AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರಲ್ಲಿ ಚೀಟಿ ಹೆಸರಲ್ಲಿ ಮಹಾಮೋಸ.. ಲಕ್ಷಾಂತರ ರೂಪಾಯಿ ದೋಖಾ, ಬೀದಿಗೆ ಬಿದ್ದಿವೆ ಹತ್ತಾರು ಕುಟುಂಬಗಳು

chit fund Scam ರಾಜ್ಯದಲ್ಲಿ ಚೀಟಿ ದೋಖಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಚೀಟಿ ಹೆಸ್ರಲ್ಲಿ ಮೋಸ ಮಾಡಿ ಎಸ್ಕೇಪ್ ಆಗೋರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇದೇ ರೀತಿ ಕಲ್ಪತರು ನಾಡು ತುಮಕೂರಿನಲ್ಲಿ ಚೀಟಿಯ ಹೆಸ್ರಲ್ಲಿ ಹತ್ತಾರು ಲಕ್ಷ ರೂಪಾಯಿ ಮೋಸ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ತುಮಕೂರಲ್ಲಿ ಚೀಟಿ ಹೆಸರಲ್ಲಿ ಮಹಾಮೋಸ.. ಲಕ್ಷಾಂತರ ರೂಪಾಯಿ ದೋಖಾ, ಬೀದಿಗೆ ಬಿದ್ದಿವೆ ಹತ್ತಾರು ಕುಟುಂಬಗಳು
ಚೀಟಿ ಹೆಸರಲ್ಲಿ ಮಹಾಮೋಸಕ್ಕೆ ಒಳಗಾದವರು.
ಆಯೇಷಾ ಬಾನು
| Edited By: |

Updated on:Feb 06, 2021 | 2:39 PM

Share

ತುಮಕೂರು: ಅಷ್ಟೋ ಇಷ್ಟೋ ದುಡ್ಡು ಹೊಂದಿಸಿ, ನೂರಾರು ಕನಸು ಕಂಡಿದ್ದವರೆಲ್ಲ ಇಂದು ಪರದಾಡುವಂತಾಗಿದೆ. ಅತ್ತ ಹಣವೂ ಇಲ್ದೆ, ಇತ್ತ ಹಣ ಪಡೆದವರೂ ಪತ್ತೆಯಾಗದೆ ನ್ಯಾಯಕ್ಕಾಗಿ ಈ ಮಹಿಳೆಯರು ಅಂಗಲಾಚುತ್ತಿದ್ದಾರೆ. ತುಮಕೂರಿನ ಮಂಜುನಾಥ್ ನಗರಲ್ಲಿ ವಾಸವಾಗಿದ್ದ ರಜನಿ ಹಾಗೂ ಕೃಷ್ಣಮೂರ್ತಿ ದಂಪತಿ, ಸುಮಾರು 30 ವರ್ಷದಿಂದಲೂ ಚೀಟಿ ಮತ್ತು ಬಡ್ಡಿ ವ್ಯವಹಾರ ಮಾಡುತ್ತಿದ್ದರು. ಚೀಟಿ ವ್ಯವಹಾರಕ್ಕೆ ಮೊದಲು ಬಟ್ಟೆ ವ್ಯಾಪಾರ ಮಾಡುತ್ತ ಅಕ್ಕಪಕ್ಕದವರ ವಿಶ್ವಾಸ ಗಳಿಸಿದ್ದ ದಂಪತಿ ನಂತರ ಶುರುಮಾಡಿದ್ದೇ ಚೀಟಿ ವ್ಯವಹಾರ. ಮೊದಲಿಗೆ 1 ಲಕ್ಷ, 2 ಲಕ್ಷ, 5ಲಕ್ಷದ ಚೀಟಿ ನಡೆಸುತ್ತಿದ್ದರು. ಇದನ್ನೇ ವೃತ್ತಿ ಮಾಡ್ಕೊಂಡು ಚೀಟಿ ವ್ಯವಹಾರ ಮುಂದುವರಿಸಿದ್ದರು. ಹೀಗೆ ಮೊದಲೆಲ್ಲ ಒಂದು ಚೀಟಿಗೆ ಹಣ ಹೂಡಿಕೆ ಮಾಡಿದವರು, ನಂತರ ತಮ್ಮದೇ 2, 3 ಚೀಟಿ ಹಾಕುತ್ತಾ ಬಂದಿದ್ದರು. ಜೊತೆಯಲ್ಲಿ ಅಕ್ಕಪಕ್ಕದ ಮನೆಯವರ ಬಳಿ ಹಾಗೂ ಸಂಬಂಧಿಕರಿಂದಲೂ ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿಸಿದ್ದರು. ಆದರೆ, ಈಗ ಅವರು ಚೀಟಿ ಕಟ್ಟಿದ ಹಣ ಈ ದಂಪತಿ ಪಾಲಾಗಿದೆ. ಹತ್ತಾರು ಲಕ್ಷ ಮೋಸ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಚಿಟ್​ ಚೀಟ್​ ವೃತ್ತಾಂತ ತಮ್ಮ ಹಣಕ್ಕೆ ಮೋಸ ಆಗಿದೆ ಅಂತಾ ಗೊತ್ತಾಗುತ್ತಿದ್ದಂತೆ ಮೋಸ ಮಾಡಿದವರ ಮನೆ ಎದುರು ಜಮಾಯಿಸಿದ ಜನ, ಅಳಲು ತೋಡಿಕೊಂಡರು. ಭವಿಷ್ಯದ ದೃಷ್ಟಿಯಿಂದ ನಂಬಿ ಹಣ ಹೂಡಿಕೆ ಮಾಡಿದ್ದರೆ ಹೀಗೆ ಮೋಸವಾಯ್ತಲ್ಲಾ ಅಂತಾ ಬೇಸರದಲ್ಲಿದ್ದರು. ಜನರ ಬಳಿ ಹಣ ಪಡೆದು ರಜನಿ, ಕೃಷ್ಣಮೂರ್ತಿ ತಮ್ಮಿಬ್ಬರು ಮಕ್ಕಳಿಗೆ ಮೈಸೂರು ಹಾಗೂ ಬೆಂಗಳೂರಲ್ಲಿ ಆಸ್ತಿ ಮಾಡಿ, ಇಲ್ಲಿರುವ ಮನೆಯನ್ನೂ ಲೀಸ್‌ಗೆ ನೀಡಿ ತಲೆ ಮರೆಸಿಕೊಂಡಿದ್ದಾರೆ ಅಂತಾ ಆರೋಪಿಸುತ್ತಾ ಇದ್ದರು.

ತುಮಕೂರಿನ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಚೀಟಿ ಅಥವಾ ಬಡ್ಡಿ ವ್ಯವಹಾರ ಅಂತಾ ಮತ್ತೊಬ್ಬರನ್ನ ನಂಬಿಹೋಗುವ ಮುನ್ನ ಎಚ್ಚರ ಅಗತ್ಯ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಈ ರೀತಿ ಮೋಸ ಮಾಡಿ ಎಸ್ಕೇಪ್ ಆಗೋರ ಸಂಖ್ಯೆಯೇ ಹೆಚ್ಚಾಗುತ್ತಿದೆ.

ಅಜ್ಮೆರಾ ಚಿಟ್ ಫಂಡ್​​ನ ತಬ್ರೇಜ್ ಮನೆ ಮೇಲೆ ತಡರಾತ್ರಿ ಸಿಸಿಬಿ ದಾಳಿ

Published On - 2:33 pm, Sat, 6 February 21