AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳನ್ನ ಕೊಟ್ಟು ಮದುವೆ ಮಾಡಲಿಲ್ಲವೆಂದು 850 ಅಡಕೆ ಗಿಡ ನಾಶ ಮಾಡಿದ ಭೂಪ

Mysuru News: ಮಗಳನ್ನ ಕೊಟ್ಟು ಮದುವೆ ಮಾಡಲಿಲ್ಲವೆಂಬ ದ್ವೇಷಕ್ಕೆ ಕಷ್ಟ ಪಟ್ಟು ಬೆಳೆದಿದ್ದ 850 ಅಡಕೆ ಗಿಡಗಳನ್ನು ಓರ್ವ ಯುವಕ ನಾಶ ಮಾಡಿರುವಂತಹ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಡೇ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಗಳನ್ನ ಕೊಟ್ಟು ಮದುವೆ ಮಾಡಲಿಲ್ಲವೆಂದು 850 ಅಡಕೆ ಗಿಡ ನಾಶ ಮಾಡಿದ ಭೂಪ
ಅಡಕೆ ಗಿಡ ನಾಶ
ದಿಲೀಪ್​, ಚೌಡಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 09, 2023 | 10:48 PM

Share

ಮೈಸೂರು, ಆಗಸ್ಟ್​ 09: ಮಗಳನ್ನ ಕೊಟ್ಟು ಮದುವೆ ಮಾಡಲಿಲ್ಲವೆಂಬ ದ್ವೇಷಕ್ಕೆ ಕಷ್ಟ ಪಟ್ಟು ಬೆಳೆದಿದ್ದ 850 ಅಡಕೆ ಗಿಡ (arecanut) ಗಳನ್ನು ಓರ್ವ ಯುವಕ ನಾಶ ಮಾಡಿರುವಂತಹ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಕಡೇ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ವೆಂಕಟೇಶ್ ಎಂಬುವರಿಗೆ ಸೇರಿದ 3 ಎಕರೆಯಲ್ಲಿ ಬೆಳೆದಿದ್ದ ಅಡಕೆ ಗಿಡಗಳನ್ನು ಅಶೋಕ್ ಎಂಬಾತ ನಾಶ ಮಾಡಿದ್ದಾನೆ.

ವೆಂಕಟೇಶ್ ಪುತ್ರಿಯನ್ನ ಅಶೋಕ್‌ಗೆ ಕೊಡಲು ಮಾತುಕತೆ ನಡೆದಿತ್ತು. ಹುಡುಗ ಸರಿಯಿಲ್ಲ ಎಂದು ಮದುವೆಗೆ ವೆಂಕಟೇಶ್ ಪುತ್ರಿ ಒಪ್ಪಿರಲಿಲ್ಲ. ಅಂದಿನಿಂದ ವೆಂಕಟೇಶ್ ಕುಟುಂಬದವರನ್ನು ಅಶೋಕ್‌ ದ್ವೇಷಿಸುತ್ತಿದ್ದ. ಈ ಹಿಂದೆ ಅರ್ಧ ಎಕರೆಯಲ್ಲಿ ಬೆಳೆದಿದ್ದ ಶುಂಠಿ ಬೆಳೆ ನಾಶ ಮಾಡಿದ್ದಾನೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕುಸಿತ; ಎಷ್ಟು ಗೊತ್ತಾ?

ನಿನ್ನೆ ರಾತ್ರೋರಾತ್ರಿ ಜಮೀನಿಗೆ ನುಗ್ಗಿ ಅಡಕೆ ಗಿಡ ನಾಶ ಮಾಡಿರುವುದಾಗಿ ಆರೋಪಿಸಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಭಾರೀ ಮಳೆ: 1234 ಹೆಕ್ಟರ್ ನಷ್ಟು ಬೆಳೆ ಹಾನಿ

ಬಿದರ್: ಜಿಲ್ಲೆಯಲ್ಲಿ ವಾರದ ಹಿಂದೆ ಸುರಿದ ಮಳೆಯಿಂದಾಗಿ 1234 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ ಹುಲುಸಾಗಿ ಬೆಳೆದ ಉದ್ದು ಸೋಯಾ, ಹೆಸರು ಬೆಳೆ ಹಾನಿಯಾಗಿದೆ. ಜೊತೆಗೆ ಜಿಲ್ಲೆಯ ವಿವಿಧ ಗ್ರಾಮದಲ್ಲಿ ಸುಮಾರು 375 ಮನೆಗಳು ಬಾಗಶಹ ಕುಸಿದಿದ್ದು ಮನೆ ಕಳೆದುಕೊಂಡವರನ್ನ ಕಂಗಾಲು ಮಾಡಿದೆ. ಸರಕಾರ ಭಾಗಶ ಮನೆಕಳೆದುಕೊಂಡವರಿಗೆ 10 ಸಾವಿರ ರೂಪಾಯಿ ಹಣವನ್ನ ಕೊಡುತ್ತಿದೆ, ಆದರೆ ಈ ದುಬಾರಿ ದುನಿಯಾದಲ್ಲಿ ಸರಕಾರ ಕೊಡುವ ಹತ್ತು ಸಾವಿರ ರೂಪಾಯಿ ಸಾಲಾದಾಗಿದ್ದು, ಬಡವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದನ್ನೂ ಓದಿ: ಟೊಮ್ಯಾಟೋ ಮುಟ್ಟಿದವರಿಗೆಲ್ಲಾ ಚಿನ್ನ ಮೆತ್ತಿಕೊಳ್ಳುತ್ತಿದೆ, ಕೋಲಾರ ಎಪಿಎಂಸಿಗೂ ಜಾಕ್​ಪಾಟ್​!

ಅವತ್ತಿನ ದುಡಿಮೆಯಲ್ಲಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರು ಏಕಾಏಕಿ ಮನೆ ಕುಸಿದಿರುವ ಪರಿಣಾಮವಾಗಿ ಬಿದ್ದಿರುವ ಮನೆಯನ್ನ ಕಟ್ಟಿಕೊಳ್ಳಲೇ ಬೇಕಾಗಿದ ಅನಿವಾರ್ಯತೆ ಅವರಿಗೆ ಬಂದೊದಗಿದೆ. ಆದರೆ ಮೊದಲೆ ಮನೆ ಕಟ್ಟುವ ಮುನ್ನ ಸಾಲಮಾಡಿ ಮನೆಗಳನ್ನ ಕಟ್ಟಿಕೊಂಡಿದ್ದಾರೆ ಆ ಸಾಲವೇ ಇನ್ನೂ ಹರೆದಿಲ್ಲ. ಇದರ ನಡುವೆ ಮತ್ತೆ ಬಿದ್ದಿರುವ ಮನೆಯನ್ನ ಕಟ್ಟಿಕೊಳ್ಳಬೇಕಾದರೆ ಸಾಲ ಮಾಡುವ ಅನಿವಾರ್ಯತೆ ಜನರಿಗೆ ಬಂದಿದೆ.

ಮನೆಕಳೆದುಕೊಂಡ ಕೆಲವರಿಗೆ ಪರಿಹಾರ ಕೊಟ್ಟರೆ ಇನ್ನೂ ಕೆಲವರಿಗೆ ಪರಿಹಾರ ಕೊಡಬೇಕಾಗಿದೆ. ಆದರೆ ಸರಕಾರ ನಮಗೆ ಹಣ ಕೊಡುವ ಬದಲು ಬಿದ್ದಿರುವ ಮನೆಯನ್ನ ಕಟ್ಟಿಸಿಕೊಡಿ ಎಂದು ಇಲ್ಲಿನ ಮಹಿಳೆಯವರು ಸರಕಾರಕ್ಕೆ ಜಿಲ್ಲಾಡಳಿತಕ್ಕೆ ಸ್ಥಳಿಯ ಶಾಸಕರಿಗೆ ಮನವಿ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:41 pm, Wed, 9 August 23

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!