Loading video

ನೆಲಮಂಗಲ ಬಳಿ ರಾಹೆ 4ರಲ್ಲಿ ಕಾರು-ಕೆಎಸ್ ಆರ್ ಟಿಸಿ ಬಸ್ ನಡುವೆ ಢಿಕ್ಕಿ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ

|

Updated on: Nov 13, 2023 | 4:38 PM

ಅಪಘಾತ ಸಂಭವಿಸಿದ ಕೂಡಲೇ, ಕಾರಿನ ಏರ್ ಬ್ಯಾಗ್ ಗಳು ತೆರೆದುಕೊಂಡಿದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಕಂಪನಿಯೊಂದರ ಮಾಲೀಕ ಶ್ರೀಧರ್ ಮತ್ತು ಅವರ ಪತ್ನಿ ಅಪಾಯದಿಂದ ಪಾರಾದರೆಂದು ಹೇಳಲಾಗಿದೆ. ನೆಲಮಂಗದ ಡಿವೈ ಎಸ್ ಪಿ ಜಗದೀಶ್ ಸ್ಥಳಕ್ಲೆ ಧಾವಿಸಿ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸ್ಥಗಿತಗೊಂಡಿದ್ದ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬೇಗೂರು (Begur) ಹೊರವಲಯದಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ (NH 4) ಇಂದು ಮಧ್ಯಾಹ್ಹ ಅಪಾಯಕಾರಿ ಸ್ವರೂಪದಲ್ಲಿ ಬಸ್ ಮತ್ತು ಕಾರಿನ ನಡುವೆ ಢಿಕ್ಕಿ ಸಂಭವಿಸಿದರೂ ಯಾರಿಗೂ ಪ್ರಾಣಾಪಾಯವಾಗದಿರೋದು ಅದೃಷ್ಟವಲ್ಲದೆ ಮತ್ತೇನೂ ಅಲ್ಲ. ತುಮಕೂರು ಕಡೆ ಸಾಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು (KSRTC bus) ಬೇಗೂರು ಬಳಿಯಿರುವ ಪಾಕಶಾಲ ಹೋಟೆಲ್ ಬಳಿಯಿಂದ ಹೆದ್ದಾರಿಯ ಕಡೆ ಬರುತ್ತಿದ್ದಾಗ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಢಿಕ್ಕಿಯಾದ ರಭಸಕ್ಕೆ ಕಾರು ಪಾರ್ಕಿಂಗ್ ಲಾಟ್ ಕಡೆ ಬಂದರೆ ಬಸ್ಸು ರಸ್ತೆ ವಿಭಜಕಕ್ಕೆ ಗುದ್ಟಿ ನಿಂತು ಬಿಟ್ಟಿದೆ. ಹಾಗೆ ನೋಡಿದರೆ, ಕಾರಿಗಿಂತ ಜಾಸ್ತಿ ಬಸ್ಸು ಜಖಂಗೊಂಡಿದೆ! ಅಪಘಾತ ಸಂಭವಿಸಿದ ಕೂಡಲೇ, ಕಾರಿನ ಏರ್ ಬ್ಯಾಗ್ ಗಳು ತೆರೆದುಕೊಂಡಿದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಕಂಪನಿಯೊಂದರ ಮಾಲೀಕ ಶ್ರೀಧರ್ ಮತ್ತು ಅವರ ಪತ್ನಿ ಅಪಾಯದಿಂದ ಪಾರಾದರೆಂದು ಹೇಳಲಾಗಿದೆ. ನೆಲಮಂಗದ ಡಿವೈ ಎಸ್ ಪಿ ಜಗದೀಶ್ ಸ್ಥಳಕ್ಲೆ ಧಾವಿಸಿ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸ್ಥಗಿತಗೊಂಡಿದ್ದ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ