- Kannada News Photo gallery Mandya 21 Year Newly Married lady found dead Family suspected on Her Husband
ಒಂದುವರೆ ವರ್ಷದ ಹಿಂದಷ್ಟೇ ಪ್ರೀತಿಸಿ ಮದ್ವೆಯಾಗಿದ್ದ ಯುವತಿ ಅನುಮಾನಾಸ್ಪದ ಸಾವು
ಒಂದುವರೆ ವರ್ಷದ ಹಿಂದೆ ಅಷ್ಟೇ ಪ್ರೀತಿಸಿದ ಯುವಕನ ಜೊತೆ ಸಪ್ತಪದಿ ತುಳಿದಿದ್ದ 21 ವರ್ಷ ದರ್ಶಿನಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ. ತ್ನಿ ದರ್ಶಿನಿಯನ್ನು ತಂದು ಕೆಆರ್.ಆಸ್ಪತ್ರೆಗೆ ಸೇರಿಸಿ ಬಳಿಕ ಮನೆಯವರಿಗೆ ತಿಳಿಸಿದ್ದಾನೆ. ಹಿನ್ನೆಲೆಯಲ್ಲಿ ದರ್ಶಿನಿ ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗಿವೆ.
Updated on:Aug 11, 2023 | 12:54 PM

ಪ್ರೀತಿಸಿದ ಯುವಕನ ಜೊತೆ ಒಂದುವರೆ ವರ್ಷದ ಹಿಂದೆ ಅಷ್ಟೇ ಸಪ್ತಪದಿ ತುಳಿದಿದ್ದ 21 ವರ್ಷ ದರ್ಶಿನಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ,

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪತಿ ಸೂರ್ಯ ತನ್ನ ಪತ್ನಿ ದರ್ಶಿನಿಯನ್ನು ತಂದು ಕೆಆರ್.ಆಸ್ಪತ್ರೆಗೆ ಸೇರಿಸಿ ಬಳಿಕ ಮನೆಯವರಿಗೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ದರ್ಶಿನಿ ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗುತ್ತಿವೆ.

ಇನ್ನು ಗಂಡ ಸೂರ್ಯನೇ ಕೊಲೆ ಮಾಡಿರುವುದಾಗಿ ದರ್ಶಿನಿ ಕುಟುಂಬಸ್ಥರ ಆರೋಪಿಸುತ್ತಿದ್ದಾರೆ.

ಮನೆಯವರ ವಿರೋಧದ ನಡುವೆಯೂ ಸೂರ್ಯ, ದರ್ಶಿನಿ ಒಂದುವರೆ ವರ್ಷದ ಹಿಂದೆ ಮದುವೆಯಾಗಿದ್ದರು.

ಮದುವೆಯಾದ 4 ತಿಂಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ವರದಕ್ಷಿಣೆ ತರುವಂತೆ ಮಗಳನ್ನ ಹಿಂಸಿಸುತ್ತಿದ್ದ. ಇದೀಗ ನನ್ನ ಮಗಳನ್ನ ಕೊಲೆ ಮಾಡಿ ನಮ್ಮ ಮೇಲು ಹಲ್ಲೆ ಮಾಡಿದ್ದಾನೆ ಎಂದು ದರ್ಶನಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಸಂಬಂಧ ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಸೂರ್ಯ ಹಾಗೂ ಆತನ ಮನೆಯವರ ವಿರುದ್ಧ ದೂರು ದರ್ಶಿನಿ ಕುಟುಂಬಸ್ಥರು ದೂರು ನೀಡಿದ್ದಾರೆ.

ಒಟ್ಟಿನಲ್ಲಿ ಪ್ರೀತಿಸಿದವನ್ನೇ ಕೈ ಹಿಡಿದು ಇನ್ನೇನು ಸಂಸಾದ ಬಂಡಿ ಸಾಗಿಸಬೇಕು ಎನ್ನುವಷ್ಟರಲ್ಲೇ ದರ್ಶಿನಿ ಮೃತಪಟ್ಟಿದ್ದು, ದುರಂತ. ಇನ್ನು ಈ ಸಾವಿನ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಹಾಗೂ ಪೊಲಿಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ.

ಒಟ್ಟಿನಲ್ಲಿ ಪ್ರೀತಿಸಿದವನ್ನೇ ಕೈ ಹಿಡಿದು ಇನ್ನೇನು ಸಂಸಾದ ಬಂಡಿ ಸಾಗಿಸಬೇಕು ಎನ್ನುವಷ್ಟರಲ್ಲೇ ದರ್ಶಿನಿ ಮೃತಪಟ್ಟಿದ್ದು, ದುರಂತ. ಇನ್ನು ಈ ಸಾವಿನ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಹಾಗೂ ಪೊಲಿಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ.
Published On - 12:50 pm, Fri, 11 August 23



















