ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನ ಮೇಲೆ ಲಾರಿ ಚಾಲಕರು ಹಲ್ಲೆ ನಡೆಸಿದ್ದು, ಸ್ಥಳಕ್ಕೆ ಮಾಳಮಾರುತಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಸ್ ನಿಪ್ಪಾಣಿ ಬಳಿ ಲಾರಿಯನ್ನು ಓವರ್ಟೇಕ್ ಮಾಡಿ ಬೆಳಗಾವಿಯತ್ತ ಬರುತ್ತಿತ್ತು. ಈ ವೇಳೆ ಪೂನಾ – ಕಾರವಾರ ಮಾರ್ಗದ ಸರ್ಕಾರಿ ಬಸ್ ಚಾಲಕ ಮತ್ತು ಲಾರಿ ಚಾಲಕರ ನಡುವೆ ಗಲಾಟೆಯಾಗಿದೆ. ಲಾರಿ ಚಾಲಕ ತನ್ನ ಸ್ನೇಹಿತರನ್ನು ಕರೆಯಿಸಿ ನಗರದತ್ತ ಪ್ರವೇಶಿಸುತ್ತಿದ್ದ ಬಸ್ ಅನ್ನು ತಡೆದು ಬಸ್ ಚಾಲಕನ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದಾರೆಂಬ ಆರೋಪ ಕೇಳಿಬಂದಿದೆ.
ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ; ಕರ್ನಾಟಕದ ವಿವಿಧ ಭಾಗಗಳಲ್ಲಿ ಧರಣಿ
Published On - 3:37 pm, Sat, 6 February 21