ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ: ಡಿಸಿ ಕಚೇರಿ ಬಳಿ ತಳ್ಳಾಟ, ಅನೇಕ ಕಾರ್ಯಕರ್ತರು ಅಸ್ವಸ್ಥ

| Updated By: ಆಯೇಷಾ ಬಾನು

Updated on: Aug 01, 2022 | 6:43 PM

ಇನ್ನು ಪ್ರತಿಭಟನೆ ವೇಳೆ ಬಾಂಬ್ ಹಾಕಿ, ಬಾಂಬ್ ಹಾಕಿ, ಇಸ್ಲಾಂಗೆ ಬಾಂಬ್ ಹಾಕಿ ಎಂದು ಘೋಷಣೆ ಕೂಗಿದ್ದಾರೆ. ರಾಮನ ಮಕ್ಕಳು ನಾವೆಲ್ಲ ಬಾಬರ್ ಸಂತತಿ ಬೇಕಿಲ್ಲ. ಹರ ಹರ ಮಹದೇವ್ ಎಂದು ಘೋಷಣೆ ಕೂಗಿದ್ದಾರೆ.

ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ: ಡಿಸಿ ಕಚೇರಿ ಬಳಿ ತಳ್ಳಾಟ, ಅನೇಕ ಕಾರ್ಯಕರ್ತರು ಅಸ್ವಸ್ಥ
ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ
Follow us on

ಮಂಡ್ಯ: ಪ್ರವೀಣ್ ನೆಟ್ಟಾರು(Praveen Nettar) ಹತ್ಯೆ ಖಂಡಿಸಿ ಮಂಡ್ಯದಲ್ಲಿ ಇಂದು ಬೃಹತ್ ಪ್ರತಿಭಟನೆ(Protest) ನಡೆದಿದೆ. ಹಿಂದೂಪರ ಸಂಘಟನೆಗಳು ಮಂಡ್ಯದ ಬಾಲಕಿಯರ ಸರ್ಕಾರಿ ಕಾಲೇಜು ಮುಂಭಾಗದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ್ದಾರೆ. ಮೆರವಣಿಗೆಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರೂ ಭಾಗಿಯಾಗಿದ್ದರು. ಹಾಗೂ ಧರಣಿ ನಡೆಸಿದ ಕಾರ್ಯಕರ್ತರು ಪ್ರವೀಣ್ ಸಾವಿಗೆ ನ್ಯಾಯ ಒದಗಿಸಬೇಕು. ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ.

ಇನ್ನು ಪ್ರತಿಭಟನೆ ವೇಳೆ ಬಾಂಬ್ ಹಾಕಿ, ಬಾಂಬ್ ಹಾಕಿ, ಇಸ್ಲಾಂಗೆ ಬಾಂಬ್ ಹಾಕಿ ಎಂದು ಘೋಷಣೆ ಕೂಗಿದ್ದಾರೆ. ರಾಮನ ಮಕ್ಕಳು ನಾವೆಲ್ಲ ಬಾಬರ್ ಸಂತತಿ ಬೇಕಿಲ್ಲ. ಹರ ಹರ ಮಹದೇವ್ ಎಂದು ಘೋಷಣೆ ಕೂಗಿದ್ದಾರೆ. ಮಂಡ್ಯ ಡಿಸಿ ಕಚೇರಿ ಬಳಿ ಪ್ರತಿಭಟನೆ ವೇಳೆ ನೂಕಾಟ, ತಳ್ಳಾಟವಾಗಿದೆ. ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಕಾರ್ಯಕರ್ತರು ಯತ್ನಿಸಿದ್ದಾರೆ. ಬ್ಯಾರಿಕೇಡ್ ಕಿತ್ತೊಗೆದು ಡಿಸಿ ಕಚೇರಿ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ತಳ್ಳಾಟ, ನೂಕಾಟವಾಗಿದ್ದು ಕಾರ್ಯಕರ್ತರು ಕುಸಿದುಬಿದ್ದು ಅಸ್ವಸ್ಥರಾದ ಘಟನೆಯೂ ನಡೆದಿದೆ. ಈ ರೀತಿ ಅಸ್ವಸ್ಥರಾದ ಕಾರ್ಯಕರ್ತರನ್ನು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಡಿಸಿ, ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ, ಮನವಿ ಆಲಿಸಿದ್ದಾರೆ.

ಹಿಂದೂ ಸಂಘಟನೆಗಳ ನಾಶ ಮಾಡುತ್ತೇವೆ ಎಂದು ಹೇಳುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಪ್ರವೀಣ್ ಕೊಲೆ ಆರೋಪಿಗಳನ್ನು ಬಂಧಿಸಿ ವಿದೇಶಿದಿಂದ ಹಣದ ನೆರವು ಬಂದಿದೆಯಾ ಎಂಬುದನ್ನ ತನಿಖೆ ನಡೆಸಬೇಕು. ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಥವಾ ಭಯೋತ್ಪಾದನೆ ನಿಗ್ರಹ ಕಾನೂನು ಅಡಿ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದ್ದಾರೆ.

ರೈತರಿಂದ ಟ್ರಾಕ್ಟರ್ ಮತ್ತು ಎತ್ತಿನಗಾಡಿ ಮೆರವಣಿಗೆ

ಇದರ ನಡುವೆ ರೈತ ಸಂಘಟನೆಯಿಂದಲೂ ಪ್ರತಿಭಟನೆ ನಡೆದಿದೆ. ಜಿಎಸ್‌ಟಿ ಖಂಡಿಸಿ ರೈತರು ಟ್ರಾಕ್ಟರ್ ಮತ್ತು ಎತ್ತಿನಗಾಡಿ ಮೆರವಣಿಗೆ ನಡೆಸಿದರು. ಹಿಂದೂ ಪರ ಸಂಘಟನೆ ಕಾರ್ಯಕರ್ತರು ಮತ್ತು ರೈತ ಪರ ಸಂಘಟನೆಗಳ ಧರಣಿಯಿಂದಾಗಿ ಸಕ್ಕರೆ ನಾಡು ಸ್ತಬ್ಧವಾಗಿತ್ತು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ಬಿಸಿಯಿಂದಾಗಿ ವಾಹನ ಸವಾರರು ಹೈರಾಣಾದ್ರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಿ, ಬಾಕಿ ಕೂಲಿ ನೀಡಿ, ಬಡವರಿಗೆ ಹಕ್ಕುಪತ್ರ, ನಿವೇಶನ ರಹಿತರಿಗೆ ನಿವೇಶನ ಕೊಡಿ, ಬಿಪಿಎಲ್ ಕಾರ್ಡ್ ರದ್ದತಿ ಆದೇಶ ಹಿಂಪಡೆಯಿರಿ, ಗ್ರಾಮಕ್ಕೊಂದು ಸ್ಮಶಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ರು.

Published On - 6:43 pm, Mon, 1 August 22