ಬೆಂಗಳೂರು: ಯಾವುದೇ ಗೊಂದಲ ಮಾಡಿಕೊಳ್ಳದಂತೆ ರಾಜ್ಯದಲ್ಲಿ ಸರಿಯಾಗಿ ಕೊವಿಡ್ ಪರಿಸ್ಥಿತಿ ನಿರ್ವಹಣೆ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ರಾಜ್ಯದ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣಗೆ ಸೂಚನೆ ನೀಡಿದ್ದಾರೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಎಲ್ಲಾ ಸಹಕಾರ ನೀಡುತ್ತಿದೆ. ಆಡಳಿತದಲ್ಲಿ ಸದಾ ಏರಿಳಿತಗಳು ಇದ್ದೇ ಇರುತ್ತೆ. ಎಲ್ಲವನ್ನೂ ಸರಿಯಾಗಿ ನಿರ್ವಹಿಸಿ ಎಂದು ಅವರು ಸಲಹೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾದ ನಂತರ, ‘ಪಕ್ಷದ ಹಿರಿಯರು ಬಂದಾಗ ಭೇಟಿ ಮಾಡುವುದು ಕರ್ತವ್ಯ. ಇನ್ನಷ್ಟು ಚೆನ್ನಾಗಿ ನಿರ್ವಹಣೆ ಮಾಡಿ ಎಂದು ಸೂಚಿಸಿದ್ದಾರೆ. ನಮ್ಮನ್ನು ಯಾರನ್ನೂ ಕರೆಸಿಕೊಂಡಿಲ್ಲ, ನಾನಾಗಿಯೇ ಭೇಟಿಗೆ ಹೋಗಿದ್ದೆ. ಪಕ್ಷದಿಂದ ನಾವು ಗೆದ್ದು ಬಂದು ಸರ್ಕಾರ ರಚಿಸಿದ್ದೇವೆ. ಹಾಗಾಗಿ ಬಿ.ಎಲ್. ಸಂತೋಷ್ರನ್ನು ಮಾತಾಡಿಸಿ ಸೌಜನ್ಯ ತೋರಿದ್ದೇವೆ. ಕೊವಿಡ್ ಸಂದರ್ಭದಲ್ಲಿ ಪಕ್ಷ ಸರ್ಕಾರದ ಬೆನ್ನಿಗೆ ನಿಂತಿದೆ. ಭೇಟಿಯ ವೇಳೆ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಇದನ್ನೂ ಓದಿ: ಜನರ ಮೇಲೆ ಲಾಠಿ ಎತ್ತಬೇಡಿ: ಕರ್ನಾಟಕ ಹೈಕೋರ್ಟ್
ಆಹಾರ ಭದ್ರತೆ ಒದಗಿಸಲು ಹೈಕೋರ್ಟ್ ಸೂಚನೆ; ಮೇ 24ರವರೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ
(Manage the Covid Situation in the Karnataka State without Confusion says BJP national general secretary BL Santosh)