Bharath Jodo Yatra: ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆ ಆರಂಭ: ರಾಹುಲ್ ಜೊತೆಗೆ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 06, 2022 | 9:17 AM

ಮಂಡ್ಯದಲ್ಲಿ ಪಾದಯಾತ್ರೆ ಆರಂಭವಾಗಿದ್ದು ಕೆಲವೇ ನಿಮಿಷಗಳಲ್ಲಿ ಸೋನಿಯಾ, ರಾಹುಲ್ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.  ಮಂಡ್ಯದ ಬೆಳ್ಳಾಳೆಯಿಂದ ಪಾದಯಾತ್ರೆ ಪ್ರಾರಂಭವಾಗಿದೆ.

Bharath Jodo Yatra: ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆ ಆರಂಭ: ರಾಹುಲ್ ಜೊತೆಗೆ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ
ಪಾದಯಾತ್ರೆಯಲ್ಲಿ ರಾಹುಲ್ ಮತ್ತು ಸೋನಿಯಾ ಗಾಂಧಿ
Follow us on

ಮಂಡ್ಯ: ಎರಡು ದಿನಗಳ ಬ್ರೇಕ್ ಬಳಿಕ ಕರ್ನಾಟಕದಲ್ಲಿ 5ನೇ ದಿನದ ಭಾರತ್ ಜೋಡೋ ಯಾತ್ರೆ(Bharat Jodo Yatra) ಮತ್ತೆ ಇಂದಿನಿಂದ ಆರಂಭವಾಗಿದೆ. ಇಂದು ಆರಂಭವಾದ ಯಾತ್ರೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಹೆಜ್ಜೆ ಹಾಕಿದರು. ಮಂಡ್ಯದ ಬೆಳ್ಳಾಳೆಯಿಂದ ಪಾದಯಾತ್ರೆ ಪ್ರಾರಂಭವಾಗಿದೆ. ರಾಹುಲ್ ಗಾಂಧಿ(Rahul Gandhi) ಮತ್ತು ಸೋನಿಯಾ ಗಾಂಧಿ ಜೊತೆ ಜೊತೆಗೆ ಹೆಜ್ಜೆ ಹಾಕಿದ್ದು ವಿಶೇಷ.

ಮಂಡ್ಯದಲ್ಲಿ ಪಾದಯಾತ್ರೆ ಆರಂಭವಾಗಿದ್ದು ಸೋನಿಯಾ, ರಾಹುಲ್ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕಬಿನಿ ಬಳಿಯ ಆರೆಂಜ್‌ ಕೌಂಟಿ ರೆಸಾರ್ಟ್‌ನಿಂದ ವಾಟರ್‌ವುಡ್‌ ರೆಸಾರ್ಟ್​ಗೆ ಬೋಟ್‌ ಮೂಲಕ ಪ್ರಯಾಣ ಬೆಳೆಸಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾದರು. ಪಾಂಡವಪುರದ ತೂಬಿನಕೆರೆಯಲ್ಲಿ ಹೆಲಿಕಾಪ್ಟರ್‌ ಲ್ಯಾಂಡಿಂಗ್ ಆಯಿತು. ನಂತರ ತೂಬಿನಕೆರೆಯಿಂದ ಜಕ್ಕನಹಳ್ಳಿಗೆ ಸೋನಿಯಾ ಆಗಮಿಸಿ ಬೆಳಗ್ಗೆ 8ಗಂಟೆಗೆ ಜಕ್ಕನಹಳ್ಳಿಯಿಂದ ಸಾಂಕೇತಿಕವಾಗಿ ಯಾತ್ರೆಯಲ್ಲಿ ಭಾಗಿಯಾದರು. ಸೋನಿಯಾ ಗಾಂಧಿ ಸುಮಾರು 10-15 ನಿಮಿಷ ಕಾಲ ಹೆಜ್ಜೆ ಹಾಕಲಿದ್ದಾರೆ.

ಯಾತ್ರೆ ಬೆಳಗ್ಗೆ 11 ಗಂಟೆಗೆ ಖಾರದ್ಯಾ ಕೆರೆ ತಲುಪಲಿದೆ. ಸಂಜೆ 4 ಗಂಟೆವರೆಗೆ ನಾಯಕರು ವಿಶ್ರಾಂತಿ ಪಡೆಯಲಿದ್ದು ಸಂಜೆ 4 ಗಂಟೆಗೆ ಭಾರತ್ ಜೋಡೋ ಯಾತ್ರೆ ಪುನಾರಂಭವಾಗುತ್ತೆ. ಸಂಜೆ 7ಕ್ಕೆ ಬ್ರಹ್ಮದೇವರ ಹಳ್ಳಿಗೆ ತಲುಪಿ ರಾತ್ರಿ ವಿಸ್ಡಮ್​ ಶಾಲೆಯಲ್ಲಿ ಕಾಂಗ್ರೆಸ್ ನಾಯಕರು ವಾಸ್ತವ್ಯ ಹೂಡಲಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಯಾತ್ರೆ ನಡೆಯಲಿದೆ.

ಶಾಸಕರ ವಿರುದ್ಧ ಸುರ್ಜೇವಾಲ ಕಿಡಿ

ಬೆಂಗಳೂರಿನ ಶಾಸಕರಿಗೆ ಸ್ವತಃ ಪೋನ್​ ಮಾಡಿದ ಸುರ್ಜೆವಾಲ್, ಪಾದಯಾತ್ರೆಯಲ್ಲಿ ಜನರನ್ನ ಕರೆತಂದು ಭಾಗಿಯಾಗುವಂತೆ ಸೂಚಿಸಿದ್ದಾರೆ. ರಾಮಲಿಂಗಾರೆಡ್ಡಿ, ಜಮೀರ್, ಹ್ಯಾರಿಸ್​, ಸೌಮ್ಯರೆಡ್ಡಿ ಸೇರಿದಂತೆ ಎಲ್ಲ ಕಾಂಗ್ರೆಸ್​ ಶಾಸಕರಿಗೆ ಪೋನ್​ ಮೂಲಕ ಸೂಚಿಸಿದ್ದಾರೆ.​

ಈ ಹಿಂದೆ ಅಕ್ಟೊಬರ್​ 3ರಂದು ಜನರನ್ನು ಕರೆ ತರದ ಶಾಸಕರಿಗೆ ಕೆ.ಸಿ.ವೇಣುಗೋಪಾಲ್ ಕ್ಲಾಸ್ ತೆಗೆದುಕೊಂಡಿದ್ರು, ಜಮೀರ್ ಅಹಮದ್ ಖಾನ್ ಗೆ ಕೆಸಿ ವೇಣುಗೋಪಾಲ್ ಕ್ಲಾಸ್​ ತೆಗೆದುಕೊಂಡಿದ್ರು. ಕ್ಷೇತ್ರದಿಂದ ಐದು ಸಾವಿರ ಜನರೊಂದಿಗೆ ಬರುವಂತೆ ಎಐಸಿಸಿ ಸೂಚನೆ ನೀಡಿತ್ತು. ಆದರೆ ಜಮೀರ್ ಅಹಮದ್ ಖಾನ್ ಕಡಿಮೆ ಬೆಂಬಲಿಗರೊಂದಿಗೆ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:19 am, Thu, 6 October 22