ಕರ್ನಾಟಕದಲ್ಲಿ ಲೋಕಾಯುಕ್ತ ಮೆಗಾ ದಾಳಿ: ಯಾರ್ಯಾರ ಬಳಿ ಸಿಕ್ಕಿದ್ದೆಷ್ಟು? ಇಲ್ಲಿದೆ ಮಾಹಿತಿ

|

Updated on: Jul 19, 2024 | 8:16 PM

ಕರ್ನಾಟಕದಾದ್ಯಂತ ಇಂದು ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆ ಆಡಿದ್ದಾರೆ. 12 ಅಧಿಕಾರಿಗಳಿಗೆ ಸೇರಿದ 55 ಕಡೆ ದಾಳಿ ಮಾಡಿ ಶಾಕ್​ ನೀಡಿದ್ದಲ್ಲದೆ ಮೆಗಾ ತಲಾಶ್​ ಮಾಡಿದ್ದಾರೆ. ದಾಳಿ ವೇಳೆ ಅಧಿಕಾರಿಗಳೇ ಒಂದು ಕ್ಷಣ ಬೆಚ್ಚಿಬಿದಿದ್ದಾರೆ. ರೇಡ್​ ವೇಳೆ ಕೆಜಿಗಟ್ಟಲೆ ಚಿನ್ನಾಭರಣ, ಕೋಟಿ ಕೋಟಿ ನಗದು ಪತ್ತೆಯಾಗಿವೆ.

ಕರ್ನಾಟಕದಲ್ಲಿ ಲೋಕಾಯುಕ್ತ ಮೆಗಾ ದಾಳಿ: ಯಾರ್ಯಾರ ಬಳಿ ಸಿಕ್ಕಿದ್ದೆಷ್ಟು? ಇಲ್ಲಿದೆ ಮಾಹಿತಿ
ಕರ್ನಾಟಕದಲ್ಲಿ ಲೋಕಾಯುಕ್ತ ಮೆಗಾ ದಾಳಿ: ಯಾರ್ಯಾರ ಬಳಿ ಸಿಕ್ಕಿದ್ದೆಷ್ಟು? ಇಲ್ಲಿದೆ ಮಾಹಿತಿ
Follow us on

ಬೆಂಗಳೂರು, ಜುಲೈ 19: ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಲೋಕಾಯುಕ್ತ (Lokayukta Raid) ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. 12 ಅಧಿಕಾರಿಗಳಿಗೆ ಸೇರಿದ 55 ಕಡೆ ದಾಳಿ ನಡೆಸಿ ಜನ್ಮ ಜಾಲಾಡಿದ್ದಾರೆ. ಕೋಟಿ ಕುಬೇರರ ಕೋಟೆಗೆ ನುಗ್ಗಿದ್ದ ಲೋಕಾಯುಕ್ತ ತಂಡ ದಾಳಿ ವೇಳೆ ದಾಖಲೆಗಳು ಸೇರಿದಂತೆ ಚಿನ್ನಾಭರಣಗಳ ರಾಶಿ, ಫಳಫಳ ಹೊಳೆಯುವ ಬೆಳ್ಳಿ ಪಾತ್ರೆ ಮತ್ತು ಕಂತೆ ಕಂತೆ ನೋಟುಗಳು ಪತ್ತೆ ಆಗಿವೆ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ಮಾಹಿತಿ ನೀಡಲಾಗಿದೆ.

4 ಕೋಟಿ 36 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ

ಮೈಸೂರು ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್​​ಗೆ ಸೇರಿದ 7 ಕಡೆ ರೇಡ್ ಮಾಡಿದ್ದು ಈ ವೇಳೆ 5,38,71,500 ಮೌಲ್ಯದ ಆಸ್ತಿ ಪತ್ತೆ ಆಗಿದೆ. 2 ಸೈಟ್, 1 ಮನೆ, 1 ವಾಣಿಜ್ಯ ಸಂಕೀರ್ಣ, ಕೃಷಿ ಜಮೀನು ಸೇರಿ ಒಟ್ಟು 4 ಕೋಟಿ 36 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ ಆಗಿದೆ. 58 ಲಕ್ಷ ನಗದು, 14,71,500 ಮೌಲ್ಯದ ಚಿನ್ನಾಭರಣ, 30 ಲಕ್ಷ ರೂ ಮೌಲ್ಯದ ವಾಹನಗಳು ಸೇರಿದಂತೆ ಚೇತನ್​ ಕುಮಾರ್ ಬಳಿ 1,02,71,500​ ಮೌಲ್ಯ ಚರಾಸ್ತಿ ಪತ್ತೆಯಾಗಿದೆ.

ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಚಿನ್ನಾಭರಣ ಬ್ಯಾಗ್ ಪಕ್ಕದ ಮನೆಗೆಸೆದ ಅಖ್ತರ್‌ ಅಲಿ, ಮುಂದೇನಾಯ್ತು?

ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ರಮೇಶ್​ಗೆ ಸೇರಿದ 4 ಕಡೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಿದ್ದು, ಈ ವೇಳೆ 4,08,00,000 ಮೌಲ್ಯದ ಆಸ್ತಿ, ಎರಡು ವಾಸದ ಮನೆಗಳು, 31,50,000 ಮೌಲ್ಯದ ಚಿನ್ನಾಭರಣ, 20,00,000 ರೂ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು, 1,12,00,000 ರೂ. ಮೌಲ್ಯದ ಇತರೆ ವಸ್ತುಗಳು ಹಾಗೂ 15,00,000 ಮೌಲ್ಯದ ವಾಹನಗಳು ಪತ್ತೆಯಾಗಿದೆ.

2,68,79,321 ರೂ. ಮೌಲ್ಯದ ಆಸ್ತಿ ಪತ್ತೆ

ಬೆಂಗಳೂರು ಉತ್ತರ ಕಂದಾಯ ಸಹಾಯಕ ಆಯುಕ್ತ ಮಂಜುನಾಥ್ ಟಿ ಆರ್​ ಗೆ ಸಂಬಂಧಿಸಿದ ಒಟ್ಟು 4 ಸ್ಥಳಗಳಲ್ಲಿ ಶೋಧ ಮಾಡಲಾಗಿದ್ದು, ದಾಳಿ ವೇಳೆ 1 ನಿವೇಶನ, 1 ವಾಸದ ಮನೆ, 3 ಎಕರೆ 12 ಗುಂಟೆ ಕೃಷಿ ಜಮೀನು, 4,00,000 ರೂ ನಗದು, 67,63,630 ರೂ ಬೆಲೆ ಬಾಳುವ ಚಿನ್ನಾಭರಣಗಳು, 8,00,000 ರೂ ಬೆಲೆಬಾಳುವ ವಾಹನಗಳು, 20,12,691 ರೂ. ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಸೇರಿ 2,68,79,321 ರೂ. ಮೌಲ್ಯದ ಆಸ್ತಿ ಪತ್ತೆ ಆಗಿದೆ.

ಅಪರ ನಿರ್ದೇಶಕ ಮುದ್ದುಕುಮಾರ್​​ಗೆ ಸೇರಿದ 10 ಸ್ಥಳಗಳಲ್ಲಿ ಶೋಧ ಮಾಡಿದ್ದ ಲೋಕಾ ದಾಳಿ ವೇಳೆ 3 ವಾಸದ ಮನೆಗಳು, 6 ಎಕರೆ 20 ಗುಂಟೆ ಕೃಷಿ ಜಮೀನು, 1 ಫಾರ್ಮ್ ಹೌಸ್, 1,13,000 ರೂ. 88,75,915 ರೂ ಬೆಲೆ ಬಾಳುವ ಚಿನ್ನಾಭರಣಗಳು, 35,40,000 ರೂ. ವಾಹನಗಳು, 3,00,00,000 ಮೌಲ್ಯದ ತರುಣ್ ಎಂಟರ್ ಪ್ರೈಸಸ್ 1 ಶೆಡ್, 68,86,000 ರೂ ಬೆಲೆಬಾಳುವ ಇತರೆ ಉಳಿತಾಯ ಸೇರಿ ಒಟ್ಟು 7,41,44,915 ರೂ. ಮೌಲ್ಯದ ಆಸ್ತಿ ಪತ್ತೆ ಆಗಿದೆ.

ಪೌರಾಯುಕ್ತ ಬಳಿ 4,45,81,000 ರೂ ಆಸ್ತಿ ಪತ್ತೆ

ಕೆಎಂಎಎಸ್​ ಪೌರಾಯುಕ್ತ ಕೆ. ನರಸಿಂಹಮೂರ್ತಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ದಾಳಿ ಮಾಡಿದ್ದು, 2 ನಿವೇಶನ, 2 ವಾಸದ ಮನೆಗಳು, 6,00,000 ರೂ. ನಗದು, 22,58,000 ರೂ ಚಿನ್ನಾಭರಣಗಳು, 16,00,000 ರೂ ವಾಹನಗಳು, 11,23,000 ರೂ ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ಸೇರಿ ಒಟ್ಟು  4,45,81,000 ರೂ ಆಸ್ತಿ ಪತ್ತೆ ಆಗಿದೆ.

ಮಂಗಳೂರು ಪಾಲಿಕೆ ಆಯುಕ್ತ ಸಿ.ಎಲ್​.ಆನಂದ್​ಗೆ ಸಂಬಂಧಿಸಿದ 6 ಕಡೆ ದಾಳಿ ಮಾಡಲಾಗಿದ್ದು,  2,77,90,000 ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಗಿದೆ. 3 ವಾಸದ ಮನೆಗಳು, 4 ಎಕರೆ 27 ಗುಂಟೆ ಕೃಷಿ ಜಮೀನು, 19,40,000 ರೂ. ಮೌಲ್ಯದ ಚಿನ್ನಾಭರಣ, 20,50,000 ರೂ. ಮೌಲ್ಯದ ವಾಹನಗಳು, 10,00,000 ಜಮೀನು ಖರೀದಿಸಲು ಮುಂಗಡ ಹಣ, ಹೆಂಡತಿ, ಮಕ್ಕಳ ಹೆಸರಿನ ಬ್ಯಾಂಕ್ ಅಕೌಂಟ್​ನಲ್ಲಿ 16 ಲಕ್ಷ ರೂ. ಪತ್ತೆ ಆಗಿದೆ.

ಮಂಗಳೂರು ಕೆಐಎಡಿಬಿ ಕಚೇರಿ ಪ್ರಥಮ ದರ್ಜೆ ಸಹಾಯಕ ಬಿ.ವಿ.ರಾಜ ಸಂಬಂಧಿಸಿದ 3 ಕಡೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ 5,51,07,000 ಮೌಲ್ಯದ ಆಸ್ತಿ, 1 ನಿವೇಶನ, 6 ವಾಸದ ಮನೆಗಳು, 7,000 ನಗದು, 40,00,000 ಮೌಲ್ಯದ ಚಿನ್ನಾಭರಣ, 32,00,000 ಮೌಲ್ಯದ ವಾಹನ, 25,00,000 ಮೌಲ್ಯದ ಗೃಹೋಪಯೋಗಿ ವಸ್ತುಗಳು ಮತ್ತು 50,00,000 ಮೌಲ್ಯದ ವಸ್ತುಗಳು ಪತ್ತೆ ಆಗಿವೆ.

ಇದನ್ನೂ ಓದಿ: ಕರ್ನಾಟಕದ 55 ಕಡೆ ಲೋಕಾಯುಕ್ತ ದಾಳಿ, ಅಧಿಕಾರಿಗಳ ಮನೆಯಲ್ಲಿ ತಲಾಶ್​

ಯಾದಗಿರಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಲವಂತ್ ರಾಥೋಡ್ ಲೋಕಾ ಶಾಕ್ ನೀಡಿದ್ದು, ದಾಳಿ ವೇಳೆ 1,69,86,448 ಆಸ್ತಿಪಾಸ್ತಿ, 5 ನಿವೇಶನಗಳು, 1 ವಾಸದ ಮನೆ, 3,68,100 ನಗದು ಪತ್ತೆವಾಗಿದೆ. 17,59,348 ರೂ. ಮೌಲ್ಯದ ಚಿನ್ನಾಭರಣಗಳು, 18,64,000 ರೂ. ಮೌಲ್ಯದ ವಾಹನಗಳು, 12,00,000 ರೂ. ಮೌಲ್ಯದ ಇತರೆ ವಸ್ತುಗಳು ಪತ್ತೆಯಾಗಿದೆ.

ಶಿವಮೊಗ್ಗ ಜಿಲ್ಲೆ ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್​ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧ ಮಾಡಲಾಗಿದ್ದು, 2, ನಿವೇಶನಗಳು, 2 ವಾಸದ ಮನೆಗಳು, 5 ಎಕರೆ 14 ಗುಂಟೆ ಕೃಷಿ ಜಮೀನು, 5,71,640 ರೂ. ನಗದು, 12,80,186 ರೂ ಚಿನ್ನಾಭರಣಗಳು, 1,76,000 ರೂ. ವಾಹನಗಳು, 7,00,000 ರೂ ಬೆಲೆಬಾಳುವ ಇತರೆ ವಸ್ತುಗಳು ಸೇರಿ ಒಟ್ಟು 2,19,37,826 ರೂ, ಮೌಲ್ಯದ ಆಸ್ತಿ ಪತ್ತೆ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:09 pm, Fri, 19 July 24