ಮನೆಯೊಳಗೆ ಉಗುರು ಕತ್ತರಿಸಬಾರದು, ಬಾಯಲ್ಲಿ ಉಗುರು ಕಚ್ಚಬಾರದು.. ಅನ್ನೋದೇಕೆ?

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭ್ಯಾಸವಿರುತ್ತೆ. ಅವುಗಳಲ್ಲಿ ಕೆಲವು ಒಳ್ಳೆಯ ಅಭ್ಯಾಸಗಳಾಗಿದ್ರೆ, ಮತ್ತೆ ಕೆಲವು ಕೆಟ್ಟ ಅಭ್ಯಾಸಗಳಾಗಿರುತ್ತೆ. ಇಂತಹ ಅಭ್ಯಾಸಗಳಲ್ಲಿ ಕುಳಿತಿದ್ದಾಗ ಕಾಲನ್ನು ಅಲ್ಲಾಡಿಸೋದು, ಕೂದಲನ್ನು ಬಾಯಲ್ಲಿ ಕಚ್ಚುತ್ತಿರೋದು, ಹಾಗೂ ಉಗುರು ಕಚ್ಚುವುದನ್ನು ನೋಡಿರ್ತೀವಿ. ಧರ್ಮಶಾಸ್ತ್ರದ ಪ್ರಕಾರ, ಈ ಎಲ್ಲಾ ಅಭ್ಯಾಸಗಳು ಕೆಟ್ಟ ಅಭ್ಯಾಸಗಳು ಎನ್ನಲಾಗುತ್ತೆ. ಕೆಲವರು ತೀವ್ರ ಒತ್ತಡವಿರುವಾಗ ಉಗುರು ಕಚ್ಚುವ ಕೆಟ್ಟ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಪುರಾಣಗಳ ಪ್ರಕಾರ, ಉಗುರು ಕಚ್ಚುವುದು ರಾಕ್ಷಸ ಗುಣವನ್ನು ಪ್ರೇರೇಪಿಸುತ್ತೆ ಅಂತಾ ಹೇಳಲಾಗುತ್ತೆ. ಆರೋಗ್ಯದ ದೃಷ್ಟಿಯಿಂದ ಹೇಳೋದಾದ್ರೆ, ಉಗುರು ಕಚ್ಚುವುದರಿಂದ, ಉಗುರಿನಲ್ಲಿನ […]

ಮನೆಯೊಳಗೆ ಉಗುರು ಕತ್ತರಿಸಬಾರದು, ಬಾಯಲ್ಲಿ ಉಗುರು ಕಚ್ಚಬಾರದು.. ಅನ್ನೋದೇಕೆ?
Follow us
ಆಯೇಷಾ ಬಾನು
|

Updated on:Nov 23, 2020 | 11:46 AM

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭ್ಯಾಸವಿರುತ್ತೆ. ಅವುಗಳಲ್ಲಿ ಕೆಲವು ಒಳ್ಳೆಯ ಅಭ್ಯಾಸಗಳಾಗಿದ್ರೆ, ಮತ್ತೆ ಕೆಲವು ಕೆಟ್ಟ ಅಭ್ಯಾಸಗಳಾಗಿರುತ್ತೆ. ಇಂತಹ ಅಭ್ಯಾಸಗಳಲ್ಲಿ ಕುಳಿತಿದ್ದಾಗ ಕಾಲನ್ನು ಅಲ್ಲಾಡಿಸೋದು, ಕೂದಲನ್ನು ಬಾಯಲ್ಲಿ ಕಚ್ಚುತ್ತಿರೋದು, ಹಾಗೂ ಉಗುರು ಕಚ್ಚುವುದನ್ನು ನೋಡಿರ್ತೀವಿ. ಧರ್ಮಶಾಸ್ತ್ರದ ಪ್ರಕಾರ, ಈ ಎಲ್ಲಾ ಅಭ್ಯಾಸಗಳು ಕೆಟ್ಟ ಅಭ್ಯಾಸಗಳು ಎನ್ನಲಾಗುತ್ತೆ.

ಕೆಲವರು ತೀವ್ರ ಒತ್ತಡವಿರುವಾಗ ಉಗುರು ಕಚ್ಚುವ ಕೆಟ್ಟ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಪುರಾಣಗಳ ಪ್ರಕಾರ, ಉಗುರು ಕಚ್ಚುವುದು ರಾಕ್ಷಸ ಗುಣವನ್ನು ಪ್ರೇರೇಪಿಸುತ್ತೆ ಅಂತಾ ಹೇಳಲಾಗುತ್ತೆ. ಆರೋಗ್ಯದ ದೃಷ್ಟಿಯಿಂದ ಹೇಳೋದಾದ್ರೆ, ಉಗುರು ಕಚ್ಚುವುದರಿಂದ, ಉಗುರಿನಲ್ಲಿನ ಮಣ್ಣು, ಕ್ರಿಮಿಕೀಟಗಳು ದೇಹಕ್ಕೆ ಪ್ರವೇಶಿಸುತ್ತೆ. ಇದ್ರಿಂದ ಆರೋಗ್ಯ ಹದಗೆಡುವುದಲ್ಲದೇ, ಅಶಾಂತಿ ಉಂಟುಮಾಡುತ್ತೆ ಎನ್ನಲಾಗುತ್ತೆ.

ಧರ್ಮಶಾಸ್ತ್ರದ ಪ್ರಕಾರ, ಉಗುರು ಕಚ್ಚುವ ಅಭ್ಯಾಸವನ್ನು ದಾರಿದ್ರ್ಯದ ಪ್ರತಿರೂಪ ಎನ್ನಲಾಗುತ್ತೆ. ಉಗುರು ಕಚ್ಚುವವರ ಬಳಿ ಲಕ್ಷ್ಮೀ ನೆಲೆಸುವುದಿಲ್ಲ ಹಾಗೂ ಅವರ ಬಳಿ ಹಣ ನಿಲ್ಲುವುದಿಲ್ಲ ಅಂತಾ ಧರ್ಮಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ವೈದ್ಯಶಾಸ್ತ್ರದ ಪ್ರಕಾರ, ಆಹಾರ ಸೇವಿಸುವ ಸಂದರ್ಭದಲ್ಲಿ ಅಕಸ್ಮಾತ್‌ ಉಗುರು ನಮ್ಮ ದೇಹ ಸೇರಿದ್ರೆ ಕರುಳಿಗೆ ತೊಂದರೆಯಾಗುತ್ತೆ ಅಂತಾ ಹೇಳಲಾಗುತ್ತೆ. ಇದ್ರಿಂದ ಅನಾರೋಗ್ಯ ಸಂಭವಿಸುವ ಸಾಧ್ಯತೆ ಇರುತ್ತೆ ಎನ್ನಲಾಗುತ್ತೆ.

ಈ ಎಲ್ಲಾ ಕಾರಣಗಳಿಂದಲೇ ಉಗುರನ್ನು ಮನೆಯ ಒಳಗೆ ಕತ್ತರಿಸಬಾರದು ಹಾಗೂ ಬಾಯಲ್ಲಿ ಉಗುರು ಕಚ್ಚಬಾರದು ಎನ್ನಲಾಗುತ್ತೆ. ಇನ್ನು ವೈದ್ಯಶಾಸ್ತ್ರದ ಪ್ರಕಾರ, ಉಗುರು ಕಚ್ಚುವುದು ಕ್ಯಾಲ್ಸಿಯಂ ಕೊರತೆಯ ಲಕ್ಷಣ ಎನ್ನಲಾಗುತ್ತೆ.

ಕೆಲವರು ಮಾಡಲು ಕೆಲಸವಿಲ್ಲದಿದ್ದಾಗ, ಅಥವಾ ತೀವ್ರ ಒತ್ತಡದಲ್ಲಿದ್ದಾಗ ಉಗುರು ಕಚ್ಚುವ ಅಭ್ಯಾಸವನ್ನು ರೂಢಿಸಿಕೊಂಡಿರ್ತಾರೆ. ಇದರ ಅರ್ಥ ಅವರು ಒತ್ತಡದಿಂದ ಹೊರಬರುವ ಒಂದು ಕ್ರಿಯೆಯಾಗಿರುತ್ತೆ. ಆದ್ರೆ ಇದೇ ಅಭ್ಯಾಸದಿಂದ ಮುಂದಿನ ದಿನಗಳಲ್ಲಿ ಆರೋಗ್ಯ ಕೆಡುವ ಸಾಧ್ಯತೆ ಇರುತ್ತೆ ಹಾಗೂ ಇದ್ರಿಂದ ದಾರಿದ್ರ್ಯ ಲಕ್ಷ್ಮೀ ಆವರಿಸ್ತಾಳೆ ಅಂತಲೂ ಹೇಳಲಾಗುತ್ತೆ.

ಉಗುರು ಕಚ್ಚುವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳು ಬೀರುತ್ತೆ. ಅಷ್ಟಕ್ಕೂ ಉಗುರು ಕಚ್ಚುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು ಅಂದ್ರೆ, ಉಗುರಿನಲ್ಲಿನ ಕಲ್ಮಷ ಹೊಟ್ಟೆಸೇರಿ, ಹೊಟ್ಟೆಯಲ್ಲಿ ಜಂತು ಹುಳುವಿನ ಸಮಸ್ಯೆ ಉಂಟಾಗುತ್ತೆ. ಹಲ್ಲುಗಳು ಬಲಹೀನಗೊಳ್ಳುತ್ತೆ. ಕರುಳಿನ ಸಮಸ್ಯೆ ಉಂಟಾಗಿ ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ.

ಈ ಅಭ್ಯಾಸ ಇರುವವರು ಆದಷ್ಟು ಬೇಗ ಬಿಟ್ಟರೆ ಒಳ್ಳೆಯದು. ಇದ್ರಿಂದ ಸುಂದರ ಹಾಗೂ ಸ್ವಸ್ಥ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು.

Published On - 2:56 pm, Thu, 3 September 20

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ