ರಾಯಚೂರು: ಹಟ್ಟಿ ಚಿನ್ನದ ಗಣಿಯಲ್ಲಿ ಭಾರಿ ಅಗ್ನಿ ಅವಘಡ

ಬೆಂಕಿ ಅವಘಡದ ಸ್ಥಳದ ಪಕ್ಕದಲ್ಲೇ ಮದ್ದಿನ ಮನೆ ಇರುವುದರಿಂದ ಅಪಾಯ ಹೆಚ್ಚಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ‌ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕಳೆದ ಎರಡು ಗಂಟೆಯಿಂದ ಬೆಂಕಿ ಹೊತ್ತಿ ಉರಿಯುತ್ತಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಯಚೂರು: ಹಟ್ಟಿ ಚಿನ್ನದ ಗಣಿಯಲ್ಲಿ ಭಾರಿ ಅಗ್ನಿ ಅವಘಡ
ಹಟ್ಟಿ ಚಿನ್ನದ ಗಣಿಯಲ್ಲಿ ಭಾರಿ ಅಗ್ನಿ ಅವಘಡ
Follow us
TV9 Web
| Updated By: ganapathi bhat

Updated on:Nov 14, 2021 | 5:46 PM

ರಾಯಚೂರು: ಹಟ್ಟಿ ಚಿನ್ನದ ಗಣಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅವಘಡದಲ್ಲಿ 500ಕ್ಕೂ ಹೆಚ್ಚು ಹಳೆ ಟೈರ್​ಗಳು ಭಸ್ಮವಾಗಿವೆ. ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಘಟನೆ ನಡೆದಿದೆ. ಶಾಫ್ಟ್​​ನಲ್ಲಿ ಕಸಕ್ಕೆ ಹಚ್ಚಿದ ಬೆಂಕಿಯಿಂದ ಅಗ್ನಿ ಅವಘಡ ಉಂಟಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಬೆಂಕಿ ಅವಘಡದ ಸ್ಥಳದ ಪಕ್ಕದಲ್ಲೇ ಮದ್ದಿನ ಮನೆ ಇರುವುದರಿಂದ ಅಪಾಯ ಹೆಚ್ಚಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ‌ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕಳೆದ ಎರಡು ಗಂಟೆಯಿಂದ ಬೆಂಕಿ ಹೊತ್ತಿ ಉರಿಯುತ್ತಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚಾಮರಾಜನಗರ, ಮಡಿಕೇರಿ, ಚಿಕ್ಕಮಗಳೂರು ಭಾಗದಲ್ಲಿ ಮಳೆ ಚಾಮರಾಜನಗರ ಜಿಲ್ಲೆಯಾದ್ಯಂತ ಮತ್ತೆ ಮಳೆ ಆರಂಭವಾಗಿದೆ. ಬೆಳಗ್ಗೆಯಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು ಮದ್ಯಾಹ್ನದ ನಂತರ ಮಳೆ ಆರಂಭವಾಗಿದೆ. ಮಳೆಯಿಂದಾಗಿ ಓಡಾಡಲು ಸಾರ್ವಜನಿಕರ ಪರದಾಟ ಪಟ್ಟಿದ್ದಾರೆ. ಬೆಳಗ್ಗೆ ಬಿಸಿಲು ಬರುತ್ತಿದ್ದರಿಂದ ಛತ್ರಿ ಬಿಟ್ಟು ಬಂದಿದ್ದ ಜನರು ದಿಢೀರನೆ ಆರಂಭವಾದ ಮಳೆಯಿಂದಾಗಿ ಮನೆಗೆ ಹೋಗಲು ಪರದಾಟ ಪಟ್ಟಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕೊಡಗು ಜಿಲ್ಲೆಯಾದ್ಯಂತ ವರುಣನ ಅಬ್ಬರ ಹೆಚ್ಚಾಗಿದೆ. ಮಧ್ಯಾಹ್ನದ ಬಳಿಕ‌ ಬಿರುಸು ಪಡೆದ‌ ಮಳೆ ಜೋರಾಗಿ ಸುರಿಯುತ್ತಿದೆ. ಭಾರೀ ಮಳೆಗೆ ಕೌಟುಂಬಿಕ ಕ್ರೀಡಾಕೂಟ ಅಸ್ತವ್ಯಸ್ತವಾಗಿದೆ. ಕ್ರೀಡಾಂಗಣಗಳು ಕೆಸರು ಗದ್ದೆಯಂತಾಗಿದೆ. ಕಾಫಿ ಕೊಯ್ಲು ಕೆಲಸಕ್ಕೂ ತೀವ್ರ ಅಡ್ಡಿ ಉಂಟಾಗಿದೆ. ಮಳೆಯಿಂದಾಗಿ ಕಾಫಿ ಬೆಳೆಗಾರರು ಪರದಾಡ್ತಾ ಇದ್ದಾರೆ. ಭತ್ತದ ಬೆಳೆಯೂ ನೆಲ ಕಚ್ಚುವ ಆತಂಕ ಹೆಚ್ಚಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಜೋರಾಗಿದೆ. ಕಳಸ ತಾಲೂಕಿನ ಬಾಳೆಹೊಳೆ ಸುತ್ತಮುತ್ತ‌ ಧಾರಾಕಾರ ಮಳೆ ಆಗಿದೆ. ಕಾಫಿ ತೋಟಗಳಲ್ಲಿಂದ ಹೊಳೆಯಂತೆ ಹರಿದು ಬರುತ್ತಿರುವ ಭಾರಿ ಪ್ರಮಾಣದ ನೀರು, ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲಿ, ಜಮೀನುಗಳಲ್ಲಿ ಪ್ರವಾಹದ ರೂಪದಲ್ಲಿ ಮಳೆ ನೀರು ಹರಿಯುತ್ತಿದೆ.

ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಭೀಕರ ಅಗ್ನಿ ದುರಂತ; ರಸ್ತೆ ಬದಿಯಲ್ಲಿದ್ದ 30 ಗುಡಿಸಲುಗಳು ಸಂಪೂರ್ಣ ಭಸ್ಮ

ಇದನ್ನೂ ಓದಿ: ರಬಕವಿ-ಬನಹಟ್ಟಿಯಲ್ಲಿ ಕಿರಾಣಾ ಅಂಗಡಿಯೊಂದು ಸುಟ್ಟು ಹೋಗುತ್ತಿದ್ದರೂ ಅಗ್ನಿಶಾಮಕ ದಳಕ್ಕೆ ಯಾರೋ ಫೋನ್ ಮಾಡಲ್ಲ!

Published On - 5:03 pm, Sun, 14 November 21