ಚಾಮರಾಜನಗರ ದುರ್ಘಟನೆಗೆ ಕೆಳಮಟ್ಟದ ಅಧಿಕಾರಿಗಳನ್ನು ಬಲಿಪಶು ಮಾಡಬೇಡಿ; ಕೃಷ್ಣಭೈರೇಗೌಡ

Chamarajanagar: ಈ ದುರ್ಘಟನೆ ನಡೆಯಲು ಮೇಲ್ಪಟ್ಟದವರ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ಕೆಳಮಟ್ಟದ ಅಧಿಕಾರಿಗಳನ್ನು ಬಲಿಪಶು ಮಾಡದೇ ಉನ್ನತ ಮಟ್ಟದವರನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಚಾಮರಾಜನಗರ ದುರ್ಘಟನೆಗೆ ಕೆಳಮಟ್ಟದ ಅಧಿಕಾರಿಗಳನ್ನು ಬಲಿಪಶು ಮಾಡಬೇಡಿ; ಕೃಷ್ಣಭೈರೇಗೌಡ
ಕೃಷ್ಣಭೈರೇಗೌಡ
Follow us
guruganesh bhat
|

Updated on:May 03, 2021 | 10:28 PM

ಬೆಂಗಳೂರು: ಚಾಮರಾಜನಗರ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಇಲ್ಲದೇ 24 ರೋಗಿಗಳು ಮೃತಪಟ್ಟ ದುರ್ಘಟನೆಗೆ ಯಾರ್ಯಾರನ್ನೋ ಆರೋಪಿಗಳನ್ನಾಗಿ ಮಾಡುವುದು ಬೇಡ. ದುರ್ಘಟನೆ ಸರ್ಕಾರದ ನಿರ್ಲಕ್ಷ್ಯದಿಂದ ಸಂಭವಿಸಿದ್ದು, ಉನ್ನತ ಹಂತದವರೇ ಹೊಣೆಗಾರರಾಗಿದ್ದಾರೆ. ಘಟನೆ ಸಂಬಂಧ ಮೇಲ್ಮಟ್ಟದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಕೃಷ್ಣಭೈರೇಗೌಡ ಆಗ್ರಹಿಸಿದರು.

ಚಾಮರಾಜನಗರ ದುರ್ಘಟನೆಯಲ್ಲಿ ವಿಚಾರಣೆಯಲ್ಲಿ ಕೆಳಹಂತದವರನ್ನು ಬಲಿಪಶು ಮಾಡುವುದು ಬೇಡ. ಈ ದುರ್ಘಟನೆ ನಡೆಯಲು ಮೇಲ್ಪಟ್ಟದವರ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ಕೆಳಮಟ್ಟದ ಅಧಿಕಾರಿಗಳನ್ನು ಬಲಿಪಶು ಮಾಡದೇ ಉನ್ನತ ಮಟ್ಟದವರನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಕಳೆದ 24 ಗಂಟೆಯಲ್ಲಿ 24 ಕೊವಿಡ್ ರೋಗಿಗಳು ಸತ್ತಿರುವ ಹಿನ್ನೆಲೆಯಲ್ಲಿ ಸರಕಾರ ಹಿರಿಯ ಐಎಎಸ್ ಶಿವಯೀಗ ಕಳಸದ್ ಅವರನ್ನು ವಿಚಾರಣಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ. ಸಾವಿನ ಹಿಂದಿನ ಕಾರಣಗಳನ್ನು ಹುಡುಕಿ ಮೂರು ದಿನಗಳೊಳಗೆ ವರದಿ ನೀಡುವಂತೆ ಆದೇಶ ಹೊರಡಿಸಿದೆ.

ಈ ಘಟನೆಯ ಕುರಿತು ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಚಾಮರಾಜನಗರ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಆಸ್ಪತ್ರೆಗೆ ಬಂದ ಪ್ರತಿಯೊಬ್ಬ ವ್ಯಕ್ತಿಯೂ ಗುಣಮುಖರಾಗಿ ಹೋಗಬೇಕು. ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದರೂ ದುರಂತ ನಡೆದಿದೆ. ದುರಂತ ಸಂಭವಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಘಟನೆ ಬಗ್ಗೆ ತನಿಖೆ ನಡೆಸಿ 3 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಪ್ರತಿಯೊಬ್ಬರ ಸಾವು ನಮಗೆ ದೊಡ್ಡ ನಷ್ಟ. ಅವರವರ ಕುಟುಂಬಕ್ಕೂ ಇದು ದೊಡ್ಡ ಆಘಾತ. ಆಮ್ಲಜನಕ ಕೊರತೆಯಿಂದ ಈ ಸಾವು ಅಗಿದೆ ಎಂಬ ಭಾವನೆ ಎಲ್ಲರಲ್ಲೂ ಇದೆ. ಆಮ್ಲಜನಕ ಯಾವ ಯಾವ ಪ್ರಮಾಣದಲ್ಲಿ ಬಂದಿದೆ ಮಾಹಿತಿ ಇದೆ. ಎಲ್ಲಾ ಸಾವುಗಳು ಅಮ್ಲಜನಕ ಕೊರತೆಯಿಂದಲೇ ಸಂಭವಿಸಿದ್ದಲ್ಲ. ಕೊವಿಡ್ ನಲ್ಲೇ ಕೊನೆ ಹಂತದಲ್ಲಿ‌ ದಾಖಲಾಗಿದ್ದವರೂ ಇದ್ದಾರೆ. ಈ ಬಗ್ಗೆ ತನಿಖೆ ಅಗಬೇಕು. 24 ರಲ್ಲಿ ಅಮ್ಲಜನಕದಿಂದ ಎಷ್ಟು ಸಾವು ಎಂಬುದನ್ನು ಪತ್ತೆ ಮಾಡಬೇಕು. 3 ದಿನಗಳಲ್ಲಿ ವಿಚಾರಣೆ ಮಾಡಲು ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಕಳಸದ್ ಅವರನ್ನು ಸರ್ಕಾರ ನಿಯೋಜಿಸಿದೆ. 3 ದಿನದಲ್ಲಿ ಅವರು ತನಿಖಾ ವರದಿ ಸಲ್ಲಿಸಲಿದ್ದಾರೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ

ನಿನ್ನೆ ಮಧ್ಯಾಹ್ನ ಆಮ್ಲಜನಕ ಉತ್ಪಾದನಾ ಘಟಕ ನಿಂತಿದ್ದ ಕಾರಣಕ್ಕೆ ಆಮ್ಲಜನಕದ ಕೊರತೆ ಉಂಟಾಗಿತ್ತು. ಅದಾದ ಮೇಲೆ ಚಾಮರಾಜನಗರವು ಮೈಸೂರಿನಿಂದ ಆಮ್ಲಜನಕ ತರಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ, ಅದು ಬರಲೇ ಇಲ್ಲ. ಮತ್ತು ತಡ ರಾತ್ರಿ ಆಮ್ಲಜನಕ ಹೊತ್ತ ಲಾರಿ ಬರುವಷ್ಟರಲ್ಲಿ ದುರಂತ ನಡೆದೇ ಹೋಗಿತ್ತು. ವಿರೋಧ ಪಕ್ಷಗಳು ಈಗಾಗಲೇ ಆರೋಗ್ಯ ಸಚಿವ ಡಾ. ಸುಧಾಕರ್ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ, ಎಸ್. ಸುರೇಶ್ಕುಮಾರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ. ಮತ್ತು ಜಲ್ಲಾ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲು ಕೋರಿವೆ. ಇದರ ಬೆನ್ನಲ್ಲೆ ಈಗ ಸರಕಾರ ವಿಶೇಷ ತನಿಖಾಧಿಕಾರಿಯನ್ನು ನೇಮಿಸಿ ಮೂರು ದಿನಗಳೊಳಗೆ ವರದಿ ನೀಡುವಂತೆ ಆದೇಶ ನೀಡಿದೆ.

ಇದನ್ನೂ ಓದಿ: ಮನೆಯಲ್ಲೇ ಐಸಿಯು ಈಗ ದೇಶವ್ಯಾಪಿ ಕಂಡು ಬರುತ್ತಿರುವ ಹೊಸ ಟ್ರೆಂಡ್: ಇದು ಕೊರೊನಾ 2ನೇ ಅಲೆ ಹೊಡೆತದ ಪರಿಣಾಮ

Covid-19 Karnataka Update: ಕರ್ನಾಟಕದಲ್ಲಿ 44,438 ಮಂದಿಗೆ ಕೊರೊನಾ ಸೋಂಕು, 239 ಸಾವು

(Former minister Krishna Byre gowda urges dont make low level officers victim to Chamarajanagar medical oxygen disaster)

Published On - 10:24 pm, Mon, 3 May 21