ಲೋಕಾಯುಕ್ತ ಬಲೆಗೆ ಬಿದ್ದ ಮಳವಳ್ಳಿ ಪುರಸಭೆ ಅಧಿಕಾರಿ; ಲಂಚ ಸ್ವೀಕರಿಸಿದೆಷ್ಟು ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 26, 2023 | 7:35 PM

ವಿಕಲಚೇತನರಿಗೆ ನೀಡಿದ್ದ ವಾಹನದ ಹಣ ಬಿಡುಗಡೆಗೆ ಹಾವೇರಿ ಮೂಲದ ಶಿವರಾಜ್ ಹೊಳ್ಳಾಲ್ ಎಂಬುವವರ ಹತ್ತಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಮಂಡ್ಯ ಲೋಕಾಯುಕ್ತ ಡಿವೈಎಸ್​ಪಿ ಸುನೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಶ್ರೀರಂಗಪಟ್ಟಣ ಪುರಸಭೆ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ಬಲೆಗೆ ಬಿದ್ದ ಮಳವಳ್ಳಿ ಪುರಸಭೆ ಅಧಿಕಾರಿ; ಲಂಚ ಸ್ವೀಕರಿಸಿದೆಷ್ಟು ಗೊತ್ತಾ?
ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
Follow us on

ಮಂಡ್ಯ, ಸೆ.26: ಜಿಲ್ಲೆಯ ಮಳವಳ್ಳಿ ಪುರಸಭೆ ಸಮುದಾಯ ವ್ಯವಹಾರ ಅಧಿಕಾರಿ ಆರ್.ನಾಗೇಂದ್ರ ಎಂಬುವವರು 1.20 ಲಕ್ಷ ರೂ. ಲಂಚ (bribe)ಕ್ಕೆ ಬೇಡಿಕೆ ಇಟ್ಟು, 40,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಹೌದು, ವಿಕಲಚೇತನರಿಗೆ ನೀಡಿದ್ದ ವಾಹನದ ಹಣ ಬಿಡುಗಡೆಗೆ ಹಾವೇರಿ ಮೂಲದ ಶಿವರಾಜ್ ಹೊಳ್ಳಾಲ್ ಎಂಬುವವರ ಹತ್ತಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಮಂಡ್ಯ ಲೋಕಾಯುಕ್ತ ಡಿವೈಎಸ್​ಪಿ ಸುನೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಶ್ರೀರಂಗಪಟ್ಟಣ ಪುರಸಭೆ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ರೆಡ್​ಹ್ಯಾಂಡ್​ ಆಗಿ ಲೋಕಾ ಬಲೆಗೆ ಸಿಕ್ಕಿಬಿದ್ದಿದ್ದಾರೆ.

7 ಸಾವಿರ ರೂ. ಲಂಚ ಸ್ವೀಕರಿಸ್ತಿದ್ದ ಸರ್ವೆ ಅಧಿಕಾರಿ ಲೋಕಾಯುಕ್ತ ಬಲೆಗೆ

ಬೆಂಗಳೂರು: ನಗರದ ಕೆ.ಆರ್.ಪುರಂನ ಪೂರ್ವ ತಾಲೂಕು ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಸರ್ವೆ ಅಧಿಕಾರಿ ಮೂರ್ತಿ ಎಂಬಾತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಜಮೀನಿನ ಸರ್ವೆ ಮಾಡಲು ರೈತನಿಂದ 7 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಸರ್ವೆ ಅಧಿಕಾರಿ ಮೂರ್ತಿ ನಾಯಕ್ ಅವರನ್ನು ಲೋಕಾಯುಕ್ತ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಮೂರ್ತಿ ನಾಯಕ್​ನನ್ನು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಲಂಚ ಪ್ರಕರಣ: ಸಹಾಯಕ ಆಯುಕ್ತೆ ತಬಸ್ಸುಮ್ ಜಹೇರಾ, ಉಪ ತಹಶೀಲ್ದಾರ್ ಶಬ್ಬೀರ್​​ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಲೋಕಾಯುಕ್ತ ನ್ಯಾಯಾಲಯ

ಇನ್ನು ಇದೇ ಸೆ.15 ರಂದು ಒಂದು ಲಕ್ಷ ಲಂಚ ಸ್ವೀಕರಿಸುವಾಗ ಬೀದರ್​ ಜಿಲ್ಲೆಯ ಬಸವಕಲ್ಯಾಣ ಉಪ ತಹಶೀಲ್ದಾರ್​ ಶಿವಾನಂದ ಬಿರಾದಾರ್ ಎಂಬಾತ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿತ್ತು. ಇವರು ಕೊಹಿನೂರು ನಾಡಕಚೇರಿ ಉಪ ತಹಶೀಲ್ದಾರ್ ಆಗಿದ್ದು, ಮುಚ್ಚಿಳಮ ಗ್ರಾಮದ ರೈತ ಸುಧೀರ್​ ಎಂಬುವವರು ಜಮೀನು ಪಹಣಿ ಕೊಡುವಂತೆ ಕೇಳಿದ್ದರು. ಅದಕ್ಕೊಸ್ಕರ ಉಪ ತಹಶೀಲ್ದಾರ್​ 1 ಲಕ್ಷ ರೂಪಾಯಿಗೆ ಲಂಚಕ್ಕೆ ಬೇಡಿಕೆ‌ ಇಟ್ಟಿದ್ದರು. ಈ ಕುರಿತು ಲೋಕಾಯುಕ್ತ DySP ಎನ್​ಎಂ ಓಲೇಕಾರ್ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದ್ದು, ಲಂಚ ಸ್ವೀಕರಿಸುವಾಗ ಶಿವಾನಂದ ಅವರು ಸಿಕ್ಕಿಬಿದ್ದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ