ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್​ 5ರಂದು ಹೆದ್ದಾರಿ ಬಂದ್​ಗೆ ರೈತ ಸಂಘಟನೆ ಕರೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 02, 2022 | 5:40 PM

ಟನ್ ಕಬ್ಬಿಗೆ 4,500 ರೂ. ನಿಗಧಿಯಾಗಬೇಕು. ಪ್ರತಿ ಲೀಟರ್ ಹಾಲಿಗೆ 40 ರೂ. ನೀಡಬೇಕು. ವಿದ್ಯುತ್ ಬಾಕಿ ದರ ಮನ್ನಾ ಮಾಡಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ರೈತರನ್ನ ಕಡೆಗಣಿಸಿವೆ. ಇದನ್ನ ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್​ 5ರಂದು ಹೆದ್ದಾರಿ ಬಂದ್​ಗೆ ರೈತ ಸಂಘಟನೆ ಕರೆ
ಮಂಡ್ಯದಲ್ಲಿ ರೈತ ಸಂಘದಿಂದ ಸಭೆ ಮಾಡಲಾಯಿತು.
Follow us on

ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸರಾ ಹಬ್ಬದ ದಿನ ಹೆದ್ದಾರಿ ಬಂದ್​ಗೆ ರೈತ ಸಂಘಟನೆ ಕರೆ ನೀಡಿದೆ. ದಸರಾ ದಿನ 8 ಕಡೆ ಬೃಹತ್ ಪ್ರತಿಭಟನೆಗೆ ರೈತ ಸಂಘಟನೆ ಕರೆ ನೀಡಿದ್ದು, ಮಂಡ್ಯ, ಮದ್ದೂರು, ಕೆ.ಆರ್​.ಪೇಟೆ, ಮಳವಳ್ಳಿ, ಶ್ರೀರಂಗಪಟ್ಟಣ, ಮೈಸೂರಿನ ಇಲವಾಲ, ಟಿ.ನರಸೀಪುರ, ನಂಜನಗೂಡು, ಹುಣಸೂರಿನಲ್ಲಿ ಹೆದ್ದಾರಿ ಬಂದ್​ ಮಾಡಿ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಬೇಡಿಕೆ ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದ್ದೆವು. ಆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮನವಿಗೆ ಸ್ಪಂದಿಸಿಲ್ಲ. ಹಾಗಾಗಿ ಟ್ರ್ಯಾಕ್ಟರ್, ಎತ್ತಿನಗಾಡಿಗಳ ಮೂಲಕ ಹೆದ್ದಾರಿ ತಡೆಯಲಾಗುವುದು. ರಾಜ್ಯ ಸರ್ಕಾರ ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮಂಡ್ಯದಲ್ಲಿ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿಕೆ ನೀಡಿದರು.

ಟನ್ ಕಬ್ಬಿಗೆ 4,500 ರೂ. ನಿಗಧಿಯಾಗಬೇಕು. ಪ್ರತಿ ಲೀಟರ್ ಹಾಲಿಗೆ 40 ರೂ. ನೀಡಬೇಕು. ವಿದ್ಯುತ್ ಬಾಕಿ ದರ ಮನ್ನಾ ಮಾಡಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ರೈತರನ್ನ ಕಡೆಗಣಿಸಿವೆ. ಇದನ್ನ ಖಂಡಿಸಿ ಪ್ರತಿಭಟನೆ ಮಾಡುತ್ತೇವೆ. ದಸರಾಗೆ ಅಡ್ಡಿಪಡಿಸೋ ಉದ್ದೇಶ ನಮಗಿಲ್ಲ. ನಮ್ಮನ್ನ ಬಂಧಿಸಿ, ಜೈಲಿಗೆ ಕಳಿಸಿದರೂ ಸರಿ ಪ್ರತಿಭಟನೆ ಕೈ ಬಿಡಲ್ಲ. ಸರ್ಕಾರ ಈ ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ರೈತ ಸಂಘನೆ ಆಗ್ರಹಿಸಿದೆ.

ಅರಣ್ಯ ಅತಿಕ್ರಮಣದಾರರನ್ನ ಓಕ್ಕಲೆಬ್ಬಿಸದಂತೆ ಪ್ರತಿಭಟನೆ: ಸ್ಪೀಕರ್ ಕಾಗೇರಿ ನಿವಾಸದ ಮುಂದೆ ಪ್ರತಿಭಟನೆ

ಕಾರವಾರ: ಅರಣ್ಯ ವ್ಯಾಪ್ತಿಯಲ್ಲಿ ನೆಲೆಸಿರುವವರನ್ನ ಒಕ್ಕಲೆಬ್ಬಿಸುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಉ.ಕನ್ನಡ ಜಿಲ್ಲೆ ಶಿರಸಿಯಲ್ಲಿ ಅರಣ್ಯವಾಸಿಗಳಿಂದ ಸ್ಪೀಕರ್ ಕಾಗೇರಿ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗಿದೆ. ಜಿಲ್ಲಾ ಹೋರಾಟ ಸಮಿತಿಯ ರವೀಂದ್ರನಾಥ್​ ನೇತೃತ್ವದಲ್ಲಿ ಧರಣಿ ಮಾಡಲಾಗಿದೆ. ಪ್ರತಿಭಟನೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಾಥ್​​ ನೀಡಿದರು. ಅರಣ್ಯವಾಸಿಗಳಿಗೆ ಹಕ್ಕು ಪತ್ರ ಕೊಡಿಸುವಂತೆ ಆಗ್ರಹಿಸಿ ಶಿರಸಿ ಕ್ಷೇತ್ರದ ಶಾಸಕರಾಗಿರುವ ಕಾಗೇರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕಳೆದ ಮೂವತ್ತು ವರ್ಷದಿಂದ ಹೋರಾಟ ನಡೆಯುತ್ತಿದೆ.

ಸರಕಾರದ ಇಚ್ಛಾಶಕ್ತಿ ಕೊರತೆಯಿಂದ ಇವತ್ತು ಅರಣ್ಯ ಅತಿಕ್ರಮಣದಾರರು ಪಟ್ಟ ಸಿಗದೆ ಬೀದಿಗೆ ಬೀಳುವಂತಾಗಿದೆ ಎಂದು ಹೋರಾಟಗಾರರು ಆರೋಪಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ಹೋರಾಟ‌ ಮಾಡಲಾಯಿತು. ಮುಂದಿನ ದಿನದಲ್ಲಿ ಹೋರಾಟದ ಹಾದಿ ಇನ್ನು ತೀವ್ರವಾಗುವದರೊಳಗೆ ಸರಕಾರ ಅರಣ್ಯ ಅತಿಕ್ರಮಣದಾರರ ಪರವಾಗಿ ನಿಲ್ಲಬೇಕು ಎಂದು ಹೋರಾಟಗಾರರು ಎಚ್ಚರಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 5:36 pm, Sun, 2 October 22