ಪ್ರಶಾಂತ್ ಸಂಬರಗಿ ರಾಜಕಾರಣಿಗಳ ಸೇವಕ ಅಂತಾ ಕೇಳಿದ್ದೇನೆ -ಸಂಜನಾ ತಿರುಗೇಟು
ಬೆಂಗಳೂರು: ಸಂಜನಾ ಬಗ್ಗೆ ನನ್ನ ಬಾಯಿಂದ ಹೇಳಿ ಗಲೀಜು ಮಾಡಿಕೊಳ್ಳಲ್ಲ. ಸಂಜನಾ ಯಾವ ಮಟ್ಟದಲ್ಲಿ ಇದ್ದಾರೆಂದು ಇಂಡಸ್ಟ್ರಿಗೆ ಗೊತ್ತು ಅಂತಾ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹೇಳಿಕೆಗೆ ನಟಿ ಸಂಜನಾ ಪ್ರತಿಕ್ರಿಯಿಸಿದ್ದಾರೆ. ಈ ಕೊಳಕಿನ ಬಗ್ಗೆ ಮಾತನಾಡುವುದಕ್ಕೆ ನನಗೆ ಇಷ್ಟವಿಲ್ಲ ಎಂದು ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ನಟಿ ಸಂಜನಾ ಗಲ್ರಾನಿ ಈ ಬಗ್ಗೆ ನಾನು ಮಾತನಾಡಿಲ್ಲವೆಂದರೆ, ನನಗೆ ಭಯ ಅಂತಲ್ಲ. ನನಗೆ ಇಂತಹ ಚೀಪ್ ಪಬ್ಲಿಸಿಟಿ ಬೇಕಾಗಿಲ್ಲ ಎಂದು ಹೇಳಿದ್ದಾರೆ. ಪ್ರಶಾಂತ್ ಸಂಬರಗಿ ಯಾರು ಎಂಬುದೇ ನನಗೆ […]
ಬೆಂಗಳೂರು: ಸಂಜನಾ ಬಗ್ಗೆ ನನ್ನ ಬಾಯಿಂದ ಹೇಳಿ ಗಲೀಜು ಮಾಡಿಕೊಳ್ಳಲ್ಲ. ಸಂಜನಾ ಯಾವ ಮಟ್ಟದಲ್ಲಿ ಇದ್ದಾರೆಂದು ಇಂಡಸ್ಟ್ರಿಗೆ ಗೊತ್ತು ಅಂತಾ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹೇಳಿಕೆಗೆ ನಟಿ ಸಂಜನಾ ಪ್ರತಿಕ್ರಿಯಿಸಿದ್ದಾರೆ.
ಈ ಕೊಳಕಿನ ಬಗ್ಗೆ ಮಾತನಾಡುವುದಕ್ಕೆ ನನಗೆ ಇಷ್ಟವಿಲ್ಲ ಎಂದು ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ನಟಿ ಸಂಜನಾ ಗಲ್ರಾನಿ ಈ ಬಗ್ಗೆ ನಾನು ಮಾತನಾಡಿಲ್ಲವೆಂದರೆ, ನನಗೆ ಭಯ ಅಂತಲ್ಲ. ನನಗೆ ಇಂತಹ ಚೀಪ್ ಪಬ್ಲಿಸಿಟಿ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ಪ್ರಶಾಂತ್ ಸಂಬರಗಿ ಯಾರು ಎಂಬುದೇ ನನಗೆ ಗೊತ್ತಿಲ್ಲ. ಸಂಬರಗಿ ರಾಜಕಾರಣಿಗಳ ಸೇವಕನೆಂದು ಮಾತ್ರ ಕೇಳಿದ್ದೇನೆ. ನಾನು ಮಾಡಿದ್ದು ಒಂದೇ ಸಿನಿಮಾ ಎಂಬಂತೆ ಮಾತಾಡ್ತಿದ್ದಾರೆ. ನನ್ನ ವಿಕಿಪೀಡಿಯ ಚೆಕ್ ಮಾಡಿಕೊಳ್ಳಲಿ.
ನಾನು 47ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಅಭಿನಯಿಸಿದ್ದೇನೆ. ನಾನೀಗ ಅವರ ಹೇಳಿಕೆಗಳ ಬಗ್ಗೆ ಮಾತನಾಡುವುದಿಲ್ಲ. ಸದ್ಯಕ್ಕೆ ನಾನೀಗ ಕೆಲಸದ ಕಡೆ ಗಮನ ಹರಿಸಿದ್ದೇನೆ. ಹಿಂದಿ ಸಿನಿಮಾಗೆ ರೆಡಿಯಾಗ್ತಿದ್ದು ನಿಮ್ಮ ಹಾರೈಕೆ ಬೇಕಾಗಿದೆ ಎಂದು ಹೇಳಿದ್ದಾರೆ.
Published On - 12:26 pm, Thu, 3 September 20