ಅಕ್ಕನ ಸಾವಿನ ಸೇಡಿಗೆ ಜಾನಪದ ಹಾಡುಗಾರನ ಕೊಲೆ ಮಾಡಿದ್ದ ಅಪ್ರಾಪ್ತ ಅರೆಸ್ಟ್

| Updated By:

Updated on: Jun 02, 2020 | 7:09 AM

ಮಂಡ್ಯ: ಮೇ 28 ರಂದು ಹಾಡಹಗಲೇ ಯುವಕನನ್ನು ಕತ್ತುಕೂಯ್ದು ಹತ್ಯೆ ಮಾಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಕೆ.ಎಂ.ದೊಡ್ಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಯುವಕನನ್ನ ಕೊಂದ ಆರೋಪಿ ಅಪ್ರಾಪ್ತನಾಗಿದ್ದು ತನ್ನ ಅಕ್ಕನ ಸಾವಿಗೆ ಕಾರಣರಾದವನನ್ನ 5 ವರ್ಷಗಳ ಕಾಲ ಹೊಂಚು ಹಾಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ರಘು(27) ಮೇ 28ರ ಬೆಳಗ್ಗೆ 10.3ರ ಸುಮಾರಿಗೆ ಬೈಕ್​ನಲ್ಲಿ ಕಪನೀಗೌಡ ರಸ್ತೆಯಲ್ಲಿ ಹೋಗುತ್ತಿದ್ದ. ಈ ವೇಳೆ ಬೈಕ್ ತಡೆದು ನಿಲ್ಲಿಸಿ ಕತ್ತುಕೂಯ್ದು ಕೊಲೆ ಮಾಡಿ ಆರೋಪಿ […]

ಅಕ್ಕನ ಸಾವಿನ ಸೇಡಿಗೆ ಜಾನಪದ ಹಾಡುಗಾರನ ಕೊಲೆ ಮಾಡಿದ್ದ ಅಪ್ರಾಪ್ತ ಅರೆಸ್ಟ್
Follow us on

ಮಂಡ್ಯ: ಮೇ 28 ರಂದು ಹಾಡಹಗಲೇ ಯುವಕನನ್ನು ಕತ್ತುಕೂಯ್ದು ಹತ್ಯೆ ಮಾಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಕೆ.ಎಂ.ದೊಡ್ಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಯುವಕನನ್ನ ಕೊಂದ ಆರೋಪಿ ಅಪ್ರಾಪ್ತನಾಗಿದ್ದು ತನ್ನ ಅಕ್ಕನ ಸಾವಿಗೆ ಕಾರಣರಾದವನನ್ನ 5 ವರ್ಷಗಳ ಕಾಲ ಹೊಂಚು ಹಾಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ರಘು(27) ಮೇ 28ರ ಬೆಳಗ್ಗೆ 10.3ರ ಸುಮಾರಿಗೆ ಬೈಕ್​ನಲ್ಲಿ ಕಪನೀಗೌಡ ರಸ್ತೆಯಲ್ಲಿ ಹೋಗುತ್ತಿದ್ದ. ಈ ವೇಳೆ ಬೈಕ್ ತಡೆದು ನಿಲ್ಲಿಸಿ ಕತ್ತುಕೂಯ್ದು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ.

ಜಾನಪದ ಹಾಡುಗಾರನೂ ಆಗಿದ್ದ ರಘು ಕೊಲೆ ಗ್ರಾಮದಲ್ಲೇ ಅಲ್ಲದೆ ಸುತ್ತಮುತ್ತಲ ಗ್ರಾಮಗಳಲ್ಲೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಆತನನ್ನ ಕೊಲೆ ಮಾಡಿದವರನ್ನ ಕೂಡಲೇ ಬಂಧಿಸುವಂತೆ ಒತ್ತಾಯವೂ ಕೇಳಿ ಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಎಂ.ದೊಡ್ಡಿ ಪೊಲೀಸರು ತನಿಖೆ ಪೂರ್ಣಗೊಳಿಸಿದ್ದು, ಅದೇ ಗ್ರಾಮದ 17 ವರ್ಷದ ಅಪ್ರಾಪ್ತ ಬಾಲಕನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಕನ ಸಾವಿನ ಸೇಡಿಗೆ ಕೊಲೆ:
ಕಳೆದ 5 ವರ್ಷಗಳ ಹಿಂದೆ ರಘು, ಆರೋಪಿಯ ಅಕ್ಕನನ್ನ ಪ್ರೀತಿ ಮಾಡುತ್ತಿದ್ದ. ರಘು ಹಾಗೂ ಆಕೆಯ ಪ್ರೀತಿಗೆ ಇಬ್ಬರ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಪ್ರೇಮಿಗಳಿಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದರು. ರಘು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆ, ಯುವತಿ ನೇಣಿಗೆ ಶರಣಾಗಿ ಪ್ರಾಣ ಬಿಟ್ಟಿದ್ದಳು. ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ ರಘು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿದ್ದ.

ಅಂದಿನಿಂದಲೂ ರಘುವಿನ ಮೇಲೆ ಸೇಡು ತೀರಿಸಿಕೊಂಡು ತನ್ನ ಅಕ್ಕನ ಸಾವಿಗೆ ನ್ಯಾಯ ದೊರಕಿಸಿಕೊಡಲು ಅಪ್ರಾಪ್ತ ಹೊಂಚು ಹಾಕುತ್ತಿದ್ದ. ಅದರಂತೆ ಮೇ 28 ರಂದು ರಘು ಹುಲ್ಲು ತರುವುದಕ್ಕಾಗಿ ಹೋಗುತ್ತಿದ್ದ ವೇಳೆ ಬೈಕ್ ಅಡ್ಡಗಟ್ಟಿ ಆತನ ಕತ್ತು, ಹೊಟ್ಟೆಭಾಗ ಸೇರಿದಂತೆ ವಿವಿಧೆಡೆ 17 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಸದ್ಯ ಅಪ್ರಾಪ್ತ ಆರೋಪಿಯನ್ನ ಬಂಧಿಸಿರುವ ಕೆ.ಎಂ.ದೊಡ್ಡಿ ಪೊಲೀಸರು ಆತನನ್ನ ರಿಮ್ಯಾಂಡ್ ಹೋಂಗೆ ಬಿಡುವ ಮೊದಲು ಕೊವಿಡ್ ಟೆಸ್ಟ್ ನಡೆಸಿದ್ದು, ಜಿಲ್ಲೆಯಲ್ಲೇ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ಕ್ವಾರಂಟೈನ್ ಮಾಡಿದ್ದಾರೆ.

Published On - 7:07 am, Tue, 2 June 20