ಮಂಡ್ಯ: ಜಾಮೀಯ ಮಸೀದಿ (Masjid) ಇದ್ದ ಸ್ಥಳದಲ್ಲಿ ಮೂಡಲ ಬಾಗಿಲು ಶ್ರೀ ಆಂಜನೇಯ ದೇವಾಲಯವಿತ್ತು ಎಂದು ಆರೋಪಿಸಿರುವ ಹಿಂದೂ ಸಂಘಟನೆ ಮುಖಂಡರು (Hindu Organizations), ನಿನ್ನೆ (ಜೂನ್ 4) ಶ್ರೀರಂಗಪಟ್ಟಣ ಚಲೋ ಜಾಥಾ ನಡೆಸಿದ್ದರು. ಜಾಮೀಯ ಮಸೀದಿಯಲ್ಲಿ ಹನುಮಾನ್ ಚಾಲೀಸ್ ಪಠಿಸೇ ತೀರುತ್ತೇವೆ ಎಂದಿದ್ದ ಭಜರಂಗದಳ, ಅದರಂತೆ ನಿನ್ನೆ ಮಧ್ಯಾಹ್ನ ವಿಡಿಯೋ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಮಸೀದಿ ಒಳಗೆ ಹೋಗಿ ಜೈ ಶ್ರೀರಾಮ್, ಜೈ ಹನುಮಾನ್ ಎಂದು ಕೂಗಿದ್ದರು. ಮಸೀದಿ ಒಳಗೆ ಹೋಗಿ ಹನುಮಾನ್ ಚಾಲೀಸ್ ಪಠಿಸಿದ್ದ ಇಬ್ಬರು ಹಿಂದಿನ ದಿನವೇ ಅಂದರೆ ಜೂನ್ 3ಕ್ಕೆ ಹೋಗಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಇದಕ್ಕೆ ಸಂಬಂಧಿಸಿದ ಸಿಸಿ ಟಿವಿ ದೃಶ್ಯ ಟಿವಿ9ಗೆ ಲಭ್ಯವಾಗಿದೆ.
ಶ್ರೀರಂಗಪಟ್ಟಣ ಚಲೋ ಬಳಿಕ ಹಿಂದೂಪರ ಸಂಘಟನೆಗಳು ಲೀಗಲ್ ವಾರ್ಗೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಜಿಲ್ಲೆಯ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ನಿಂದ ಹೊಸ ತಂತ್ರ ಸಿದ್ಧವಾಗುತ್ತಿದೆ. ಹಿಂದೂಪರ ಸಂಘಟನೆಗಳು ಮಸೀದಿಯಲ್ಲಿ ವಿಡಿಯೋ ಚಿತ್ರೀಕರಣ ಹಾಗೂ ಸರ್ವೆ ನಡೆಸುವಂತೆ ಪಟ್ಟು ಹಿಡಿದಿದ್ದವು. ಜಿಲ್ಲಾಡಳಿತ 30 ದಿನದೊಳಗೆ ಪ್ರತಿಕ್ರಿಯೆ ನೀಡದೆ ಹೋದರೆ ಮದರಸ ಖಾಲಿ ಮಾಡಿಸದೆ ಹೋದರೆ ಮತ್ತೊಂದು ಹೋರಾಟಕ್ಕೆ ಚಿಂತನೆ ಮಾಡಲಾಗುತ್ತದೆ ಎಂದು ಗಡುವು ನೀಡಿದ್ದವು.
ಇದನ್ನೂ ಓದಿ: ಅಮೇರಿಕಾದಲ್ಲಿ ಹೆಚ್ಚುತ್ತಿದೆ ಶೂಟೌಟ್ ಪ್ರಕರಣ; ಗ್ಯಾಸ್ ಸ್ಟೇಷನ್ನಲ್ಲಿ ಗುಂಡು ಹಾರಿಸಿ ದರೋಡೆ ಮಾಡಿದ 12 ವರ್ಷದ ಬಾಲಕ
ಈ ಬಗ್ಗೆ ಟಿವಿ9ಗೆ ಮಾಹಿತಿ ನೀಡಿದ ಹಿಂದೂಪರ ಮುಖಂಡರು, ಇಷ್ಟು ದಿನ ಮಾರ್ನಮೆಂಟ್ ಆಕ್ಟ್ ಅಡಿಯಲ್ಲಿ ಬರುತ್ತ. ಇಲ್ಲ ವರ್ಷಿಪ್ ಆಕ್ಟ್ ಬರುತ್ತಾ ಎಂಬ ಗೊಂದಲವಿತ್ತು. ಈ ಹಿನ್ನೆಲೆ ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ. ರಾಜ್ಯ ಹಿಂದೂ ಸಂಚಾಲಕರು ಹಾಗೂ ರಾಜ್ಯ ಮುಖಂಡರ ಜೊತೆ ಚರ್ಚಿಸಿ ಬಳಿಕ ಹೋರಾಟಕ್ಕೆ ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಮುಂದುವರೆದ ಬಿಗಿ ಪೊಲೀಸ್ ಬಂದೋಬಸ್ತ್:
144 ಸೆಕ್ಷನ್ ತೆರವು ಗೊಳಿಸಿದ್ದರೂ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ. ಜಿಲ್ಲಾಡಳಿತ ಬೆಳಗ್ಗೆ 6 ಗಂಟೆಗೆ 144 ಸೆಕ್ಷನ್ ತೆರವುಗೊಳಿಸಿದೆ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಬ್ಯಾರಿಕೇಡ್ ಹಾಕಿ 2 ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:35 am, Sun, 5 June 22