ಲೋಕಸಭಾ ಚುನಾವಣೆ​: ಬಿಜೆಪಿ ಟಿಕೆಟ್​ ಸಿಕ್ಕ ಖುಷಿ ಹಂಚಿಕೊಂಡ ಅಭ್ಯರ್ಥಿಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 13, 2024 | 9:56 PM

ಲೋಕಸಭೆ ಚುನಾವಣೆಗೆ (Lok Sabha Election) ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು(ಮಾ.13) ಬಿಡುಗಡೆ ಮಾಡಿದೆ. ಅದರಂತೆ ಟಿಕೆಟ್​ ಪಡೆದ ಪ್ರಹ್ಲಾದ್​ ಜೋಶಿ, ವಿ.ಸೋಮಣ್ಣ ಹಾಗೂ ಡಾ.ಉಮೇಶ್​ ಜಾಧವ್​ ಸೇರಿದಂತೆ ಹಲವರು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ​: ಬಿಜೆಪಿ ಟಿಕೆಟ್​ ಸಿಕ್ಕ ಖುಷಿ ಹಂಚಿಕೊಂಡ ಅಭ್ಯರ್ಥಿಗಳು
ಬಿಜೆಪಿ ಟಿಕೆಟ್​ ಸಿಕ್ಕ ಖುಷಿ ಹಂಚಿಕೊಂಡ ಅಭ್ಯರ್ಥಿಗಳು
Follow us on

ಹುಬ್ಬಳ್ಳಿ, ಮಾ.13: ಲೋಕಸಭೆ ಚುನಾವಣೆಗೆ (Lok Sabha Election) ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು(ಮಾ.13) ಬಿಡುಗಡೆ ಮಾಡಿದೆ. ಅದರಂತೆ ಟಿಕೆಟ್​ ಪಡೆದವರು ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ‘ಇಂದು ದೇಶದಲ್ಲಿ 72 ಸ್ಥಾನಗಳಿಗೆ ಟಿಕೆಟ್ ಘೋಷಣೆಯಾಗಿದೆ. ಕರ್ನಾಟಕದಲ್ಲಿ 20 ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಅದರಲ್ಲಿ ಧಾರವಾಡಕ್ಕೆ ನನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನಲೆ ಮೋದಿ, ಜೆಪಿ ನಡ್ಡಾ ಹಾಗೂ ಅಮಿತ್ ಶಾ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.

‘ಇವತ್ತು ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೂ ಅಭಿನಂದನೆ ತಿಳಿಸುತ್ತೇನೆ. ಮೋದಿ ಅವರು ದೇಶದ ಅತ್ಯಂತ ಜನಪ್ರಿಯ ನಾಯಕರು, ನಾನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ. ಜೊತೆಗೆ ದೇಶದಲ್ಲಿ NDA 400 ಸ್ಥಾನ ಗೆಲ್ಲಲಿದೆ. ಈ ಮೂಲಕ ಮೂರನೇ ಬಾರಿಗೆ ನಾವು ದಾಖಲೆ ವಿಜಯ ಸಾಧಿಸುತ್ತೇವೆ. ಆದಷ್ಟು ಬೇಗ ಮುಂದಿನ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದರು.

ಇನ್ನು ಹೊಸ ಮುಖಗಳಿಗೆ ಮಣೆ ಹಾಕಿರುವ ವಿಚಾರ, ‘ ಗೆಲುವಿನ ಪ್ರಮಾಣ ನೋಡಿ ಕೆಲ ಕಡೆ ಬದಲಾವಣೆ ಆಗಿದ್ದು, ಇದು ಸಾಮಾನ್ಯ ಪ್ರಕ್ರಿಯೆಯ ಜೊತೆಗೆ ರಾಷ್ಟ್ರೀಯ ನಾಯಕರ ತೀರ್ಮಾನ ಎಂದರು. ಇನ್ನು ಕಟೀಲು ಅವರು ರಾಜ್ಯಾಧ್ಯಕ್ಷರಾಗಿದ್ದರು. ನಾವು ಯಾರನ್ನೂ ಕೈ ಬಿಡಲ್ಲ. ಅವರಿಗೆ ಜವಾಬ್ದಾರಿ ಕೊಡ್ತೀವಿ. ಎಲ್ಲವೂ ಸರಿಯಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಟಿಕೆಟ್ ಕೇಳೋ ಹಕ್ಕಿದೆ. ಕಾಂಗ್ರೆಸ್​ನಲ್ಲಿ ಅಭ್ಯರ್ಥಿಗಳೇ ಇಲ್ಲ. ಆದರೆ, ಬಿಜೆಪಿಯಲ್ಲಿ ದೊಡ್ಡ ಪಟ್ಟಿ ಇದೆ ಎಂದರು.

ಇದನ್ನೂ ಓದಿ:ಮಗನಿಗೆ ಬಿಜೆಪಿ ಟಿಕೆಟ್ ಮಿಸ್ ಆಗ್ತಿದ್ದಂತೆ ಸಿಡಿದೆದ್ದ ಈಶ್ವರಪ್ಪ, ಯಡಿಯೂರಪ್ಪ ವಿರುದ್ಧ ವಾಗ್ದಾಳಿ: ಬಂಡಾಯದ ಸುಳಿವು!

ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಪ್ರತಿಕ್ರಿಯೆ

ಸಂಸದ ಜಿಎಂ ಸಿದ್ದೇಶ್ವರ್ ಪತ್ನಿಗೆ ಲೋಕಸಭಾ ಟಿಕೆಟ್ ಒಲಿದಿದ್ದು, ಈ ಕುರಿತು​ ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ‘ರಾಷ್ಟ್ರೀಯ ಪಕ್ಷದಿಂದ ನಾನು ನಾಲ್ಕು ಬಾರಿ ಸಂಸದರಾಗಿ ಕೆಲಸ ಮಾಡಿದ್ದೇನೆ. ರಾಷ್ಟ್ರೀಯ ವರಿಷ್ಠರು, ರಾಜ್ಯ ನಾಯಕರಿಗೆ ನಮ್ಮ‌ ಕಾರ್ಯಕರ್ತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ . ಇಂದು ನಮ್ಮ ಮನೆಯವರಿಗೆ ಟಿಕೇಟ್ ಸಿಕ್ಕಿರುವುದು ಸಂತೋಷ ತಂದಿದೆ. ನಮ್ಮ ಪಕ್ಷದಲ್ಲಿರುವ ನಾಯಕರನ್ನು ಕಂಡು ಎಲ್ಲರನ್ನೂ ಮನವಿ ಮಾಡುತ್ತೇವೆ. ‘ನಮ್ಮಲ್ಲಿ ಯಾವುದೇ ಕುಟುಂಬ ರಾಜಕಾರಣ ಇಲ್ಲ. ಸಮೀಕ್ಷೇ‌ ನಡೆಸಿ, ನಂತರ ಯಾರು ಸೂಕ್ತ ಎಂದು ನಿರ್ಧಾರ ಮಾಡಿ ಟಿಕೆಟ್ ನೀಡಿದ್ದಾರೆ

‘ನನ್ನ ಪತ್ನಿ ಕಳೆದ ಮೂರು ಚುನಾವಣೆಯಲ್ಲಿ ನನ್ನ ಜೊತೆ ಇದ್ದು ಪಕ್ಷದ ಕೆಲಸ ಮಾಡಿದ್ದಾರೆ. ರೇಣುಕಾಚಾರ್ಯಗೆ ಕೂಡ ನನ್ನ ಮೇಲೆ ಅಪಾರವಾದ ಪ್ರೀತಿ ಇದೆ. ಮನೆ ಎಂದ ಮೇಲೆ ಗೊಂದಲಗಳು ಇದ್ದೇ ಇರುತ್ತೆ‌. ನಾವು ನಿವಾರಣೆ ಮಾಡುತ್ತೇವೆ. ಕಾಂಗ್ರೆಸ್ ನಲ್ಲಿ ಕೂಡ ಗೊಂದಲಗಳು ಇವೆ‌. ಬೇಗಾ ಟಿಕೆಟ್ ಅನೌನ್ಸ್ ಮಾಡಿದ್ದಕ್ಕೆ ಕೇಂದ್ರ ವರಿಷ್ಠರಿಗೆ ಹಾಗೂ ರಾಜ್ಯ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಡಾ.ಉಮೇಶ್​ ಜಾಧವ್​ಗೆ ಕಲಬುರಗಿ ಬಿಜೆಪಿ ಟಿಕೆಟ್ ಘೋಷಣೆ

ಕಲಬುರಗಿ ಲೋಕಸಭಾ ಟಿಕೆಟ್​ ನೀಡಿದ ಬೆನ್ನಲ್ಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ‘ಸಂಸದ ಡಾ ಉಮೇಶ್ ಜಾಧವ್, ‘
ನನ್ನ ಮೇಲೆ ನಂಬಿಕೆ ಇಟ್ಟು ಎರಡನೇ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಅವಕಾಶ ನೀಡಿದ್ದಾರೆ. ಅವರಿಗೆ‌ ಧನ್ಯವಾದಗಳನ್ನ ಅರ್ಪಿಸುತ್ತೆನೆ. ಪ್ರಜಾಪ್ರಭುತ್ವದಡಿ ಲೋಕಸಭೆ ಚುನಾವಣೆ ನಡೆಸಲು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:ಬಿಜೆಪಿ ಟಿಕೆಟ್ ಬೇಡವೆಂದು ಧಿಕ್ಕರಿಸಿ ಹೋಗಿದ್ದ ಭೋಜ್​ಪುರಿ ನಟ ಪವನ್​ ಸಿಂಗ್​ ನಿರ್ಧಾರ ಮತ್ತೆ ಬದಲು

ರಮೇಶ ಜಿಗಜಿಣಗಿಗೆ ಬಿಜೆಪಿ ಟಿಕೆಟ್; ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ

ವಿಜಯಪುರ: ಹಾಲಿ ಸಂಸದ ರಮೇಶ ಜಿಗಜಿಣಗಿಗೆ ಬಿಜೆಪಿ ಟಿಕೆಟ್ ಹಿನ್ನೆಲೆ ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ. ಟಿಕೆಟ್ ಪಡೆದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಸಿಹಿ ತಿನ್ನಿಸಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಬಳಿಕ ಪ್ರತಿಕ್ರಿಯಿಸಿದ ರಮೇಶ ಜಿಗಜಿಣಗಿ, ‘ಪಕ್ಷದಿಂದ ಟಿಕೆಟ್ ಘೋಷಣೆ ಮಾಡಿದಕ್ಕೆ ಸಂತಸ ತಂದಿದೆ. ಟಿಕೆಟ್ ಕ್ರೆಡಿಟ್‌ ನಮ್ಮ ರಾಷ್ಟ್ರೀಯ ನಾಯಕರು ಹಾಗೂ ಕಾರ್ಯಕರ್ತರಿಗೆ ಸಲ್ಲಬೇಕು. ಇದರಲ್ಲಿ ನನದ್ದೇನು ಪಾತ್ರ ಇಲ್ಲ, ಎಲ್ಲ ಕಾರ್ಯಕರ್ತರದ್ದು ಎಂದರು.

ಜನರು ನಮಗೆ ಆಶೀರ್ವಾದ ಮಾಡ್ತಾರೆ-ತುಮಕೂರು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ

ಬಿಜೆಪಿ-ಜೆಡಿಎಸ್ ಮೈತ್ರಿ ಈ ಬಾರಿ ಕ್ರಾಂತಿಯಾಗುತ್ತದೆ ಎಂದು ತುಮಕೂರು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ನನಗೆ ಈ ಬಾರಿ ಟಿಕೆಟ್​ ಸಿಕ್ಕಿದ್ದಕ್ಕೆ ‘ರಾಷ್ಟ್ರೀಯ ನಾಯಕರು, ರಾಜ್ಯದ ಬಿಜೆಪಿ ನಾಯಕರು ಹಾಗೂ ಬಿ.ಎಲ್.ಸಂತೋಷ್​​ಗೆ ನಾನು ಅಭಾರಿಯಾಗಿದ್ದೇನೆ ಎಂದರು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಮಾಧುಸ್ವಾಮಿ, ನಾವು ಎಲ್ಲಾ ಸೇರಿ ಕೆಲಸ ಮಾಡ್ತೇವೆ. ನಾನು ಯಾವುದೇ ಕ್ಷೇತ್ರ ಬಯಸಿರಲಿಲ್ಲ, ಪಕ್ಷ ಟಿಕೆಟ್ ಕೊಟ್ಟಿದೆ, ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ