CCBಗೆ ನಾಳೆ, ನಾಡಿದ್ದು ಹಾಜರಾಗ್ತೀನಿ ಅಂತಾ ಹೇಳಿದ್ಯಾಕೆ ನಟಿ ರಾಗಿಣಿ?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಆಕೆಗೆ ವಿಚಾರಣೆಗೆ ಹಾಜರಾಗಲು CCB ತನಿಖಾ ಸಂಸ್ಥೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ನಾನು ಸೋಮವಾರ ಸಿಸಿಬಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ನಟಿ ರಾಗಿಣಿ ತಮ್ಮ ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದಾರೆ. ನನಗೆ CCB ಅಧಿಕಾರಿಗಳು WhatsAppನಲ್ಲಿ ಮಾಹಿತಿ ನೀಡಿದ್ದರು. ನಾಳೆ ವಿಚಾರಣೆಗೆ ಆಗಮಿಸಬೇಕೆಂದು ಮಾಹಿತಿ ರವಾನಿಸಿದ್ದರು. ಆದರೆ, ನನಗೆ ಅಧಿಕೃತವಾಗಿ ಯಾವುದೇ ನೋಟಿಸ್ ಬಂದಿಲ್ಲ. WhatsApp ನೋಟಿಸನ್ನು ಹೇಗೆ ಗಂಭೀರವಾಗಿ […]

CCBಗೆ ನಾಳೆ, ನಾಡಿದ್ದು ಹಾಜರಾಗ್ತೀನಿ ಅಂತಾ ಹೇಳಿದ್ಯಾಕೆ ನಟಿ ರಾಗಿಣಿ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Sep 03, 2020 | 1:17 PM

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಆಕೆಗೆ ವಿಚಾರಣೆಗೆ ಹಾಜರಾಗಲು CCB ತನಿಖಾ ಸಂಸ್ಥೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ನಾನು ಸೋಮವಾರ ಸಿಸಿಬಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ನಟಿ ರಾಗಿಣಿ ತಮ್ಮ ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದಾರೆ.

ನನಗೆ CCB ಅಧಿಕಾರಿಗಳು WhatsAppನಲ್ಲಿ ಮಾಹಿತಿ ನೀಡಿದ್ದರು. ನಾಳೆ ವಿಚಾರಣೆಗೆ ಆಗಮಿಸಬೇಕೆಂದು ಮಾಹಿತಿ ರವಾನಿಸಿದ್ದರು. ಆದರೆ, ನನಗೆ ಅಧಿಕೃತವಾಗಿ ಯಾವುದೇ ನೋಟಿಸ್ ಬಂದಿಲ್ಲ. WhatsApp ನೋಟಿಸನ್ನು ಹೇಗೆ ಗಂಭೀರವಾಗಿ ಪರಿಗಣಿಸಲಿ ಎಂದು ರಾಗಿಣಿ ಪ್ರಶ್ನಿಸಿದ್ದಾರೆ. ಜೊತೆಗೆ, ಅತಿ ಕಡಿಮೆ ಸಮಯದಲ್ಲಿ ನೋಟಿಸ್ ಸಿಕ್ಕಿದ್ರಿಂದ್ರ CCB ಎದುರು ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ವಕೀಲರೊಬ್ಬರ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ವಕೀಲರ ಸಲಹೆಯಂತೆ ನನ್ನ ವಕೀಲರು ಹಾಜರಾಗಿದ್ದಾರೆ. ವಕೀಲರು ಹಾಜರಾಗಿ ನನ್ನ ಗೈರಿನ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನು ಸೋಮವಾರ ಸಿಸಿಬಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.