ಮಂಡ್ಯದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ಬೆಂಬಲಿಗರ ವಿರುದ್ಧ ಡಿಕೆ ಶಿವಕುಮಾರ್ ಗರಂ; ಮೊಬೈಲ್ ಕಸಿದುಕೊಂಡು ಸಿಡಿಮಿಡಿಗೊಂಡ ಡಿಕೆಶಿ

| Updated By: sandhya thejappa

Updated on: Dec 28, 2021 | 1:44 PM

ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಶಿವಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸತ್ಯಾಗ್ರಹ ಸೌಧ ಬಳಿ ಕಾಂಗ್ರೆಸ್ ಧ್ವಜಾರೋಹಣ ಮಾಡಿದರು.

ಮಂಡ್ಯದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ಬೆಂಬಲಿಗರ ವಿರುದ್ಧ ಡಿಕೆ ಶಿವಕುಮಾರ್ ಗರಂ; ಮೊಬೈಲ್ ಕಸಿದುಕೊಂಡು ಸಿಡಿಮಿಡಿಗೊಂಡ ಡಿಕೆಶಿ
ಬೆಂಬಲಿಗರ ವಿರುದ್ಧ ಗರಂ ಆದ ಡಿಕೆ ಶಿವಕುಮಾರ್
Follow us on

ಮಂಡ್ಯ: ಸೆಲ್ಫಿ ತೆಗೆದುಕೊಳ್ಳಲು ಹೋದ ಬೆಂಬಲಿಗರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಬೆಂಬಲಿಗನ ಮೊಬೈಲ್ ಕಸಿದುಕೊಂಡು ಶಿವಕುಮಾರ್ ಸಿಡಿಮಿಡಿಗೊಂಡಿದ್ದಾರೆ. ಈ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರ ಸತ್ಯಾಗ್ರಹ ಸೌಧ ಬಳಿ ನಡೆದಿದೆ. 137ನೇ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆ ಹಿನ್ನೆಲೆ ಡಿಕೆಶಿ ಧ್ವಜಾರೋಹಣ ಮಾಡಲು ಹೋಗಿದ್ದರು. ಈ ವೇಳೆ ಅಭಿಮಾನಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾರೆ. ಆಗ ಧ್ವಜಾರೋಹಣ ಮಾಡಲು ಬದಲು ಸೆಲ್ಫಿ ತೆಗೆದುಕೊಳ್ಳಲಾ ಅಂತ ಗರಂ ಆಗಿದ್ದಾರೆ.

ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಶಿವಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸತ್ಯಾಗ್ರಹ ಸೌಧ ಬಳಿ ಕಾಂಗ್ರೆಸ್ ಧ್ವಜಾರೋಹಣ ಮಾಡಿದರು. ಮದ್ದೂರಿಗೆ ಆಗಮಿಸಿದ ಡಿಕೆಶಿಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಡಿಕೆಶಿಗೆ ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್, ಮಾಜಿ ಸಚಿವ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಧೃವ ನಾರಾಯಣ್, ಸಲೀಮ್ ಅಹಮ್ಮದ್ ಸೇರಿದಂತೆ ಹಲವರು ಸಾಥ್ ನೀಡಿದರು.

ಧ್ವಜಾರೋಹಣಕ್ಕೂ ಮುನ್ನಾ ಮಾಧ್ಯಮದೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಒಂದು ಇತಿಹಾಸದ ಭೂಮಿಯಲ್ಲಿ ಪವಿತ್ರ ಕಾರ್ಯಕ್ರಮ ಮಾಡುತ್ತಿದ್ದೇವೆ. ಶಿವಪುರದ ಸತ್ಯಾಗ್ರಹ ಸೌದ ಇತಿಹಾಸವುಳ್ಳಂತದ್ದು. ಕೆಂಗಲ್ ಹನುಮಂತಯ್ಯ ನವರ ಕಾಲದಲ್ಲಿ ಈ ಸೌದ ಕಟ್ಟಿದ್ದಾರೆ. ಇದು ನಮ್ಮ ರಾಜ್ಯಕ್ಕೆ ಐತಿಹಾಸಿಕ ಸ್ಥಳವಾಗಿದೆ. ಯಾರು ಯಾರು ಬ್ರಿಟಿಷರ ವಿರುದ್ಧ ಹೋರಾಡಿ ನಮಗೆ ಸ್ವತಂತ್ರ ತಂದುಕೊಟ್ಟರು. ಈ ಸ್ಥಳವೇ ಸತ್ಯಾಗ್ರಹ ಸೌದ. ಈ ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕ್ರಮ ನಡೆಯುತ್ತಿರುವುದು ನಮ್ಮ ಪುಣ್ಯ ಅಂತ ಅಭಿಪ್ರಾಯಪಟ್ಟರು.

ಸಾಧುಗಳ ಆಶೀರ್ವಾದ ಪಡೆಯಲು ಡಿಕೆಶಿ ನಿರಾಕರಣೆ
ಸಾಧುಗಳ ಆಶೀರ್ವಾದ ಪಡೆಯಲು ಡಿಕೆ ಶಿವಕುಮಾರ್ ನಿರಾಕರಿಸಿದ್ದಾರೆ. ಸಾಧುಗಳು ಆಶೀರ್ವದಿಸಲು ಬಂದಿರೋದಾಗಿ ಡಿಕೆಶಿಗೆ ಹೇಳಿ ಎಂದ ಎಂದರು. ದೂರದಿಂದಲೇ ಡಿಕೆಶಿ ಬಳಿಗೆ ತೆರಳಲು ಸಾಧು ಅನುಮತಿ ಕೇಳುತ್ತಾರೆ. ಈ ವೇಳೆ  ಕುಳಿತಲ್ಲೇ ಬೇಡ ಎಂದು ಕೈ ಬೀಸಿ ಆಶೀರ್ವಾದ ಪಡೆಯಲು ನಿರಾಕರಿಸಿದ್ದಾರೆ.

ಇದನ್ನೂ ಓದಿ

Good News: ಭಾರತದಲ್ಲಿ ಇನ್ನೆರಡು ಕೊವಿಡ್ 19 ಲಸಿಕೆಗಳು, ಒಂದು ಔಷಧಿಯ ತುರ್ತು ಬಳಕೆಗೆ ಅನುಮೋದನೆ; ಆರೋಗ್ಯ ಸಚಿವರಿಂದ ಟ್ವೀಟ್​

ಆನೇಕಲ್ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಮಹಿಳೆಯ ಬರ್ಬರ ಕೊಲೆ!

Published On - 12:22 pm, Tue, 28 December 21