾಡಿ ಹೊಸ ಫೋನ್ ಖರೀದಿಸಿ ವಾಟ್ಸಾಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ.
ಈ ನಡುವೆ ಸಿಸಿಬಿ ವಿಚಾರಣೆಗೆ ಹಾಜರಾಗಲು ನಟಿಗೆ ಸೂಚನೆ ನೀಡಿದ್ರೆ. ವಿಚಾರಣೆಗೆ ಹಾಜರಾಗದೆ ಸಾಕ್ಷ್ಯ ನಾಶ ಮಾಡುವುದಕ್ಕೆ ಯತ್ನಿಸಿದ್ದಾರೆ. ನಾನಾ ಕಾರಣಗಳನ್ನು ಹೇಳಿ ವಿಚಾರಣೆಯನ್ನು ತಪ್ಪಿಸಿಕೊಂಡಿದ್ದಾರೆ.
ತನಿಖೆಗೆ ಹಿನ್ನಡೆಯಾಗುತ್ತಾ? ಇಲ್ಲದಿದ್ರೆ ಆಪ್ತರ ಮೊಬೈಲ್ ಸಂದೇಶದಿಂದ ಸಿಕ್ಕಿಹಾಕಿಕೊಳ್ತಾರಾ? ವಾಟ್ಸಾಪ್ ಸಂದೇಶಗಳಿಂದ ಮುಳುವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮೊಬೈಲ್ ಬದಲಿಸಿ ವಾಟ್ಸಾಪ್ ಸಂದೇಶ ಸಿಗದಂತೆ ಪ್ಲ್ಯಾನ್ ಮಾಡಿದ್ದಾರೆ. ಈ ಬಗ್ಗೆ ನಟಿ ರಾಗಿಣಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದ್ರೆ ಮುಂದೆ ಏನು ಹೇಳುತ್ತಾರೆ ಎಂಬುದೇ ಪ್ರಶ್ನೆಯಾಗಿದೆ.
ಈಗಾಗಲೇ ಮೊಬೈಲ್‌ನಿಂದ ರಾಹುಲ್ ಸಿಸಿಬಿಗೆ ಸಿಕ್ಕಿಬಿದ್ದಿದ್ದಾನೆ. ಇದೇ ಭಯದಿಂದ ರಾಗಿಣಿ ಮೊಬೈಲ್ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆಯಾ? ವಾಟ್ಸಾಪ್ ಸಂದೇಶಗಳು ಸಿಗದಿದ್ದರೆ ತನಿಖೆಗೆ ಹಿನ್ನಡೆಯಾಗುತ್ತಾ? ಇಲ್ಲದಿದ್ರೆ ಆಪ್ತರ ಮೊಬೈಲ್ ಸಂದೇಶದಿಂದ ಸಿಕ್ಕಿಹಾಕಿಕೊಳ್ತಾರಾ? ಎಂಬ ಪ್ರಶ್ನೆಗಳು ಎದ್ದಿವೆ.
Published On - 9:41 am, Fri, 4 September 20