ಮೈಸೂರು: ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಸಾವು, ಓರ್ವ ಮಹಿಳೆಗೆ ಗಂಭೀರ ಗಾಯ
ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ(H.D Kote) ತಾಲೂಕಿನ ದೇವಲಾಪುರ ಬಳಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
ಮೈಸೂರು, ಆ.10: ಎರಡು ಬೈಕ್(Bike)ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೆಚ್.ಡಿ ಕೋಟೆ(H.D Kote) ತಾಲೂಕಿನ ದೇವಲಾಪುರ ಬಳಿ ನಡೆದಿದೆ. ನೆಮ್ಮನಹಳ್ಳಿ ಗ್ರಾಮದ ದೇವೇಶ್, ಪ್ರಕಾಶ್ ಮೃತ ರ್ದುದೈವಿಗಳು. ಇನ್ನು ಘಟನೆಯಲ್ಲಿ ಗಂಭೀರ ಗಾಯಗೊಂಡ ಶ್ರುತಿ ಎಂಬ ಮಹಿಳೆಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟಣೆ ಕುರಿತು ಸರಗೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೈಕ್ಗೆ ಕ್ಯಾಂಟರ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು
ಬೆಂಗಳೂರು: ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿ ಬಳಿ ಬೈಕ್ಗೆ ಕ್ಯಾಂಟರ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಚಿಕ್ಕಜಾಲ ಬಳಿಯ ವಿದ್ಯಾನಗರ ನಿವಾಸಿ ಅಂಬರೀಶ್ ಮೃತ ರ್ದುದೈವಿ. ಇತ ದೊಡ್ಡಬಳ್ಳಾಪುರ ಕಡೆಯಿಂದ ಯಲಹಂಕ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ಕುರಿತು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕದಂಬ ನೌಕಾನೆಲೆಯ ತೇಜ್ ಹೆಸರಿನ ಟಗ್ ಬೋಟ್ನ ಇಂಜಿನ್ನಲ್ಲಿ ಬೆಂಕಿ
ಉತ್ತರ ಕನ್ನಡ: ಕಾರವಾರ ಕದಂಬ ನೌಕಾನೆಲೆಯ ಡಾಕ್ ಯಾರ್ಡ್ಗೆ ಎಳೆತರಲು ಉಪಯೋಗಿಸುವ ಟಗ್ ಬೋಟ್ನ ಇಂಜಿನ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕುರಿತು ಕಾರವಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಈ ಟಗ್ ಬೋಟ್ಗಳನ್ನು ನೌಕಾ ಹಡಗುಗಳನ್ನು ಎಳೆದು ತರಲು ಉಪಯೋಗಿಸಲಾಗುತ್ತದೆ. ಅದರಂತೆ ಯುದ್ದ ಹಡಗನ್ನು ಎಳೆದು ತರಲು ಹೋದಾಗ ಟಗ್ ಬೋಟ್ ಇಂಜಿನ್ನಲ್ಲಿ ಬೆಂಕಿ ತಗುಲಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ