ನೆಲಮಂಗಲ: ಜೀವನದಲ್ಲಿ ಜಿಗುಪ್ಸೆ ಬಂದು ರೈಲಿಗೆ ತಲೆಕೊಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹನುಮಂತೇಗೌಡನಪಾಳ್ಯದಲ್ಲಿ ನಡೆದಿದೆ. 40 ವರ್ಷದ ಗೌರೀಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಆತ್ಮಹತ್ಯೆಗೆ ಶರಣಾದ ಗೌರೀಶ್ ಶ್ರೀನಿವಾಸಪುರದ ನಿವಾಸಿ. ಜೀವನದಲ್ಲಿ ಜಿಗುಪ್ಸೆ ಬಂದು ಗೌರೀಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಡ್ನಿಂದ ಹೊಡೆದು ಯುವಕನ ಕೊಲೆ
ರಾಡ್ನಿಂದ ಹೊಡೆದು ಚಿಕ್ಕಪ್ಪನಿಂದಲೇ ಮಗನ ಕೊಲೆಯಾಗಿರುವ ಘಟನೆ ಧಾರವಾಡದ ಮುರುಘಾಮಠದ ಡಿಪೋ ಸರ್ಕಲ್ ಬಳಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆಕಾಶ್(30) ಎಂಬಾತನನ್ನ ಆತನ ಚಿಕ್ಕಪ್ಪ ಪ್ರಕಾಶ್ ಕೊಲೆಮಾಡಿದ್ದಾರೆ.
ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಆಕಾಶ್ನನ್ನು ಕಂಡು ಸಿಟ್ಟಿಗೆದ್ದ ಪ್ರಕಾಶ್ ರಾಡ್ನಿಂದ ಹೊಡೆದು ಕೊಲೆಗೈದಿದ್ದಾರೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.
Published On - 7:07 pm, Sun, 14 February 21