ಪದೇ ಪದೇ ಮದ್ದೂರಿಗೆ ಭೇಟಿ: ಅಭಿಷೇಕ್ ಅಂಬರೀಶ್ ಮದ್ದೂರಿನಲ್ಲಿ ಚುನಾವಣೆಗೆ ನಿಲ್ತಾರಾ?

Abhishek Ambareesh: ತಾರಾ ದಂಪತಿಯ ಪುತ್ರ ಅಭಿಷೇಕ್ ಅಂಬರೀಶ್ ಮತ್ತೆ ಮದ್ದೂರು ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ತಮ್ಮ ಅಭಿಮಾನಿಯೊಬ್ಬರ ಮದುವೆಯಲ್ಲಿ ಅಭಿಷೇಕ್ ಪಾಲ್ಗೊಂಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿರುವ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಕಾರ್ಯಕ್ರಮ ಅದಾಗಿತ್ತು.

ಪದೇ ಪದೇ ಮದ್ದೂರಿಗೆ ಭೇಟಿ: ಅಭಿಷೇಕ್ ಅಂಬರೀಶ್ ಮದ್ದೂರಿನಲ್ಲಿ ಚುನಾವಣೆಗೆ ನಿಲ್ತಾರಾ?
ಪದೇ ಪದೇ ಮದ್ದೂರಿಗೆ ಭೇಟಿ: ಅಭಿಷೇಕ್ ಅಂಬರೀಶ್ ಮದ್ದೂರಿನಲ್ಲಿ ಚುನಾವಣೆಗೆ ನಿಲ್ತಾರಾ?
Edited By:

Updated on: Sep 16, 2021 | 10:44 AM

ಮಂಡ್ಯ: ತಾರಾ ದಂಪತಿಯ ಪುತ್ರ ಅಭಿಷೇಕ್ ಅಂಬರೀಶ್ ಮತ್ತೆ ಮದ್ದೂರು ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ತಮ್ಮ ಅಭಿಮಾನಿಯೊಬ್ಬರ ಮದುವೆಯಲ್ಲಿ ಅಭಿಷೇಕ್ ಪಾಲ್ಗೊಂಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿರುವ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಕಾರ್ಯಕ್ರಮ ಅದಾಗಿತ್ತು.

ಮದುವೆ ಮಂಟಪದಲ್ಲೇ ತಮ್ಮ ಮೆಚ್ಚಿನ ನಟ ಅಭಿಷೇಕ್ ಗೆ ಮೈಸೂರು ಪೇಟ ತೊಡಿಸಿ, ಅಭಿಮಾನಿಗಳು ಸನ್ಮಾನಿಸಿದರು. ನಂತರ ಮದ್ದೂರಿನ ಪ್ರಕಾಶ್ ಎಂಬುವರರ ಮನೆಗೆ ಅಭಿಷೇಕ್ ಅಂಬರೀಶ್ ಭೇಟಿ ನೀಡಿದರು. ಪ್ರಕಾಶ್ ಮನೆಯಲ್ಲೂ ಅಭಿಮಾನಿಗಳು ಅಭಿಷೇಕ್ ಜೊತೆ ಸೆಲ್ಫಿಗೆ ಮುಗಿಬಿದ್ದರು. ಅಲ್ಲಿ ಪ್ರತಿಯೊಬ್ಬರ ಜೊತೆಗೂ ಅಭಿಷೇಕ್ ಪೋಟೊ ತೆಗೆಸಿಕೊಂಡರು.

ಅಭಿ ರಾಜಕೀಯ ಆರಂಗೇಟ್ರಂ ಹಾಕ್ತಾರಂತೆ.. ಗುಸು ಗುಸು:
ಈ ಮಧ್ಯೆ, ಮದುವೆಗೆ ಸೇರಿದ್ದ ಜನ ಅಭಿಷೇಕ್ ಅಂಬರೀಶ್ ಮದ್ದೂರಿನಲ್ಲಿ ಚುನಾವಣೆಗೆ ನಿಲ್ತಾರಂತೆ ತಮ್ಮ ತಮ್ಮಲ್ಲೇ ಗುಸು ಗುಸು ಮಾತನಾಡಿಕೊಳ್ಳತೊಡಗಿದರು. ಅಭಿ ರಾಜಕೀಯ ಆರಂಗೇಟ್ರಂ ಹಾಕ್ತಾರಂತೆ, ಅದಕ್ಕೇ ಪದೇ ಪದೇ ಮದ್ದೂರಿಗೆ ಭೇಟಿ ನೀಡ್ತಿದ್ದಾರೆ ಎಂದು ಜನ ಮಾತನಾಡಿಕೊಳ್ಳತೊಡಗಿದರು. ಇದೇ ತಿಂಗಳ ಆರಂಭದಲ್ಲಿ ಸ್ವಂತ ಮನೆ ನಿರ್ಮಿಸಲು ತಮ್ಮ ತಾಯಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಜೊತೆ ಗುದ್ದಲಿ ಪೂಜೆ ನೆರವೇರಿಸಿದ್ದರು, ಅಭಿಷೇಕ್.

ಇದನ್ನೂ ಓದಿ:
ಮಂಡ್ಯದಿಂದ ಸ್ಪರ್ಧೆಯೋ? ಮದ್ದೂರಿನಿಂದಲೋ?; ಚುನಾವಣೆ ಬಗ್ಗೆ ಪರೋಕ್ಷ ಸುಳಿವು ನೀಡಿದ ಅಭಿಷೇಕ್​ ಅಂಬರೀಷ್

ಇದನ್ನೂ ಓದಿ:
ಅಂಬರೀಷ್​-ಸುಮಲತಾ ಹಾದಿಯಲ್ಲೇ ನಡೆಯಲಿದ್ದಾರಾ ಅಭಿಷೇಕ್​? ಚುನಾವಣೆಗೆ ಸ್ಪರ್ಧೆ ಮಾಡುವ ಸೂಚನೆ ನೀಡಿದ ಅಂಬಿ ಕುಡಿ

ಅಭಿಮಾನಿ ಅಭಿ ಎಂಬುವವರ ಮದುವೆಯಲ್ಲಿ ಅಭಿಷೇಕ್​ ಅಂಬರೀಶ್​ ಭಾಗಿ

(abhishek ambareesh attends wedding of his fan in maddur)

Published On - 9:59 am, Thu, 16 September 21