ಮೈಸೂರು, (ಆಗಸ್ಟ್ 10): ಮೈಸೂರು (Mysuru) ಜಿಲ್ಲೆ ಹುಣಸೂರು ತಾಲ್ಲೂಕಿನ ಮೂಕನಹಳ್ಳಿ ಕೆರೆಯಲ್ಲಿ(Lake) ಶಿಕ್ಷಕರೊಬ್ಬರ(Teacher) ಶವ ಪತ್ತೆಯಾಗಿದೆ. ಮೂಕನಹಳ್ಳಿ ಕೆರೆಯಲ್ಲಿ ರೇವಣ್ಣ 50 ಶವ ಪತ್ತೆಯಾಗಿದೆ. ರೇವಣ್ಣ ಸೋಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾಗಿದ್ದರು. ಸ್ನೇಹಿತನ ಭೇಟಿಗೆ ಹೋಗುವುದಾಗಿ ತೆರಳಿದ್ದ ರೇವಣ್ಣ, ವಾಪಸ್ ಮನೆಗೆ ಬಂದಿರಲಿಲ್ಲ. ಕೆರೆ ಬಳಿ ಚಪ್ಪಲಿ ಮತ್ತು ಸ್ಕೂಟರ್ ಪತ್ತೆಯಾಗಿದ್ದು, ಬಳಿಕ ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಶೋಧ ನಡೆಸಿದ ವೇಳೆ ರೇವಣ್ಣ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಮಗಳನ್ನ ಕೊಟ್ಟು ಮದುವೆ ಮಾಡಲಿಲ್ಲವೆಂದು 850 ಅಡಕೆ ಗಿಡ ನಾಶ ಮಾಡಿದ ಭೂಪ
ರೇವಣ್ಣ ಅವರು ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಎನ್ನಲಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಈ ಬಗ್ಗೆ ನಿಖರ ಕಾರಣ ತಿಳಿದುಬಮದಿಲ್ಲ. ಈ ಬಗ್ಗೆ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮತ್ತೊಂದೆಡೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಲ್ಕುಂದ ಗ್ರಾಮದಲ್ಲಿ ಕಾರ್ಮಿಕ ಸಿಂಗ್ರಯ್ಯ(65) ಶವ ಪತ್ತೆಯಾಗಿದೆ. ಕೂಲಿ ಕೆಲಸಕ್ಕೆ ಹೋಗಿದ್ದ ಸಿಂಗ್ರಯ್ಯ ಮನೆಗೆ ಬಂದಿರಲಿಲ್ಲ. ನೂರುಲ್ಲಾ ಷರೀಫ್ ಜಮೀನಿನಲ್ಲಿ ಸಿಂಗ್ರಯ್ಯ ಶವ ಪತ್ತೆಯಾಗಿದ್ದು, ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮಂಡ್ಯದಲ್ಲಿ ಪತಿಯೊರ್ವ ಕಟ್ಟಿಕೊಂಡ ಹೆಂಡತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಪತ್ನಿ ಶೀಲದ ಮೇಲೆ ಅನುಮಾನಗೊಂಡು ಆಕೆಯನ್ನು ವೇಲ್ ನಿಂದ ಕತ್ತು ಬಿಗಿದು ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಮಹದೇವಪುರ ಬಳಿಯ ನಾಲೆಗೆ ಎಸೆದಿದ್ದಾನೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆಗ್ರಾಮದಲ್ಲಿ ನಡೆದಿದೆ. ಪೂಜಾ(28) ಕೊಲೆಯಾದ ದುರ್ದೈವಿ. ಶ್ರೀನಾಥ್ (32) ಪತ್ನಿಯನ್ನೇ ಕೊಲೆ ಮಾಡಿದ ಆರೋಪಿ.
ಲಾರಿ ಚಾಲಕನಾಗಿ ಕೆಲಸ ಮಾಡಿದ್ದ ಶ್ರೀನಾಥ್, ಒಂಬತ್ತು ವರ್ಷದ ಹಿಂದೆ ವಿವಾಹವಾಗಿದ್ದರು. ಆದ್ರೆ, ಇದೀಗ ಪತ್ನಿ ಮೇಲಿನ ಅನುಮಾನಕ್ಕೆ ಆಕೆಯನ್ನ ಕೊಲೆ ಮಾಡಿದ್ದಾನೆ, ಈ ಬಗ್ಗೆ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಮೈಸೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ