ಪ್ರಧಾನಿ ಮೋದಿ ಕರ್ನಾಟಕಕ್ಕೆ ಪದೇಪದೆ ಗೊಂಬೆ ಕುಣಿಸಲು ಬರ್ತಾರಾ? : ಹೆಚ್​ ಡಿ ಕುಮಾರಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಪದೇಪದೆ ಗೊಂಬೆ ಕುಣಿಸಲು ಬರ್ತಾರಾ? ಎಂದು ನಾಗಮಂಗಲದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಕರ್ನಾಟಕಕ್ಕೆ ಪದೇಪದೆ ಗೊಂಬೆ ಕುಣಿಸಲು ಬರ್ತಾರಾ? : ಹೆಚ್​ ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ
Edited By:

Updated on: Sep 04, 2022 | 4:42 PM

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ (Narendra Modi) ಕರ್ನಾಟಕಕ್ಕೆ ಪದೇಪದೆ ಗೊಂಬೆ ಕುಣಿಸಲು ಬರ್ತಾರಾ? ಎಂದು ನಾಗಮಂಗಲದಲ್ಲಿ (Nagamangala) ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumarswamy) ಕಿಡಿಕಾರಿದ್ದಾರೆ. ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಮೋದಿ ಇಲ್ಲಿಗೆ ಬರ್ತಾರೆ? ಕಳೆದ 3-4 ವರ್ಷಗಳಲ್ಲಿ 40 ಸಾವಿರ ಕೋಟಿ ಬೆಳೆ ನಾಶವಾಗಿದೆ. ರಾಜ್ಯದಲ್ಲಿ ಸುಮಾರು 40 ಸಾವಿರ ಕೋಟಿ ಮೌಲ್ಯದ ಬೆಳೆ ನಾನಿಯಾಗಿದೆ. ರಾಜ್ಯದ ಸಂತ್ರಸ್ತ ರೈತರಿಗೆ ಕೇಂದ್ರ ಸರ್ಕಾರ ನೆರವು ನೀಡಿಲ್ಲ. ಕೇವಲ ಭಾಷಣ ಮಾಡಲು ಪ್ರಧಾನಿ ಮೋದಿ ರಾಜ್ಯಕ್ಕೆ ಬರ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಕ್ಸೋ ಕೇಸ್​ನಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಮುರುಘಾಶ್ರೀ ವಿಚಾರವಾಗಿ ಮಾತನಾಡಿದ ಅವರು ಜನರ ಮನಸ್ಸಿನಲ್ಲಿ ಅಪನಂಬಿಕೆ ಬರದ ರೀತಿ ಕ್ರಮ ಕೈಗೊಳ್ಳಬೇಕು. ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳೋದು ಸರ್ಕಾರದ ಕರ್ತವ್ಯ. ಈ ವಿಚಾರವನ್ನ ಸಾರ್ವಜನಿಕವಾಗಿ ಚರ್ಚೆ ಮಾಡುವುದು ಅನವಶ್ಯಕ. ಸತ್ಯಾಂಶಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆ ಮೇಲೆ ಶಾಸಕ ಅರವಿಂದ ಲಿಂಬಾವಳಿ ದರ್ಪ ತೋರಿದ ವಿಚಾರವಾಗಿ ಮಾತನಾಡಿದ ಅವರು ಅರವಿಂದ ಲಿಂಬಾವಳಿ ಹೆಣ್ಣು ಮಕ್ಕಳನ್ನು ರೇಪ್ ಮಾಡಲ್ಲ. ಅರವಿಂದ ಲಿಂಬಾವಳಿ ನಡವಳಿಕೆಯೇ ಬೇರೆ ಇದೆ. ಲಿಂಬಾವಳಿ ಸಿಡಿ ಇದೆ ನೋಡಿದರೆ ಏನು ಅಂತಾ ಗೊತ್ತಾಗುತ್ತೆ. ಸಿಡಿ ನೋಡದಂತೆ ಅರವಿಂದ ಲಿಂಬಾವಳಿ ತಡೆಯಾಜ್ಞೆ ತಂದಿದ್ದಾರೆ ಎಂದರು.

ಜನಪ್ರತಿನಿಧಿಗಳು ಗೌರವಯುತವಾಗಿ ಅಹವಾಲು ಸ್ವೀಕರಿಸಬೇಕು. ತಪ್ಪು ಮಾಡಿದ್ದರೆ ಕಾನೂನಿನ ಚೌಕಟ್ಟಿನಲ್ಲಿ ಮನವರಿಕೆ ಮಾಡಲಿ. ಹೆಣ್ಣುಮಗಳ ಜೊತೆ ಅಗೌರವಾಗಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Sun, 4 September 22