AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆಗೆ ದಾಖಲಿಸಿಕೊಳ್ಳದಿದ್ದರೆ ಜೋರ್ ಮಾಡಬೇಕು, ಅಲ್ಲೇ ಧರಣಿ ಕೂರಬೇಕು; ಸಿದ್ದರಾಮಯ್ಯರಿಂದ ಶಾಸಕಿ ಕುಸುಮಾ ಶಿವಳ್ಳಿಗೆ ಪಾಠ

KIMS Hubli: ವಿಪಕ್ಷ ನಾಯಕ ಸಿದ್ದರಾಮಯ್ಯ, ‘ರೀ.. ಏನ್ ಮಾಡ್ತಾ ಇದ್ದೀರಿ ನೀವು ಡಾಕ್ಟರ್​ಗಳು. ಅವರನ್ನು ಅಡ್ಮಿಟ್ ಮಾಡಿಕೊಳ್ಳಿ, ಸೂಕ್ತ ಚಿಕಿತ್ಸೆ ಒದಗಿಸಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದರು.

ಆಸ್ಪತ್ರೆಗೆ ದಾಖಲಿಸಿಕೊಳ್ಳದಿದ್ದರೆ ಜೋರ್ ಮಾಡಬೇಕು, ಅಲ್ಲೇ ಧರಣಿ ಕೂರಬೇಕು; ಸಿದ್ದರಾಮಯ್ಯರಿಂದ ಶಾಸಕಿ ಕುಸುಮಾ ಶಿವಳ್ಳಿಗೆ ಪಾಠ
ವಿಪಕ್ಷ ನಾಯಕ ಸಿದ್ದರಾಮಯ್ಯ
guruganesh bhat
|

Updated on: May 03, 2021 | 10:49 PM

Share

ಬೆಂಗಳೂರು: ತಮ್ಮ ತಾಯಿಗೆ ಬೆಡ್​ ಸಿಕ್ಕಿಲ್ಲವೆಂದು ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ವರ್ಚುವಲ್ ಸಭೆಯಲ್ಲಿ ಕಣ್ಣೀರು ಹಾಕಿದ ವಿಚಾರವಾಗಿ ವಿಪಕ್ಷ ಸಿದ್ದರಾಮಯ್ಯ ತದನಂತರ ಶಾಸಕಿ ಕುಸುಮಾ ಶಿವಳ್ಳಿಗೆ ಕರೆ ಮಾಡಿದರು. ನಿಮ್ಮ ತಾಯಿಯವರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕಿತಾ? ನಾನು ಡಾ.ರಾಮಲಿಂಗಪ್ಪರಿಗೆ ಹೇಳಿದ್ದೇನೆ. ಆಸ್ಪತ್ರೆಗೆ ಅಡ್ಮಿಟ್​​ ಮಾಡಿಕೊಳ್ತಾರೆ, ಈ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸು. ಸೇರಿಸಿಕೊಳ್ಳದಿದ್ದರೆ ಜೋರ್​ ಮಾಡಬೇಕು, ಅಲ್ಲೇ ಧರಣಿ ಕೂರಬೇಕು ಎಂದು ದೂರವಾಣಿಯಲ್ಲಿಯೇ ಶಾಸಕಿ ಕುಸುಮಾ ಶಿವಳ್ಳಿಗೆ ಪಾಠ ಮಾಡಿದರು.

ಅದೇ ವೇಳೆ ಕಿಮ್ಸ್ ಆಸ್ಪತ್ರೆಯಲ್ಲೇ ಇದ್ದ ಶಾಸಕಿ ಕುಸುಮಾ ಶಿವಳ್ಳಿ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅವರಿಗೆ ಫೋನ್ ಕೊಟ್ಟರು. ಆಗಲೂ ಶಿಸ್ತಾಗಿ ಪಾಠ ಹೇಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ರೀ.. ಏನ್ ಮಾಡ್ತಾ ಇದ್ದೀರಿ ನೀವು ಡಾಕ್ಟರ್​ಗಳು. ಅವರನ್ನು ಅಡ್ಮಿಟ್ ಮಾಡಿಕೊಳ್ಳಿ, ಸೂಕ್ತ ಚಿಕಿತ್ಸೆ ಒದಗಿಸಿ’ ಎಂದು ಸೂಚನೆ ನೀಡಿದರು.

ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ ಅವರೇ ಕಣ್ಣೀರಾದವರು. ‘ನನ್ನ ತಾಯಿಗೆ ಕೊರೊನಾ ಸೋಂಕಿನಿಂದ ಸೀರಿಯಸ್ ಆಗಿದೆ. ಆದರೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ನನ್ನ ದಾಖಲಿಸಿಕೊಳ್ಳುತ್ತಿಲ್ಲ. ನನಗೆ ತುಂಬಾ ದುಃಖವಾಗುತ್ತಿದೆ’ ಎಂದು ಶಾಸಕಿ ಕುಸುಮಾ ಶಿವಳ್ಳಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಅತ್ತರು.

ಸಭೆಯ ಉಸ್ತುವಾರಿ ವಹಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಾಸಕಿ ಕುಸುಮಾ ಶಿವಳ್ಳಿಗೆ ಧೈರ್ಯ ತುಂಬಿದರು. ಕಿಮ್ಸ್‌ ಎಂಡಿ ಜತೆ ಮಾತಾಡುತ್ತೇನೆ. ಈಗಲೇ ದಾಖಲಾತಿ ದೊರೆಯುವಂತೆ ಮಾಡುತ್ತೇನೆ ಎಂದು ಇಬ್ಬರೂ ನಾಯಕರು ಶಾಸಕಿಯ ದುಃಖ ಇಳಿಸಿ ಸಮಾಧಾನ ಮಾಡಿದರು. ಆಗಲೇ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಮ್ಸ್‌ ನಿರ್ದೇಶಕರಿಗೆ ಕರೆ ಮಾಡಿ ‘ಯಾರಿಗೂ ಬೆಡ್ ನಿರಾಕರಿಸಬೇಡಿ’ ಎಂದು ತರಾಟೆಗೆ ತೆಗೆದುಕೊಂಡರು.

150ರಿಂದ 200 ಬೆಡ್​ಗಳು ಲಭ್ಯವಿವೆ; ಕಿಮ್ಸ್ ನಿರ್ದೇಶಕ ಸ್ಪಷ್ಟನೆ ತಮ್ಮ ತಾಯಿಗೆ ಬೆಡ್ ಸಿಕ್ಕಿಲ್ಲ ಎಂದು ಕುಂದಗೊಳ ಶಾಸಕಿ ಕುಸುಮಾ ಶಿವಳ್ಳಿ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಣ್ಣೀರು ಹಾಕಿದ ಕುರಿತು ಹುಬ್ಬಳ್ಳಿ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಟಿವಿ9ಗೆ ಕರೆ ಮಾಡಿ ಸ್ಪಷ್ಟನೆ ನೀಡಿದರು.

ಶಾಸಕಿ ಕುಸುಮಾ ಶಿವಳ್ಳಿ 2 ದಿನದ ಹಿಂದೆ ನಮ್ಮ ವೈದ್ಯಕೀಯ ಅಧೀಕ್ಷರನ್ನು ಭೇಟಿಯಾಗಿದ್ದರು. ಆಗಲೇ ನಾವು ಅಡ್ಮಿಟ್ ಆಗುವಂತೆ ತಿಳಿಸಿದ್ದೆವು. ಕಿಮ್ಸ್​ನಲ್ಲಿ ಬೆಡ್​ಗಳ ಸಮಸ್ಯೆ ಇಲ್ಲ. ಈ ಕ್ಷಣವೂ 150ರಿಂದ 200 ಆಕ್ಸಿಜನ್ ಬೆಡ್​ಗಳಿವೆ. ನಾವು ಶಾಸಕಿ ಕುಸುಮಾ ಶಿವಳ್ಳಿ ಅವರನ್ನು ನಿರ್ಲಕ್ಷಿಸಿಲ್ಲ. ನಾವು ಅಂದೇ ಸೂಚಿಸಿದ್ದರೂ ಸಹ ಅವರೇ ಆಸ್ಪತ್ರೆಗೆ ದಾಖಲಾಗಿಲ್ಲ. ಅವರು ಸಿದ್ದರಾಮಯ್ಯನವರ ಬಳಿ ಕಣ್ಣೀರು ಹಾಕಿದ ಕ್ಷಣವೇ ಆ್ಯಂಬುಲೆನ್ಸ್ ಕಳುಹಿಸಿಕೊಟ್ಟಿದ್ದೇವೆ. ಸಿದ್ದರಾಮಯ್ಯನವರು ಕರೆ ಮಾಡಿದಾಗ ಇರುವ ವಾಸ್ತವ ವಿಷಯವನ್ನು ತಿಳಿಸಿದ್ದೇನೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಮಾಹಿತಿ ನೀಡಿದರು.

ಮೆಡಿಕಲ್ ಆಕ್ಸಿಜನ್ ಪೂರೈಕೆ ಆಗದೆ 24 ಜನ ಮೃತಪಟ್ಟಿದ್ದಾರೆ. ಹೀಗಾಗಿ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಮೈಸೂರು ಜಿಲ್ಲಾಡಳಿತ ಆಕ್ಸಿಜನ್ ಪೂರೈಕೆ ಮಾಡಿಲ್ಲ. ಇದರಿಂದಲೇ ಸಮಸ್ಯೆ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಆಕ್ಸಿಜನ್ ಸಮಸ್ಯೆ ಬಗ್ಗೆ ಸಚಿವ ಸುರೇಶ್ ಕುಮಾರ್ ಜತೆ ಚರ್ಚಿಸಿದ್ದೆ. ಸಮಸ್ಯೆ ಬಗೆಹರಿಸುವುದಾಗಿ ಸುರೇಶ್ ಕುಮಾರ್ ಹೇಳಿದ್ದರು. ಆದರೂ ಜಿಲ್ಲಾಸ್ಪತ್ರೆಯಲ್ಲಿ 23 ರೋಗಿಗಳು ಮೃತಪಟ್ಟಿದ್ದಾರೆ. ಹೀಗಾಗಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು ಸಿದ್ದರಾಮಯ್ಯನವರೇ ನೀವು ಚಾಮರಾಜನಗರಕ್ಕೆ ಬನ್ನಿ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಒತ್ತಾಯಿಸಿದರು.

ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್​ನಲ್ಲಿ ಈ ಕ್ಷಣಕ್ಕೂ 150ರಿಂದ 200 ಆಕ್ಸಿಜನ್ ಬೆಡ್​ಗಳಿವೆ; ನಿರ್ದೇಶಕ ಡಾ.ರಾಮಲಿಂಗಪ್ಪ ಸ್ಪಷ್ಟನೆ

ನನ್ನ ತಾಯಿಗೆ ಬೆಡ್ ಸಿಗುತ್ತಿಲ್ಲ; ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೇ ಅತ್ತ ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ

(Opposition leader Siddaramaiah says Kundgol MLA Kusuma Shivalli to if hospitals do not give admission we should protest on the spot)

ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ಬೆಂಗಳೂರು: ಮೂರು ತಿಂಗಳಲ್ಲಿ ಮತ್ತೆ ಹೆಬ್ಬಾಳ ಫ್ಲೈಓವರ್ ವಿಸ್ತರಣೆ
ಬೆಂಗಳೂರು: ಮೂರು ತಿಂಗಳಲ್ಲಿ ಮತ್ತೆ ಹೆಬ್ಬಾಳ ಫ್ಲೈಓವರ್ ವಿಸ್ತರಣೆ
ಸಿಎಂ ವಿರುದ್ಧ ಕೊಲೆ ಮಾಡಿದ ಆರೋಪ, ಎಸ್​ಐಟಿ ರಚಿಸ್ತೀರಾ: ಅಶೋಕ್ ಪ್ರಶ್ನೆ
ಸಿಎಂ ವಿರುದ್ಧ ಕೊಲೆ ಮಾಡಿದ ಆರೋಪ, ಎಸ್​ಐಟಿ ರಚಿಸ್ತೀರಾ: ಅಶೋಕ್ ಪ್ರಶ್ನೆ