ಮಂಡ್ಯ, ಆಗಸ್ಟ್ 09: ರೈತನ (farmer) ಜಮೀನಿಗೆ ಪರಿಹಾರ ಒದಗಿಸಲು ವಿಫಲ ಹಿನ್ನೆಲೆ ಜಿಲ್ಲೆಯ ಪಾಂಡವಪುರ ಉಪ ವಿಭಾಗಾಧಿಕಾರಿ ಕಚೇರಿ ಪೀಠೋಪಕರಣವನ್ನು ಜಪ್ತಿ ಮಾಡುವಂತೆ ಜೆಎಂಎಫ್ಸಿ ನ್ಯಾಯಾಲಯದಿಂದ ಎಸಿ ಕಚೇರಿಗೆ ಆದೇಶ ನೀಡಲಾಗಿದೆ. ರೈತರ ಸಹಕಾರದೊಂದಿಗೆ ಆಗಮಿಸಿ ಎಸಿ ಕಚೇರಿ ಪೀಠೋಪಕರಣವನು ಜಪ್ತಿ ಮಾಡಲಾಗಿದೆ.
2006ರಲ್ಲಿ ಒಳಚರಂಡಿ ತ್ಯಾಜ್ಯ ಘಟಕಕ್ಕಾಗಿ ಪಾಂಡವಪುರ ಪಟ್ಟಣದಲ್ಲಿ ರೈತನಿಗೆ ಕಡಿಮೆ ಮೊತ್ತದ ಪರಿಹಾರ ನೀಡಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆ ಹೆಚ್ಚಿನ ಪರಿಹಾರಕ್ಕಾಗಿ ರೈತ ಸತ್ಯನಾರಾಯಣ ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್ಸಿ ಕೋರ್ಟ್4.89 ಕೋಟಿ ರೂ. ಪರಿಹಾರ ನೀಡುವಂತೆ ಸೂಚನೆ ನೀಡಿತ್ತು.
ಇದನ್ನೂ ಓದಿ: ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಪ್ರಕರಣಕ್ಕೆ ಹೊಸ ತಿರುವು, ಪೊಲೀಸರಿಂದ ತನಿಖೆ ಆರಂಭ
ಆದೇಶ ನೀಡಿ 2 ವರ್ಷ ಕಳೆದರೂ ಪರಿಹಾರ ಕೊಡದೆ ವಿಳಂಬವಾಗಿದೆ. ಹೀಗಾಗಿ ಉಪ ವಿಭಾಗಾಧಿಕಾರಿ ಕಚೇರಿ ಪೀಠೋಪಕರಣವನ್ನು ಜಪ್ತಿ ಮಾಡುವಂತೆ ರೈತ ಸತ್ಯನಾರಾಯಣಗೆ ಜೆಎಂಎಫ್ಸಿ ಕೋರ್ಟ್ ಸೂಕ್ತ ಪರಿಹಾರಕ್ಕೆ ಆದೇಶಿಸಿದೆ.
ಇಂದು ನಿಗಧಿಯಾಗಿದ್ದ ಎರಡನೇ ಅವಧಿಯ ಗ್ರಾಮಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯನ್ನ ಚುನಾವಣಾಧಿಕಾರಿ ಮುಂದೂಡಿರುವುದನ್ನ ವಿರೋಧಿಸಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿನ್ನು ಕೆಎಸ್ಆರ್ಟಿಸಿ ಬಸ್ಗಳು ಎಡ ಬದಿಯ ಲೇನ್ನಲ್ಲೇ ಸಂಚರಿಸಬೇಕು
ಚಂದಗಾಲು ಗ್ರಾಮಪಂಚಾಯತ್ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸಂಬಂಧ ಇವತ್ತು ದಿನಾಂಕ
ಘೋಷಣೆ ಆಗಿತ್ತು. ಆದರೆ ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರು ಚುನಾವಣಾ ಪ್ರಕ್ರಿಯೆಗೆ ಗೈರಾದ ಹಿನ್ನೆಲೆಯಲ್ಲಿ ಚುನಾವಣೆಯನ್ನ ಮುಂದೂಡಲಾಗಿದೆ.
ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿಯ ಕೆಆರ್ಪೇಟೆ ಬೈಪಾಸ್ ಕಾಮಗಾರಿಗೆ
ತಡೆವೊಡ್ಡಿ ಆಗಸ್ಟ್ 05ರಂದು ಹತ್ತಾರು ಹಳ್ಳಿಯ ರೈತರು ಪ್ರತಿಭಟನೆ ನಡೆಸಿದ್ದರು. ಅಂದಹಾಗೆ ಕಳೆದ ಹಲವು ವರ್ಷಗಳಿಂದ ನಿಂತಿದ್ದ ಕೆಆರ್ಪೇಟೆ ಬೈಪಾಸ್ ರಸ್ತೆಯ ಕಾಮಗಾರಿಯನ್ನ ಮಾಡಲು ಜೆಸಿಬಿ, ಲಾರಿಗಳ ಸಮೇತ ಕೆಶಿಪ್ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಪೊಲೀಸರ ಸರ್ಪಗಾವಲಿನಲ್ಲಿ ಆಗಮಿಸಿದ್ದರು.
ಕಾಮಗಾರಿ ಆರಂಭಿಸಿರುವ ವಿಚಾರ ತಿಳಿಯುತ್ತಿದ್ದಂತೆ ಹತ್ತಾರು ಹಳ್ಳಿಯ ರೈತರು ಆಗಮಿಸಿ ಪ್ರತಿಭಟನೆ ನಡೆಸಿದ್ದರು. ಹೆದ್ದಾರಿ ಕಾಮಗಾರಿಗೆ ತಡೆವೊಡ್ಡಿ, ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:16 pm, Wed, 9 August 23