ಬಂದ್‌ಗೆ ಕರೆ: ನಷ್ಟ ಮಾಡಿದವರಿಂದಲೇ ವಸೂಲಿಗೆ ಆದೇಶ‌ ನೀಡಿದ್ದಿವಿ, ಏನಾಯ್ತು? ಎಂದು ಸರ್ಕಾರಕ್ಕೆ ವರದಿ ಕೇಳಿದ ಕೋರ್ಟ್

| Updated By: ಸಾಧು ಶ್ರೀನಾಥ್​

Updated on: Jan 18, 2022 | 2:01 PM

ಕರ್ನಾಟಕ ಬಂದ್‌ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ ಪಾಲನೆ ಸಂಬಂಧ ಫೆಬ್ರವರಿ 7ರೊಳಗೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ರವಿಕುಮಾರ್ ಕಂಚನಹಳ್ಳಿ ಮತ್ತಿತರರು ಈ ಸಂಬಂಧ PIL ಸಲ್ಲಿಸಿದ್ದರು.

ಬಂದ್‌ಗೆ ಕರೆ: ನಷ್ಟ ಮಾಡಿದವರಿಂದಲೇ ವಸೂಲಿಗೆ ಆದೇಶ‌ ನೀಡಿದ್ದಿವಿ, ಏನಾಯ್ತು? ಎಂದು ಸರ್ಕಾರಕ್ಕೆ ವರದಿ ಕೇಳಿದ ಕೋರ್ಟ್
ಹೈಕೋರ್ಟ್
Follow us on

ಬೆಂಗಳೂರು: ನಾನಾ ಸಂದರ್ಭಗಳಲ್ಲಿ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದರಿಂದ ನಷ್ಟವುಂಟಾಗಿದೆ. ಹಾಗೆ ನಷ್ಟವುಂಟು ಮಾಡಿದವರಿಂದಲೇ ವಸೂಲಿಗೆ ಆದೇಶ‌ ನೀಡಲಾಗಿತ್ತು. ಈ ಬಗ್ಗೆ ವರದಿ ಕೊಡಿ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ (karnataka high court) ಕೇಳಿದೆ. ಈ ಹಿಂದೆ ಡಿ.ಕೆ. ಶಿವಕುಮಾರ್ ಬಂಧನ ವೇಳೆ ಬಂದ್‌ಗೆ (karnataka bandh) ಕರೆ ನೀಡಲಾಗಿತ್ತು. 2019ರ ಸೆಪ್ಟೆಂಬರ್ 4ರಿಂದ 11ರವರೆಗೂ ಪ್ರತಿಭಟನೆಗಳು ನಡೆದಿದ್ದವು. ವಾಟಾಳ್ ನಾಗರಾಜ್ 2018ರಲ್ಲಿ ಬಂದ್‌ಗೆ ಕರೆ ಕೊಟ್ಟಿದ್ದರು. ಜನವರಿ 25, ಏಪ್ರಿಲ್ 12, ಫೆಬ್ರವರಿ 4ರಂದು ಬಂದ್ ನಡೆದಿತ್ತು. ಆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ನಷ್ಟ ಅಂದಾಜಿಸಲು ನ್ಯಾಯಾಧೀಶರ ನೇಮಕವಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ (karnataka government) ತಿಳಿಸಿದೆ.

ಇದೀಗ ಹೈಕೋರ್ಟ್ ಆದೇಶ ಪಾಲನೆ ಸಂಬಂಧ ಫೆಬ್ರವರಿ 7ರೊಳಗೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ರವಿಕುಮಾರ್ ಕಂಚನಹಳ್ಳಿ ಮತ್ತಿತರರು ಈ ಸಂಬಂಧ PIL ಸಲ್ಲಿಸಿದ್ದರು.

ಮಿಸ್ಟರ್ ಪ್ರಿನ್ಸಿಪಲ್ ಸೆಕ್ರೆಟರಿ ಕೋರ್ಟ್ ಆದೇಶದ ಅರ್ಥ ತಿಳಿದಿದೆಯೇ?: ಹೈಕೋರ್ಟ್ ಆಕ್ರೋಶ
ಹರಿಹರದ ನಿಲುವಾಗಿಲು ಗ್ರಾಮದ ಸ್ಥಳಾಂತರ ವಿಚಾರ ಪ್ರಗತಿ ವರದಿ ಸಲ್ಲಿಸದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಿಸ್ಟರ್ ಪ್ರಿನ್ಸಿಪಲ್ ಸೆಕ್ರೆಟರಿ ಕೋರ್ಟ್ ಆದೇಶದ ಅರ್ಥ ತಿಳಿದಿದೆಯೇ? ನಿಮ್ಮ ಕಚೇರಿಯಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರಾಗಿದ್ದೀರಿ. ವರದಿ ಸಲ್ಲಿಸದಿದ್ದರೆ ನೀವು ಹೈಕೋರ್ಟ್​​ಗೆ ಹಾಜರಾಗಬೇಕಿತ್ತು. ವಿಸಿ ಮೂಲಕ ಹಾಜರಾಗಲು ನಿಮಗೆ ಅನುಮತಿ ಕೊಟ್ಟವರಾರು? ನ್ಯಾಯಾಲಯವನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಹಿರಿಯ ಅಧಿಕಾರಿ ವಿರುದ್ಧ ಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಭವಿಷ್ಯದಲ್ಲಿ ಎಚ್ಚರಿಕೆಯಿಂದ ಇರುವಂತೆಯೂ ಉನ್ನತಾಧಿಧಿಕಾರಿ ತುಷಾರ್ ಗಿರಿನಾಥ್​​​ಗೆ ಹೈಕೋರ್ಟ್ ಎಚ್ಚರಿಕೆ ನೀಡಿತು. ಜನವರಿ 24ಕ್ಕೆ ಆದೇಶ ಅನುಪಾಲನಾ ವರದಿ ಸಲ್ಲಿಸಲು ಇದೇ ವೇಳೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್​ನಿಂದ ಸೂಚನೆ ಜಾರಿಯಾಯಿತು.

ಹೆತ್ತಮ್ಮ ಕೊರೊನಾದಿಂದ ಮೃತಪಟ್ಟ ಸುದ್ದಿ ತಿಳಿಸಿದರೂ ಬಾರದ ಮಗಳು
ಬೆಂಗಳೂರು: ಕಳೆದ ಎರಡೂವರೆ ವರ್ಷಗಳಿಂದ ಕಾಡುತ್ತಿರುವ ಕೊರೊನಾ ಜನರಲ್ಲಿ ಪ್ರೀತಿ, ವಿಶ್ವಾಸ, ಕರುಣೆಯನ್ನೇ ಮರೆ ಮಾಚಿದೆ. ಕೊರೊನಾದಿಂದ ಮೃತಪಟ್ಟ ಪೋಷಕರನ್ನು ನೋಡಲು ಮಕ್ಕಳು ಬರುತ್ತಿಲ್ಲ. ಪೋಷಕರಿಗೆ ಕೊರೊನಾ ತಗುಲಿದೆ ಎಂದು ತಿಳಿಯುತ್ತಿದ್ದಂತೆ ಅವರಿಂದ ದೂರ ಉಳಿಯುತ್ತಿದ್ದಾರೆ. ಇದೇ ರಿತಿ ಇಲ್ಲೊಂದು ಘಟನೆ ನಡೆದಿದೆ.

ಮಹಾಮಾರಿ ಕೊರೊನಾ ಮೂರನೇ ಅಲೆ ರಾಜ್ಯದಲ್ಲಿ ಶುರುವಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಕೊವೀಡ್ ನಿಂದ ಮೃತಪಟ್ಟ ತಾಯಿಯನ್ನ ನೋಡಲು ಮಗಳು ಬಂದಿಲ್ಲ. ಒಂದೂವರೆ ದಿನ ಕಳೆದ್ರು ತಾಯಿಯ ಅಂತಿಮ ದರ್ಶನಕ್ಕೆ ಮೃತ ತಾಯಿಯ ಮಗಳು ಬಂದಿದ್ದ. ಮಾನವೀಯ ಸಂಬಂಧಗಳನ್ನೂ ಕೊರೊನಾ ಕಿತ್ತುಕೊಂಡಿದೆ.

ಮೂಲತಃ ಮಂಡ್ಯದವರಾಗಿದ್ದ ಭಾಗ್ಯಲಕ್ಷ್ಮೀ (52) ಕೋವಿಡ್ ನಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ತಾಯಿ ಮೃತಪಟ್ಟಿರುವ ವಿಷಯವನ್ನು ಅಧಿಕಾರಿಗಳು ಫೋನ್ ಮೂಲಕ ತಿಳಿಸಿದ್ದಾರೆ. ಆದ್ರೆ ಮಗಳು ಇನ್ನೂ ಬರದ ಕಾರಣ ವಿಶ್ವ ಹಿಂದುಪರಿಷತ್ ಕಾರ್ಯಕರ್ತರು ಶವ ಸಂಸ್ಕಾರ ಮಾಡಲು ಮುಂದಾಗಿದ್ದು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸದ್ಯ ಈಗ ಹೆಬ್ಬಾಳ ಚಿರಶಾಂತಿ ಧಾಮದಲ್ಲಿ ಭಾಗ್ಯಲಕ್ಷ್ಮೀ ಶವ ಇರಿಸಲಾಗಿದೆ.

Also Read:
ರೈಲಿಗೆ ತಲೆ ಕೊಟ್ಟು ಯುವ ವೈದ್ಯನ ಆತ್ಮಹತ್ಯೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಬ್ಲ್ಯಾಕ್ ಮೇಲ್​ ಕರಿನೆರಳು!

ಸ್ವತಃ ಎಸ್​ಪಿಯೇ ಕಾರು ಕಳಿಸಿದ್ದಕ್ಕೆ ಪ್ರಕರಣ ಎಂಡ್​ ಆಯ್ತು ಅಂದ್ಕೊಂಡ್ರಾ? ತುರುವೇಕೆರೆ ಪೊಲೀಸರ ಕಾರುಬಾರಿಗೆ ಇಲ್ಲ ಬ್ರೇಕ್!

Published On - 1:10 pm, Tue, 18 January 22