ಸಾರಿಗೆ ನೌಕರರ ಮುಷ್ಕರದಿಂದ ಹುಬ್ಬಳ್ಳಿ ಗ್ರಾಮಾಂತರ ವಿಭಾಗಕ್ಕೆ 6 ಕೋಟಿ ನಷ್ಟ

ಮುಷ್ಕರದ ಆರಂಭದ ದಿನ ಏಪ್ರಿಲ್ 7 ರಂದು ಯಾವುದೇ ಬಸ್ ಡಿಪೋಗಳಿಂದ ಹೊರ ಬರಲಿಲ್ಲ. ನಂತರ ನಾಲ್ಕು ದಿನ ಬೆರಳೆಣಿಕೆಯ ಬಸ್​ಗಳಷ್ಟೇ ಸಂಚರಿಸಿದ್ದವು. ನಂತರದ ಅವಧಿಯಲ್ಲಿ ಕೆಲ ಬಸ್​ಗಳ ಸಂಚಾರ ಇದ್ದರೂ ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿತ್ತು.

ಸಾರಿಗೆ ನೌಕರರ ಮುಷ್ಕರದಿಂದ ಹುಬ್ಬಳ್ಳಿ ಗ್ರಾಮಾಂತರ ವಿಭಾಗಕ್ಕೆ 6 ಕೋಟಿ ನಷ್ಟ
ಪ್ರಾತಿನಿಧಿಕ ಚಿತ್ರ
Follow us
sandhya thejappa
|

Updated on: Apr 25, 2021 | 9:26 AM

ಹುಬ್ಬಳ್ಳಿ: ಆರನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸಿದ ಮುಷ್ಕರದಿಂದಾಗಿ ವಾಯವ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗಕ್ಕೆ ಅಂದಾಜು ಆರು ಕೋಟಿ ರೂಪಾಯಿ ಸಾರಿಗೆ ಆದಾಯ ನಷ್ಟವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ 2,110 ಸಿಬ್ಬಂದಿಗಳಿದ್ದಾರೆ. 470 ಬಸ್​ಗಳಿವೆ. ಈ ಬಸ್​ಗಳು ಪ್ರತಿದಿನ 400 ರಿಂದ 415 ಅನುಸೂಚಿ ಮಾರ್ಗಗಳಲ್ಲಿ 1.4 ಲಕ್ಷ ಕಿಲೋಮೀಟರ್ ಕ್ರಮಿಸುತ್ತಿದ್ದವು. ನಿತ್ಯ 1.2 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಇದರಿಂದ ಸಂಸ್ಥೆಗೆ 40 ರಿಂದ 45 ಲಕ್ಷ ಸಾರಿಗೆ ಆದಾಯ ಸಂಗ್ರಹವಾಗುತ್ತಿತ್ತು.

ಮುಷ್ಕರದ ಆರಂಭದ ದಿನ ಏಪ್ರಿಲ್ 7 ರಂದು ಯಾವುದೇ ಬಸ್ ಡಿಪೋಗಳಿಂದ ಹೊರ ಬರಲಿಲ್ಲ. ನಂತರ ನಾಲ್ಕು ದಿನ ಬೆರಳೆಣಿಕೆಯ ಬಸ್​ಗಳಷ್ಟೇ ಸಂಚರಿಸಿದ್ದವು. ನಂತರದ ಅವಧಿಯಲ್ಲಿ ಕೆಲ ಬಸ್​ಗಳ ಸಂಚಾರ ಇದ್ದರೂ ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿತ್ತು. ಅಲ್ಲದೇ ಯುಗಾದಿ, ಅಂಬೇಡ್ಕರ್ ಜಯಂತಿ ಪ್ರಯುಕ್ತ ಸರಣಿ ರಜೆ ದಿನಗಳಲ್ಲಿ ಹೆಚ್ಚಿನ ಜನ ಸಂಚಾರ ಹಾಗೂ ಹೆಚ್ಚುವರಿ ಸಾರಿಗೆ ಆದಾಯ ನಿರೀಕ್ಷಿಸಲಾಗಿತ್ತು. ಹಬ್ಬದ ವಿಶೇಷ ಬಸ್​ಗಳ ಕಾರ್ಯಾಚರಣೆಗೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಮುಷ್ಕರದಿಂದಾಗಿ ಹೆಚ್ಚುವರಿ ಬಸ್​ಗಳಿರಲಿ ನಿತ್ಯದ ಬಸ್​ಗಳನ್ನೇ ಕಾರ್ಯಾಚರಣೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಸಂಸ್ಥೆಗೆ ಬರಬೇಕಾಗಿದ್ದ ಬಹುತೇಕ ಆದಾಯ ಕೈ ತಪ್ಪಿದಂತಾಗಿದೆ.

ಸಾರಿಗೆ ನೌಕರು ನಡೆಸಿದ ಮುಷ್ಕರ ಮೊದಲೆ ನಷ್ಟದಲ್ಲಿ ನಡೆಯುತ್ತಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಗೆ ಮತ್ತೊಂದು ಕೊಡಲಿ ಪೆಟ್ಟು ನೀಡಿದೆ. ಅಲ್ಲದೆ ರಾಜ್ಯದಲ್ಲಿ ಮತ್ತೆ ಸೆಮಿ ಲಾಕ್​ಡೌನ್​ ಜಾರಿಯಲ್ಲಿದೆ. ಹೀಗಾಗಿ ಎಲ್ಲಾ ಕಡೆಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದೆ. ಸದ್ಯ ಜನ ಬಸ್ ಪ್ರಯಾಣದತ್ತ ಒಲುವು ತೋರಿಸುತ್ತಿಲ್ಲ. ಮೊದಲೆ ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ನಲುಗಿ ಹೋಗಿದ್ದ ಹುಬ್ಬಳ್ಳಿ ಗ್ರಾಮಂತರ ವಿಭಾಗ ಮತ್ತೆ ನಷ್ಟದ ಹಾದಿ ಹಿಡಿಯುತ್ತಿದೆ.

ಏಪ್ರಿಲ್ 7 ರಿಂದ ಆರಂಭವಾದ ಮುಷ್ಕರ ಸುಮಾರು 10 ದಿನಗಳ ಕಾಲ ನಡೆದಿದೆ. ಹೀಗಾಗಿ ನಮಗೆ ಬರಬೇಕಾದ ಆದಾಯದಲ್ಲಿ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ.‌ ಈ ಮಧ್ಯೆ ಮತ್ತೆ ಸೆಮಿ ಲಾಕ್​ಡೌನ್​ ಜಾರಿಯಲ್ಲಿದೆ. ಮುಷ್ಕರ ಅಂತ್ಯವಾದರು ಬಸ್​ಗ ಳತ್ತ ಜನ ಬರುತ್ತಿಲ್ಲ. ಒಟ್ಟು 6 ಕೋಟಿ ನಷ್ಟವಾಗಿದೆ ಎಂದು ಹುಬ್ಬಳ್ಳಿ ಗ್ರಾಮಂತರ ವಿಭಾಗಿಯ ನಿಯಂತ್ರಣಾಧಿಕಾರಿ ರಾಮನಗೌಡರು ತಿಳಿಸಿದ್ದಾರೆ.

ಇದನ್ನೂ ಓದಿ

ವೈದ್ಯಕೀಯ ಆಕ್ಸಿಜನ್ ಅಭಾವ; ಆಮ್ಲಜನಕವಿಲ್ಲದೆ ಜೀವ ಬಿಟ್ಟ ನವಜಾತ ಅವಳಿ ಶಿಶುಗಳು

ಬೆಳಗ್ಗೆ ಮಗನ ‘ಕಥೆಗೆ ಸಾವಿಲ್ಲ’ ಕೃತಿ ಬಿಡುಗಡೆ, ಸಂಜೆ ಕೊರೊನಾದಿಂದ ತಂದೆಯ ಸಾವು

(loss of 6 crore to Hubli rural countryside by transport workers strike)

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ