ಮಂಡ್ಯ: ಭಕ್ತನ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ದೇವಿಯ ತಾಳಿ ಕದ್ದು ಪರಾರಿಯಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನ ಹೊಳೆ ಬೀದಿಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ತಾಯಿ ದೇವಾಲಯದಲ್ಲಿ ನಡೆದಿದೆ. 6 ಗ್ರಾಂ ಚಿನ್ನದ ತಾಳಿ ಕಿತ್ತುಕೊಂಡು ಕಳ್ಳ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಭಕ್ತನಂತೆ ಬಂದು ದೇವಿಗೆ ಕೈಮುಗಿದು ಬಳಿಕ ಕೃತ್ಯ ಎಸಗಿದ್ದಾನೆ. ಅರ್ಚಕರು ದೇವಾಲಯದಿಂದ ಹೊರದೋಗುತ್ತಿದ್ದಂತೆ ಕಳ್ಳ ತನ್ನ ಕೈಚಳ ತೋರಿದ್ದು, ಗರ್ಭಗುಡಿಗೆ ನುಗ್ಗಿ ದೇವಿ ವಿಗ್ರಹದಲ್ಲಿದ್ದ ತಾಳಿ ಕಿತ್ತು ಪರಾರಿಯಾಗಿದ್ದಾನೆ. ಕಳ್ಳ ದೇವಿಗೆ ಕೈಮುಗಿದು, ಬಳಿಕ ಗರ್ಭಗುಡಿಗೆ ನುಗ್ಗಿ ಚಿನ್ನದ ತಾಳಿ ಕಿತ್ತುಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಮದ್ದೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಮನೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನ ಬಂಧನ
ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ರಾತ್ರಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಬಂಧಿತ ಆರೋಪಿ. ರಾಡ್ನಿಂದ ಬಾಗಿಲು ಮೀಟಿ ಕಳ್ಳತನ ಮಾಡುತ್ತಿದ್ದ ಆರೋಪಿ ಸುರೇಶ್, ಅಂಗಳದ ಮುಂದೆ ಕಸ ಗುಡಿಸದೇ ಇರುವ ಮನೆಗಳು, ನ್ಯೂಸ್ ಪೇಪರ್ಗಳು ಬಿದ್ದಿರುವ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಸದ್ಯ ಬ್ಯಾಡರಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ 28 ಲಕ್ಷ ಮೌಲ್ಯದ 534 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಆರೋಪಿ ಬಂಧನದಿಂದ ಒಟ್ಟು 8 ಪ್ರಕರಣ ಬೆಳಕಿಗೆ ಬಂದಿದ್ದು, ಮಾಗಡಿ, ರಾಜಗೋಪಾಲನಗರ, ಬ್ಯಾಡರಹಳ್ಳಿ ಸೇರಿ ಹಲವೆಡೆ ಮನೆಗಳ್ಳತನ ಮಾಡುತ್ತಿದ್ದ ಎನ್ನುವುದು ಸಾಭೀತಾಗಿದೆ.
ಚಿಕ್ಕಮಗಳೂರು: ನಗರದಲ್ಲಿ ಪುಂಡರ ದಾಂದಲೆ
ನಡುರಸ್ತೆಯಲ್ಲಿಯೇ 2 ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹೃದಯಭಾಗ ಐ.ಜಿ ರಸ್ತೆಯಲ್ಲಿ ನಡೆದಿದೆ. ಪೊಲೀಸರ ಭಯವಿಲ್ಲದೇ ರೌಡಿಗಳಂತೆ ಓಡಾಡಿ 2 ಗುಂಪುಗಳು ದಾಂದಲೆ ನಡೆಸಿವೆ. ರಸ್ತೆ ಮಧ್ಯೆದಲ್ಲಿ ಪುಂಡರ ಬಡಿದಾಟ ನೋಡಿ ಜನರು ಆತಂಕಗೊಂಡಿದ್ದಾರೆ. ಸದ್ಯ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮಲ್ಲೋಹಳ್ಳಿಯಲ್ಲಿ ಎಲೆಕ್ಟ್ರಿಕಲ್ ಉಪಕರಣ ಕಳ್ಳತನ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮಲ್ಲೋಹಳ್ಳಿಯಲ್ಲಿ ಎಲೆಕ್ಟ್ರಿಕಲ್ ಉಪಕರಣ ಕಳ್ಳತನವಾಗಿದೆ. ನಿವೃತ್ತ ಡಿವೈಎಸ್ಪಿ ನಾಣಯ್ಯ ಅವರ ತೋಟದಲ್ಲಿ ಬೋರ್ ವೆಲ್ಗೆ ಅಳವಡಿಸಿದ್ದ ಸುಮಾರು 25 ಸಾವಿರ ಬೆಲೆಬಾಳುವ ಎಲೆಕ್ಟ್ರಿಕಲ್ ವಸ್ತುಗಳು ಕಳವಾಗಿವೆ. ದೊಡ್ಡ ಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:
ಮನೆ ಮನೆ ಸುತ್ತಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; ಬಂಧಿತನಿಂದ 20 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ
ಎನ್ಆರ್ಐ ಲೇಔಟ್ನ ಮನೆಯಲ್ಲಿ ಕಳ್ಳತನ; 40 ಗ್ರಾಂ ಚಿನ್ನ, 4 ಸಾವಿರ ಹಣ ಕಳವು
Published On - 9:26 am, Fri, 26 November 21