AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಆರ್​ಐ ಲೇಔಟ್​ನ​ ಮನೆಯಲ್ಲಿ ಕಳ್ಳತನ; 40 ಗ್ರಾಂ ಚಿನ್ನ, 4 ಸಾವಿರ ಹಣ ಕಳವು

Crime News: 40 ಗ್ರಾಮ್​ ಚಿನ್ನ, 4 ಸಾವಿರ ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ. ಬೆಳ್ಳಿ ಆಭರಣ ಬಿಟ್ಟು ಚಿನ್ನಾಭರಣ ಮಾತ್ರ ಕದ್ದೊಯ್ದಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.C

ಎನ್​ಆರ್​ಐ ಲೇಔಟ್​ನ​ ಮನೆಯಲ್ಲಿ ಕಳ್ಳತನ; 40 ಗ್ರಾಂ ಚಿನ್ನ, 4 ಸಾವಿರ ಹಣ ಕಳವು
ಎನ್​ಆರ್​ಐ ಲೇಔಟ್​ನ​ ಮನೆಯಲ್ಲಿ ಕಳ್ಳತನ
TV9 Web
| Edited By: |

Updated on:Nov 14, 2021 | 9:44 PM

Share

ಬೆಂಗಳೂರು: ಇಲ್ಲಿನ ಎನ್​ಆರ್​ಐ ಲೇಔಟ್​ನ ಮನೆಯಲ್ಲಿ ಕಳ್ಳತನವಾದ ಘಟನೆ ಇಂದು (ನವೆಂಬರ್ 14) ಸಂಭವಿಸಿದೆ. ಶಿವಾನಂದ, ವೇದಾವತಿ ದಂಪತಿ ಮನೆಯಲ್ಲಿ ಕಳ್ಳತನ ಆಗಿದೆ. ಬೆಳಗ್ಗೆ 10ರ ಸುಮಾರಿಗೆ ವೇದಾವತಿ ತಾಯಿ ಮನೆಗೆ ತೆರಳಿದ್ದರು. ಮಧ್ಯಾಹ್ನ 1 ಗಂಟೆಗೆ ಮನೆಗೆ ಹಿಂದಿರುಗುವಷ್ಟರಲ್ಲಿ ಕಳ್ಳತನ ಆಗಿದೆ. 40 ಗ್ರಾಮ್​ ಚಿನ್ನ, 4 ಸಾವಿರ ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ. ಬೆಳ್ಳಿ ಆಭರಣ ಬಿಟ್ಟು ಚಿನ್ನಾಭರಣ ಮಾತ್ರ ಕದ್ದೊಯ್ದಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ ಒತ್ತಾಯಪೂರ್ವಕವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆರೋಪ ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ. ಅದ್ದೆ ಗೇಟ್ ಬಳಿಯ ಶೆಡ್​​ಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಅದ್ದೆ ಗೇಟ್​ನಲ್ಲಿ ಘಟನೆ ನಡೆದಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕೋಲಾರ: ಮಾಲಾಧಾರಿಗಳಿದ್ದ ಬಸ್ ಮೇಲೆ ಕಲ್ಲು ತೂರಾಟ ಮಾಲಾಧಾರಿಗಳಿದ್ದ ಬಸ್ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ 10 ಆರೋಪಿಗಳನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಉಳಿದ ಆರೋಪಿಗಳಿಗಾಗಿ ಕೋಲಾರ ಪೊಲೀಸರಿಂದ ಶೋಧಕಾರ್ಯ ನಡೆದಿದೆ. ನಿನ್ನೆ ರಾತ್ರಿ ಬಸ್ ಮೇಲೆ ಕಲ್ಲುತೂರಾಟ ನಡೆಸಿದ್ದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಚಲಿಸುತ್ತಿದ್ದ ವೋಲ್ವೋ ಬಸ್‌ಗೆ ಕಾರು ಡಿಕ್ಕಿ, ಓರ್ವ ದುರ್ಮರಣ ಚಲಿಸುತ್ತಿದ್ದ ವೋಲ್ವೋ ಬಸ್‌ಗೆ ಕಾರು ಡಿಕ್ಕಿ ಆಗಿ ಓರ್ವ ದುರ್ಮರಣವನ್ನಪ್ಪಿದ ದುರ್ಘಟನೆ ನಿನ್ನೆ (ನವೆಂಬರ್ 14) ಸಂಭವಿಸಿದೆ. ನಿನ್ನೆ ರಾತ್ರಿ ಸಂಭವಿಸಿದ್ದ ಅಪಘಾತ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಚಿಕ್ಕಜಾಲ ಫ್ಲೈಓವರ್ ಬಳಿ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ ಖಾಸಗಿ ಕಂಪನಿ ಉದ್ಯೋಗಿ ಭವಿನ್‌ ಶರ್ಮಾ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಭವಿನ್‌ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಆಕಾಶ್‌ ಸಿಂಗ್‌, ಚಾಲಕ ರವಿಕುಮಾರ್‌ಗೆ ಗಾಯವಾಗಿದೆ. ಗಂಭೀರ ಗಾಯಾಳುಗಳಿಗೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ರಾಯಚೂರು: ಹಟ್ಟಿ ಚಿನ್ನದ ಗಣಿಯಲ್ಲಿ ಭಾರಿ ಅಗ್ನಿ ಅವಘಡ

ಇದನ್ನೂ ಓದಿ: ಬೆಂಗಳೂರು: ಕಳ್ಳಸಾಗಣೆ ಮಾಡುತ್ತಿದ್ದ 170 ನಕ್ಷತ್ರ ಆಮೆಗಳ ರಕ್ಷಣೆ

Published On - 6:29 pm, Sun, 14 November 21