ಮದುವೆಯ ಮುನ್ನಾದಿನ ಈ ಯುವಕನ ಜೀವವೇ ಹೋಯ್ತು; ಒಂದುವಾರದಿಂದಲೂ ಇತ್ತು ಅನಾರೋಗ್ಯ

|

Updated on: May 03, 2021 | 10:17 PM

ನಿನ್ನೆ ಹುಬ್ಬಳ್ಳಿಯಲ್ಲೊಬ್ಬ ಯುವಕ ಬೆಳಗ್ಗೆ ಮದುವೆಯಾಗಿ ರಾತ್ರಿಯೇ ಸಾವನ್ನಪ್ಪಿದ್ದ. ಇವರ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿತ್ತು.

ಮದುವೆಯ ಮುನ್ನಾದಿನ ಈ ಯುವಕನ ಜೀವವೇ ಹೋಯ್ತು; ಒಂದುವಾರದಿಂದಲೂ ಇತ್ತು ಅನಾರೋಗ್ಯ
ಮೃತ ಯುವಕ
Follow us on

ಕಾರವಾರ: ನಾಳೆ ಮದುವೆಯಾಗಬೇಕಿದ್ದ ಯುವಕ ಇಂದು ಮೃತಪಟ್ಟಿದ್ದಾನೆ. ಈತನ ಸಾವಿಗೆ ಕೊರೊನಾ ಸೋಂಕು ಕಾರಣ ಎಂದು ಹೇಳಲಾಗಿದೆ. ಕಾರವಾರದ ನಂದಗದ್ದಾ ನಿವಾಸಿ ರೋಷನ್ ಪಡುವಳಕರ(32) ಮೃತ ಯುವಕ. ಪುಣೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೋಷನ್​ ಮದುವೆಗಾಗಿ ಕಾರವಾರಕ್ಕೆ ಬಂದಿದ್ದ. ಒಂದು ವಾರದಿಂದಲೂ ಅನಾರೋಗ್ಯವಿತ್ತು. ಈತನ ವಿವಾಹ ನಾಳೆ ಕಾರವಾರದಲ್ಲಿ ನಡೆಯುವುದಿತ್ತು.

ಇತ್ತೀಚೆಗೆ ಇಂಥ ದುರ್ಘಟನೆಗಳು ಪದೇಪದೆ ವರದಿಯಾಗುತ್ತಿವೆ. ನಿನ್ನೆ ಹುಬ್ಬಳ್ಳಿಯಲ್ಲೊಬ್ಬ ಯುವಕ ಬೆಳಗ್ಗೆ ಮದುವೆಯಾಗಿ ರಾತ್ರಿಯೇ ಸಾವನ್ನಪ್ಪಿದ್ದ. ಇವರ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿತ್ತು. ಹಾಗೇ ಏಪ್ರಿಲ್​ 29ರಂದು ಚಿಕ್ಕಮಗಳೂರಿನಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಪ್ರಥ್ವಿರಾಜ್​ ಎಂಬುವರು ಕೊರೊನಾ ಸೋಂಕಿನಿಂದ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೂ ಸಹ ಚಿಕಿತ್ಸೆ ಫಲಿಸದೆ ಮದುವೆಯಾಗಬೇಕಾಗಿದ್ದ ದಿನವೇ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಜನ ಜೀವ ಕಳೆದುಕೊಳ್ಳದಿರುವುದು ಮುಖ್ಯ; ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ತಪರಾಕಿ

ಆಮ್ಲಜನಕ ಸರಿಯಾಗಿ ಪೂರೈಸಿ ಎಂದು ಆಕ್ಸಿಜನ್​ ಘಟಕಕ್ಕೇ ಹೋಗಿ ಮನವಿ ಮಾಡಿದ ಸಚಿವ ನಾರಾಯಣ ಗೌಡ; ಕಂಪನಿಯಿಂದ ಸ್ಪಂದನೆ