ಮನ್‌ಮುಲ್ ನಿರ್ದೇಶಕನ ಪತ್ನಿ ಕೊರೊನಾಗೆ ಬಲಿ

|

Updated on: May 11, 2021 | 7:24 AM

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯಲ್ಲಿ ವಾಸವಾಗಿದ್ದ ದಂಪತಿಗೆ ಒಂದು ವಾರದ ಹಿಂದೆ ಕೊರೊನಾ ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅನಿತಾ ಮೃತಪಟ್ಟಿದ್ದಾರೆ.

ಮನ್‌ಮುಲ್ ನಿರ್ದೇಶಕನ ಪತ್ನಿ ಕೊರೊನಾಗೆ ಬಲಿ
ಮನ್‌ಮುಲ್ ನಿರ್ದೇಶಕನ ಪತ್ನಿ ಕೊರೊನಾಗೆ ಬಲಿ
Follow us on

ಮಂಡ್ಯ: ಮಹಾಮಾರಿ ಕೊರೊನಾ ಭೀಕರತೆಗೆ ಮನ್‌ಮುಲ್ ನಿರ್ದೇಶಕನ ಪತ್ನಿ ಬಲಿಯಾಗಿದ್ದಾರೆ. ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ, ಕಾಂಗ್ರೆಸ್ ಮುಖಂಡ ಡಾಲು ರವಿ ಪತ್ನಿ ಅನಿತಾ(38) ಕೊವಿಡ್‌ನಿಂದ ಮೃತಪಟ್ಟ ಮಹಿಳೆ.

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯಲ್ಲಿ ವಾಸವಾಗಿದ್ದ ದಂಪತಿಗೆ ಒಂದು ವಾರದ ಹಿಂದೆ ಕೊರೊನಾ ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅನಿತಾ ಮೃತಪಟ್ಟಿದ್ದಾರೆ. ಹಾಗೂ ಡಾಲು ರವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಈ ದಂಪತಿ ಕಳೆದ 15 ದಿನಗಳ ಹಿಂದಷ್ಟೇ ಅದ್ದೂರಿಯಾಗಿ ಗೃಹಪ್ರವೇಶ ಮಾಡಿ ಸಾವಿರಾರು ಜನರಿಗೆ ಊಟ ಹಾಕಿಸಿದ್ದರು. ಗೃಹ ಪ್ರವೇಶದ ನಂತರ ಸೋಂಕಿನ ಲಕ್ಷಣ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅನಿತಾ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಎನ್ಜಿಓಗೆ ಭೇಟಿ ನೀಡಿ ಕೊರೊನಾದ ಬಿಕ್ಕಟ್ಟಿನ ಮಧ್ಯೆ ಅಲ್ಲಿನ ಬಡವರಿಗೆ ಆಹಾರ ಕೊಟ್ಟ ನಟಿ