ಮಂಡ್ಯದಲ್ಲಿ ಹೆಚ್ಚಾದ ಬಾಲ್ಯವಿವಾಹ, 11 ತಿಂಗಳಲ್ಲಿ ಗರ್ಭಿಣಿಯಾಗಿದ್ದಾರೆ 43 ಅಪ್ರಾಪ್ತರು!

| Updated By: ಗಣಪತಿ ಶರ್ಮ

Updated on: Nov 22, 2023 | 7:00 PM

ಅಂದಹಾಗೆ 2023ರ ಜನವರಿಯಿಂದ ಇಲ್ಲಿಯವರೆಗೂ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 12,220 ಮಹಿಳೆಯರು ಗರ್ಭಿಣಿಯರಾಗಿದ್ದು, ಅದರಲ್ಲಿ 43 ಅಪ್ರಾಪ್ತರು ಕೂಡ ಇದ್ದಾರೆ. ಇನ್ನು ಬಾಲ್ಯವಿವಾಹದ ಬಗ್ಗೆ 147 ದೂರುಗಳು ಸಹಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಂದಿದೆ. ಇದರಲ್ಲಿ ಈ ವರ್ಷವೇ ಸುಮಾರು 85 ಬಾಲ್ಯವಿವಾಹವನ್ನ ತಡೆಗಟ್ಟಿದ್ದು, 62 ಪ್ರಕರಣಗಳು ದಾಖಲಾಗಿವೆ.

ಮಂಡ್ಯದಲ್ಲಿ ಹೆಚ್ಚಾದ ಬಾಲ್ಯವಿವಾಹ, 11 ತಿಂಗಳಲ್ಲಿ ಗರ್ಭಿಣಿಯಾಗಿದ್ದಾರೆ 43 ಅಪ್ರಾಪ್ತರು!
ಸಾಂದರ್ಭಿಕ ಚಿತ್ರ
Follow us on

ಮಂಡ್ಯ, ನವೆಂಬರ್ 22: ಬಾಲ್ಯವಿವಾಹ (Child Marriage) ಹಾಗೂ ಅಪ್ರಾಪ್ತರು ಗರ್ಭಿಣಿಯಾಗುವುದನ್ನು ತಡೆಯಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನ ತೆಗೆದುಕೊಂಡಿದ್ದರೂ ಸಕ್ಕರೆ ನಗರಿ ಮಂಡ್ಯದಲ್ಲಿ (Mandya) ವರ್ಷದಿಂದ ವರ್ಷಕ್ಕೆ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಅಷ್ಟೇ ಅಲ್ಲದೆ ಅಪ್ರಾಪ್ತರು ಗರ್ಭಿಣಿಯರಾಗುವ ಪ್ರಕರಣಗಳೂ ಹೆಚ್ಚಳವಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

ಮಂಡ್ಯದಲ್ಲಿ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೂ ಕೂಡ ಕಾರಣವಾಗಿದೆ. ಅಂದಹಾಗೆ, 18 ವರ್ಷದೊಳಗಿನ ಯುವತಿಯರು ವಿವಾಹವಾಗುವುದಕ್ಕೆ ಸರ್ಕಾರ ನಿಷೇಧ ಹೇರಿ, ಬಾಲ್ಯವಿವಾಹ ತಡೆಗೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿದೆ. ಅಲ್ಲದೆ ಬಾಲ್ಯ ವಿವಾಹದ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಕೆಲಸಗಳು ಕೂಡ ನಡೆಯುತ್ತಿವೆ. ಇಷ್ಟೆಲ್ಲ ಇದ್ದರು ಸಹಾ, ಮಂಡ್ಯ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಅಂದಹಾಗೆ, 2023ರ ಜನರಿಂದ ಇಲ್ಲಿಯವರೆಗೂ 43 ಅಪ್ರಾಪ್ತರು ಗರ್ಭಿಣಿಯರಾಗಿದ್ದಾರೆ. ಅದರಲ್ಲಿ 15 ವರ್ಷದವರು ಮೂವರು, 16 ವರ್ಷದ 10 ಮಂದಿ ಹಾಗೂ 17 ವರ್ಷದ 30 ಅಪ್ರಾಪ್ತರು ಸೇರಿದ್ದಾರೆ.

ಅಂದಹಾಗೆ 2023ರ ಜನವರಿಯಿಂದ ಇಲ್ಲಿಯವರೆಗೂ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 12,220 ಮಹಿಳೆಯರು ಗರ್ಭಿಣಿಯರಾಗಿದ್ದು, ಅದರಲ್ಲಿ 43 ಅಪ್ರಾಪ್ತರು ಕೂಡ ಇದ್ದಾರೆ.

ಇನ್ನು ಬಾಲ್ಯವಿವಾಹದ ಬಗ್ಗೆ 147 ದೂರುಗಳು ಸಹಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಂದಿದೆ. ಇದರಲ್ಲಿ ಈ ವರ್ಷವೇ ಸುಮಾರು 85 ಬಾಲ್ಯವಿವಾಹವನ್ನ ತಡೆಗಟ್ಟಿದ್ದು, 62 ಪ್ರಕರಣಗಳು ದಾಖಲಾಗಿವೆ. ಇನ್ನು ಮಂಡ್ಯ ಜಿಲ್ಲಾಡಳಿತ ಸ್ಥಳೀಯಮಟ್ಟದಲ್ಲಿ ಹಲವು ಸಂಘ ಸಂಸ್ಥೆಗಳು, ಶಿಕ್ಷಣ ಇಲಾಖೆ, ವಿಎ ಪಿಡಿಓಗಳ ಸಹಾಯದಿಂದ ಬಾಲ್ಯವಿವಾಹವನ್ನ ತಡೆಯಲು ಮುಂದಾಗುತ್ತಿದ್ದರೂ, ಪ್ರಕರಣಗಳ ಸಂಖ್ಯೆ ಮಂಡ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಅಲ್ಲದೆ ಅಪ್ರಾಪ್ತ ಗರ್ಭೀಣಿಯರ ಆರೋಗ್ಯದ ಮೇಲೆಯೂ ಹಲವು ಪರಿಣಾಮಗಳಾಗುತ್ತಿವೆ. ಇನ್ನು ನಿಟ್ಟಿನಲ್ಲಿ ಸಮಿತಿಯೊಂದನ್ನ ರಚನೆ ಮಾಡಿ ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಕೂಡ ಮುಂದಾಗಿದೆ.

ಇದನ್ನೂ ಓದಿ: ಬಾಲ್ಯ ವಿವಾಹಗಳಲ್ಲಿ ಕರ್ನಾಟಕಕ್ಕೆ ಅಗ್ರ ಮಣೆ: ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಕಳೆದ 5 ತಿಂಗಳಲ್ಲಿ 12 ಬಾಲ್ಯ ವಿವಾಹ!

ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬಾಲ್ಯವಿವಾಹಗಳು ಹಾಗೂ ಅಪ್ರಾಪ್ತ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗಿದೆ. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮವಹಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ